ರಂಗಾಯಣ ರಘು ಹುಟ್ಟುಹಬ್ಬಕ್ಕೆ ಭಟ್ಟರ ಶುಭಾಶಯ
ನಟ ರಂಗಾಯಣ ರಘು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಂಗಾಯಣ ರಘು ಹುಟ್ಟುಹಬ್ಬಕ್ಕೆ ನಿರ್ದೇಶಕ ಯೋಗರಾಜ್ ಭಟ್ ಶುಭಾಶಯವನ್ನು ತಿಳಿಸಿದ್ದಾರೆ.
ತಮ್ಮ ಫೇಸ್ ಬುಕ್ ಖಾತೆಯಲ್ಲಿ ರಂಗಾಯಣ ರಘು ಅವರಿಗೆ ನಾಲ್ಕು ಸಾಲುಗಳ ಮೂಲಕ ವಿಶ್ ಮಾಡಿದ್ದಾರೆ. ''ಅಪಾರ ಜೀವನಾಸಕ್ತಿ, ಅಪರಿಮಿತ ಸ್ನೇಹ, ಅಸಾಧಾರಣ ಪ್ರತಿಭೆ, ಅದ್ವಿತೀಯ ವ್ಯಕ್ತಿತ್ವ, ಅಚ್ಚಗನ್ನಡ ನಟ ರಂಗಾಯಣ ರಘು ಅವರಿಗೆ ಹುಟ್ಟುಹಬ್ಬದ ಕೋಟಿ ಕೋಟಿ ಶುಭಾಶಯಗಳು.'' ಎಂದು ಭಟ್ಟರು ಬರೆದುಕೊಂಡಿದ್ದಾರೆ.

ಯೋಗರಾಜ್ ಭಟ್ ಹಾಗೂ ರಂಗಾಯಣ ರಘು ಕಾಂಬಿನೇಶನ್ ನಲ್ಲಿ ಅನೇಕ ಸಿನಿಮಾಗಳು ಬಂದಿವೆ. ಇತ್ತೀಚಿಗಷ್ಟೆ 'ಪಂಚತಂತ್ರ' ಸಿನಿಮಾದಲ್ಲಿ ರಂಗಪ್ಪನ ಪಾತ್ರದಲ್ಲಿ ರಂಗಾಯಣ ರಘು ಮಿಂಚಿದ್ದರು. ಸಿನಿಮಾಗೆ ಅವರ ನಟನೆ ಪ್ಲಾಸ್ ಆಗಿತ್ತು.

ಮತ್ತೊಂದು ಕಡೆ 'ಪುಕ್ಸಟ್ಟೆ ಲೈಫು' ಸಿನಿಮಾದ ಪೋಸ್ಟರ್ ರಂಗಾಯಣ ರಘು ಬರ್ತ್ ಡೇ ವಿಶೇಷ ಹೊರ ಬಂದಿದೆ. ಈ ಸಿನಿಮಾವನ್ನು ಅರವಿಂದ್ ಕುಪ್ಲೀಕರ್ ನಿರ್ದೇಶನ ಮಾಡುತ್ತಿದ್ದಾರೆ. ಸಂಚಾರಿ ವಿಜಯ್ ಚಿತ್ರದ ನಾಯಕನಾಗಿದ್ದಾರೆ.
More from Filmibeat
English summary
Kannada director Yogaraj Bhat wishes for Rangayana Raghu birthday. Rangayana Raghu is a popular kannada actor, he is also worked with Yogaraj Bhat.


Click it and Unblock the Notifications











