»   » ಅಧಿಕೃತ ಘೋಷಣೆ ಹೊರಡಿಸಿದ ಯೋಗರಾಜ್ ಭಟ್

ಅಧಿಕೃತ ಘೋಷಣೆ ಹೊರಡಿಸಿದ ಯೋಗರಾಜ್ ಭಟ್

Posted By:
Subscribe to Filmibeat Kannada

ಕನ್ನಡ ಸಿನಿಮಾರಂಗದ ಸ್ಟಾರ್ ನಿರ್ದೇಶಕ ಯೋಗರಾಜ್ ಭಟ್ ಅಧಿಕೃತ ಘೋಷಣೆ ಹೊರಡಿಸಿದ್ದಾರೆ. ಭಟ್ರು ಹೇಳುತ್ತಿರುವ ವಿಚಾರ ಸಿನಿಮಾಗೆ ಸಂಬಂಧ ಪಟ್ಟಿದಲ್ಲ. ವಯಕ್ತಿಕ ವಿಚಾರಕ್ಕೆ ಸಂಬಂಧ ಪಟ್ಟದ್ದು. ಹೌದು ಯೋಗರಾಜ್ ಭಟ್ ಅವರ ಫೋಟೋವನ್ನು ರಾಜಕೀಯವಾಗಿ ಉಪಯೋಗ ಮಾಡಿಕೊಳ್ಳುತ್ತಿದ್ದಾರಂತೆ. ಆದ್ದರಿಂದ ಈ ಘೋಷಣೆಯನ್ನ ಹೊರಡಿಸಿದ್ದಾರೆ.

ತಮ್ಮ ಟ್ವಿಟ್ಟರ್ ಮತ್ತು ಫೇಸ್ ಬುಕ್ ಖಾತೆಯಲ್ಲಿ "ನನ್ನ ಫೋಟೋವನ್ನು ರಾಜಕೀಯವಾಗಿ ಬಳಸಿರುವುದು ಕಂಡು ಬಂದಿದೆ ಹಾಗಾಗಿ ನನ್ನ ನಿಲುವನ್ನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ. ನಾನು ನಿಷ್ಪಕ್ಷಪಾತಿ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ, ಯಾವುದಾದರೂ ಸರ್ಕಾರದ ಕೆಲಸ ಇದ್ದರೆ ಮಾಡುತ್ತೇನೆ ಹೊರತು ನಾನು ಯಾರ ಪರವೂ ಅಲ್ಲ, ವಿರೋಧಿಯೂ ಅಲ್ಲ. ಜೈ ಭಾರತಾಂಬೆ ಜೈ ಕರ್ನಾಟಕ ಜೈ ಹಿಂದ್ ಜೈ ಮುಂದ್" ಎಂದು ಬರೆದುಕೊಂಡಿದ್ದಾರೆ.

Yogaraj Bhat written in Facebook I am not an impartial and belonging to any political party.

ಎರಡನೇ ಬಾರಿ 'ತೆನೆ ಹೊತ್ತ' ನಟಿ ಪೂಜಾ ಗಾಂಧಿ

ಭಟ್ಟರು ಹಾಗೂ ಅವರ ತಂಡ ಸೇರಿ ಇತ್ತೀಚಿಗಷ್ಟೆ ಮತದಾನದ ಕುರಿತಾಗಿ ಸರ್ಕಾರಕ್ಕೆ ಹಾಡನ್ನು ಚಿತ್ರೀಕರಿಸಿಕೊಟ್ಟಿದ್ದರು. ಇದೇ ಕಾರಣಕ್ಕೆ ಕೆಲವು ಜನರು ಭಟ್ಟರು ರಾಜಕೀಯ ಪಕ್ಷ ಸೇರುತ್ತಾರೆ ಎಂದುಕೊಂಡಿದ್ದಾರೆ.

Yogaraj Bhat written in Facebook I am not an impartial and belonging to any political party.

ಈ ರೀತಿಯ ಸ್ಟೇಟಸ್ ಹಾಕುವ ಮೂಲಕ ಯೋಗರಾಜ್ ಭಟ್ ತಮ್ಮ ನಿಲುವನ್ನ ಅಭಿಮಾನಿಗಳಿಗೆ ಮತ್ತು ಸಾಮಾನ್ಯ ಜನರಿಗೆ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ನನ್ನ ಪೋಟೋವನ್ನ ಯಾವುದೇ ಪಕ್ಷದವರು ಬಳಸಿಕೊಳ್ಳಬೇಡಿ ಎಂದು ಇನ್‌ಡೈರೆಕ್ಟರ್ ಆಗಿ ರಾಜಕೀಯ ವ್ಯಕ್ತಿಳಿಗೂ ತಿಳಿಸಿದ್ದಾರೆ.

ರಾಜಕೀಯ 'ರಣರಂಗ'ದಲ್ಲಿ ಕಾದಾಡಲಿರುವ ಸಿನಿಮಾ ಮಂದಿ ಇವರೇ

English summary
Kannada director Yogaraj Bhat's photo has been used politically. So that Yogaraj Bhat has written in the Facebook "I am not an impartial and belonging to any political party.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X