For Quick Alerts
  ALLOW NOTIFICATIONS  
  For Daily Alerts

  'ಈ ಬಾಲಕ ಇವತ್ತಿನವರೆಗೂ ಹಾಡುತ್ತಲೇ ಇದ್ದಾನೆ': ಸ್ಟಾರ್ ಗಾಯಕನ ಅಪರೂಪದ ವಿಡಿಯೋ ಹಂಚಿಕೊಂಡ ಭಟ್ರು

  |

  ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಅಪರೂಪದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಪುಟ್ಟ ಬಾಲಕನೊಬ್ಬ ಅದ್ಭುತವಾಗಿ ಹಾಡುತ್ತಿರುವ ವಿಡಿಯೋ ಇದಾಗಿದೆ.

  ಈ ವಿಡಿಯೋ ನೋಡಿದ ಪ್ರತಿಯೊಬ್ಬರು 'ಆಹಾ ಎಷ್ಟು ಅದ್ಭುತವಾಗಿದೆ, ಈ ಬಾಲಕನ ಧ್ವನಿಯಲ್ಲಿ ಹಾಡು ಕೇಳುವುದೆ ಚಂದ' ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಭಟ್ಟರು ಹೇಳಿದ ಹಾಗೆ ಈ ಪುಟ್ಟ ಬಾಲಕ ಅಂದಿನಿಂದ ಇಂದಿಗೂ ಹೀಗೆ ಹಾಡುತ್ತಲೆ ಇದ್ದಾರೆ. ಇಂದು ಸ್ಟಾರ್ ಗಾಯಕನಾಗಿ ಮಿಂಚುತ್ತಿರುವ ಇವರು ಕನ್ನಡದ ಅಪ್ಪಟ ಪ್ರತಿಭೆ. ಆಸ್ಕರ್ ಗೆದ್ದು ದೇಶ-ವಿದೇಶದಲ್ಲಿ ಖ್ಯಾತಿಗಳಿಸಿರುವ ಇವರು ಕನ್ನಡಿಗರ ನೆಚ್ಚಿನ, ಹೆಮ್ಮೆಯ ಗಾಯಕರಾಗಿದ್ದಾರೆ. ಮುಂದೆ ಓದಿ..

  ಕೊರೊನಾ ವಿರುದ್ಧ ಹೋರಾಟಕ್ಕೆ ವಿಜಯ್ ಪ್ರಕಾಶ್ ದೇಣಿಗೆ: ಧನ್ಯವಾದ ತಿಳಿಸಿದ ಸಿಎಂಕೊರೊನಾ ವಿರುದ್ಧ ಹೋರಾಟಕ್ಕೆ ವಿಜಯ್ ಪ್ರಕಾಶ್ ದೇಣಿಗೆ: ಧನ್ಯವಾದ ತಿಳಿಸಿದ ಸಿಎಂ

  ಈ ಪುಟ್ಟ ಬಾಲಕ ಈಗ ಜಗಮೆಚ್ಚಿದ ಗಾಯಕ

  ಈ ಪುಟ್ಟ ಬಾಲಕ ಈಗ ಜಗಮೆಚ್ಚಿದ ಗಾಯಕ

  ನಿರ್ದೇಶಕ ಯೋಗರಾಜ್ ಭಟ್ ಹಂಚಿಕೊಂಡಿರುವ ಅಪರೂಪದ ವಿಡಿಯೋದಲ್ಲಿ ಇರುವುದು ಮತ್ಯಾರು ಅಲ್ಲ ಖ್ಯಾತ ಗಾಯಕ ವಿಜಯ್ ಪ್ರಕಾಶ್. ಸಂಗೀತದ ಕಡೆ ಅಪಾರ ಆಸಕ್ತಿ ಹೊಂದಿದ್ದ ವಿಜಯ್ ಪ್ರಕಾಶ್ ಪುಟ್ಟ ಹುಡುಗನಾಗಿದ್ದಾಗಲೆ ಹಾಡುವುದರಲ್ಲಿ ನಿಫುಣರಾಗಿದ್ದರು. ಸಂಗೀತ ಅವರಿಗೆ ರಕ್ತಗತವಾಗಿಯೆ ಬಂದಿದೆ. ಅವರ ತಂದೆ ರಾಮಶೇಷ ಅವರು ಸಂಗೀತ ಪಂಡಿತರಾಗಿದ್ದರು. ಅವರ ಮಾರ್ಗದರ್ಶನದಲ್ಲಿಯೆ ವಿಜಯ್ ಪ್ರಕಾಶ್ ಶಾಸ್ತ್ರೀಯ ಸಂಗೀತವನ್ನು ಮೈಗೂಡಿಸಿಕೊಂಡಿದ್ದರು.

  1987ರಲ್ಲಿ ವಿಜಯ್ ಪ್ರಕಾಶ್ ಹಾಡಿರುವ ವಿಡಿಯೋವಿದು

  1987ರಲ್ಲಿ ವಿಜಯ್ ಪ್ರಕಾಶ್ ಹಾಡಿರುವ ವಿಡಿಯೋವಿದು

  ಸದ್ಯ ಯೋಗರಾಜ್ ಭಟ್ ಹಂಚಿಕೊಂಡಿರುವ ವಿಡಿಯೋ ಪುಟ್ಟ ಬಾಲಕ ವಿಜಯ್ ಪ್ರಕಾಶ್ 1987ರಲ್ಲಿ ಹಾಡಿರುವ ವಿಡಿಯೋ ಇದಾಗಿದೆ. ಮೈಸೂರಿನ ಲಲಿಥ್ ಪ್ಯಾಲೇಸ್ ನಲ್ಲಿ ಕುಳಿತು ವಿಜಯ್ ಪ್ರಕಾಶ್ ಹಾಡಿರುವ ಹಾಡು ಈಗ 30 ವರ್ಷಗಳ ಬಳಿಕ ವೈರಲ್ ಆಗಿದೆ.

  ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕರಿವರು!ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕರಿವರು!

  ಯೋಗರಾಜ್ ಭಟ್ ಹೇಳಿದ್ದೇನು?

  ನಿರ್ದೇಶಕ ಯೋಗರಾಜ್ ಭಟ್ ಇನ್ಸ್ಚಾಗ್ರಾಮ್ ನಲ್ಲಿ ವಿಡಿಯೋ ಶೇರ್ ಮಾಡಿ "ಶ್ರೀ ವಿಜಯ್ ಪ್ರಕಾಶ್ ಈ ಬಾಲಕ ಆವತ್ತಿಂದ ಇವತ್ತಿನವರೆಗೂ ಹಾಡ್ತಾನೇ ಇದಾನೆ. ನೋಡಿ ಸ್ವಾಮಿ. ಜೈ ಹೋ." ಎಂದು ಬರೆದುಕೊಂಡಿದ್ದಾರೆ.

  1996ರಲ್ಲಿ ಮುಂಬೈಗೆ ತೆರಳಿದ ವಿಜಯ್ ಪ್ರಕಾಶ್

  1996ರಲ್ಲಿ ಮುಂಬೈಗೆ ತೆರಳಿದ ವಿಜಯ್ ಪ್ರಕಾಶ್

  ವಿಜಯ್ ಪ್ರಕಾಶ್ ಕನ್ನಡ ಮತ್ತು ಹಿಂದಿ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಮತ್ತು ಮರಾಠಿ ಭಾಷೆಯ ಹಾಡುಗಳನ್ನು ಹಾಡಿದ್ದಾರೆ. ಚಿಕ್ಕವರಾಗಿದ್ದಾಗನೆ ಅಂದರೆ 1996ರಲ್ಲಿ ಕರ್ನಾಟಕದಿಂದ ಮುಂಬೈಗೆ ತೆರಳುತ್ತಾರೆ. ಅಲ್ಲಿ ವಿಜಯ್ ಪ್ರಕಾಶ್ ಸುರೇಶ್ ವಾಡ್ಕರ್ ಅವರ ವಿದ್ಯಾರ್ಥಿಯಾಗಿ ಸೇರಿಕೊಂಡು, ಅವರ ಬಳಿ ಸಂಗೀತ ಅಭ್ಯಾಸ ಮುಂದುವರೆಸುತ್ತಾರೆ.

  ಮೊದಲ ಹಿಂದಿ ಹಾಡು

  ಮೊದಲ ಹಿಂದಿ ಹಾಡು

  ಮುಂಬೈನಲ್ಲಿ ತುಂಬಾ ಕಷ್ಟದಿನಗಳನ್ನು ಕಳೆದ ವಿಜಯ್ ಪ್ರಕಾಶ್ ಮೊದಲ ಬಾರಿಗೆ ಹಿಂದಿ ಸಿನಿಮಾದಲ್ಲಿ ಹಾಡುವ ಅವಕಾಶ ಪಡೆದಿಕೊಳ್ಳುತ್ತಾರೆ. 2002ರಲ್ಲಿ ಸುನಿಲ್ ಶೆಟ್ಟಿ ನಾಯಕನಾಗಿ ಅಭಿನಯಿಸಿರುವ ಬಾಜ್ ಚಿತ್ರದಲ್ಲಿ ವಿಜಯ್ ಪ್ರಕಾಶ್ ಹಿನ್ನಲೆ ಗಾಯಕರಾಗಿ ಬಡ್ತಿ ಪಡೆಯುತ್ತಾರೆ. ಆ ನಂತರ ಸಂಗೀತ ಮಾಂತ್ರಿಕ ಎ ಆರ್ ರಹಮಾನ್ ಸಂಗೀತ ಸಂಯೋಜನೆಯ ಸ್ವದೇಶ್ ಚಿತ್ರದಲ್ಲಿ ಹಾಡುತ್ತಾರೆ. ವಿಜಯ್ ಪ್ರಕಾಶ್ ದ್ವನಿಗೆ ಮಾರುಹೋದ ರಹಮಾನ್ ಅದೆ ಸಮಯದಲ್ಲಿ ತಮಿಳು ಚಿತ್ರದ ಹಾಡನ್ನು ಹಾಡಿಸುತ್ತಾರೆ.

  ಜೈ ಹೋ ಹಾಡಿನ ಮೂಲಕ ವಿಶ್ವ ಮಟ್ಟದ ಖ್ಯಾತಿ

  ಜೈ ಹೋ ಹಾಡಿನ ಮೂಲಕ ವಿಶ್ವ ಮಟ್ಟದ ಖ್ಯಾತಿ

  ಜೈ ಹೋ ಹಾಡಿನ ಮೂಲಕ ವಿಜಯ್ ಪ್ರಕಾಶ್ ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಾರೆ. ಸುಖ್ವಿಂದರ್ ಸಿಂಗ್ ಹಾಡಿರುವ ಜೈ ಹೋ ಹಾಡಿನಲ್ಲಿ ವಿಜಯ್ ಪ್ರಕಾಶ್ ಕೋರಸ್ ಹಾಡಿದ್ದಾರೆ. ಈ ಹಾಡು ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಗಾಯಕ ವಿಜಯ್ ಪ್ರಕಾಶ್ ಆಸ್ಕರ್ ಗೆದ್ದ ಖುಷಿಯನ್ನು ಇಡೀ ಕರ್ನಾಟಕ ಸಂಭ್ರಮಿಸುತ್ತೆ. ವಿಜಯ್ ಪ್ರಕಾಶ್ ಖ್ಯಾತಿ ಮತ್ತಷ್ಟು ಹೆಚ್ಚಾಗುತ್ತೆ.

  ವಿಜಯ ಪ್ರಕಾಶ್ ಗಾಗಿ ಜಿಲ್ಲಾಧಿಕಾರಿ ಮತ್ತು ಶಾಸಕನ ನಡುವೆ ಕಿತ್ತಾಟವಿಜಯ ಪ್ರಕಾಶ್ ಗಾಗಿ ಜಿಲ್ಲಾಧಿಕಾರಿ ಮತ್ತು ಶಾಸಕನ ನಡುವೆ ಕಿತ್ತಾಟ

  "ಕವಿತೆ ಕವಿತೆ..." ಮೊದಲ ಕನ್ನಡ ಹಾಡು

  ವಿಜಯ್ ಪ್ರಕಾಶ್ ಮೊದಲ ಕನ್ನಡ ಹಾಡು ಗಾಳಿಪಟ ಚಿತ್ರದ ಕವಿತೆ ಕವಿತೆ ಹಾಡು. ಯೋಗರಾಜ್ ಭಟ್ ನಿರ್ದೇಶನದ 'ಗಾಳಿಪಟ' ಚಿತ್ರದಲ್ಲಿ ವಿಜಯ್ ಪ್ರಕಾಶ್ ಮೊದಲ ಕನ್ನಡ ಹಾಡನ್ನು ಹಾಡುತ್ತಾರೆ. ಜೊತೆಗೆ ಕಿರುತೆರೆಯಲ್ಲಿ ಸ್ಟಾರ್ ಸಿಂಗರ್ ಗಾಯನ ಶೋಗೆ ಜಡ್ಜ್ ಆಗಿ ಕನ್ನಡಿಗ ಮುಂದೆ ಬರುತ್ತಾರೆ. ಈ ಮೂಲಕ ಕನ್ನಡಿಗರ ಮನೆ ಮಾತಾಗಿದ್ದಾರೆ. ಆ ನಂತರ ವಿಜಯ್ ಪ್ರಕಾಶ್ ಸಾಕಷ್ಟು ಜನಪ್ರಿಯ ಹಾಡುಗಳನ್ನು ಹಾಡಿದ್ದಾರೆ. ಸದ್ಯ 'ಸ ರಿ ಗ ಮ ಪ' ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಮಿಂಚುತ್ತಿದ್ದಾರೆ.

  English summary
  Director Yogaraj Bhatt shares a Vijay Prakash singing old video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X