»   » ಭಟ್ಟರು ಬರೆದ GST ಹಾಡು ನೋಡಿ: ವಿಜಿ-ಗಣೇಶ್ ಸಿಂಗಿಂಗ್

ಭಟ್ಟರು ಬರೆದ GST ಹಾಡು ನೋಡಿ: ವಿಜಿ-ಗಣೇಶ್ ಸಿಂಗಿಂಗ್

Posted By:
Subscribe to Filmibeat Kannada

ಸಮಾಜದಲ್ಲಿನ ವಿದ್ಯಮಾನಗಳ ಅನುಗುಣವಾಗಿ ಆಗಾಗ ಹಾಡುಗಳನ್ನ ಬರೆಯುವ ನಿರ್ದೇಶಕ ಯೋಗರಾಜ್ ಭಟ್ಟರು, ಈಗ ಕೇಂದ್ರ ಸರ್ಕಾರ ಜಾರಿ ತಂದಿರುವ GST (ಸರುಕು ಮತ್ತು ಸೇವಾ ತೆರಿಗೆ) ಕುರಿತು ಒಂದು ಹೊಸ ಹಾಡು ಬರೆದಿದ್ದಾರೆ.

ಈ ಹಾಡನ್ನ ಕನ್ನಡದ ಸ್ಟಾರ್ ನಟರಾದ ದುನಿಯಾ ವಿಜಯ್, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಖ್ಯಾತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರಿಂದ ಹಾಡಿದ್ದು, ಈಗ ಟ್ರೆಂಡ್ ಸೃಷ್ಠಿಸುತ್ತಿದೆ.

Yogaraj Bhatt Write A Song On GST

''ಊಟಕ್ಕೆ ಟ್ಯಾಕ್ಸು.. ವಾಂತಿಗೂ ಟ್ಯಾಕ್ಸು..ಹುಟ್ಟು ಚಟ್ಟಕೆ ತೆರಿಗೆ ಫಿಕ್ಸ್'' ಅಂತ ಭಟ್ಟರು ತಮ್ಮದೇ ಸ್ಟೈಲ್ ನಲ್ಲಿ ಹಾಡನ್ನು ಗೀಚಿದ್ದಾರೆ. 'ಮಗುಳುನಗೆ' ಸಿನಿಮಾದ 'ಹೊಡಿ ಒಂಬತ್ತ್..' ಎಂಬ ಹಾಡಿನ ದಾಟಿಗೆ ಈ ಹಾಡನ್ನು ಬರೆದಿದ್ದಾರಂತೆ.

'GST' ಬಗ್ಗೆ ಹಾಡು ಬರೆದವ್ರೆ ಯೋಗರಾಜ್ ಭಟ್ರು

ಈ ಹಿಂದೆ 'ದನಕಾಯೋನು' ಸಿನಿಮಾದ ಸಮಯದಲ್ಲಿ ಕಾವೇರಿ ವಿಷಯವಾಗಿ ಯೋಗರಾಜ್ ಭಟ್ ಇದೇ ರೀತಿ ಹಾಡು ಬರೆದಿದ್ದರು. ಆ ಹಾಡನ್ನ ನಟ ದುನಿಯಾ ವಿಜಯ್ ಹಾಡಿದ್ದರು. ಈಗ ಅದೇ ರೀತಿ GST ಕಾಯಿದೆಯನ್ನ ವ್ಯಂಗ್ಯ ಮಾಡಿ ಹಾಡು ಬರೆದಿರುವ ಭಟ್ಟರು GSTಯಿಂದ ಆಗುವ ಅನುಕೂಲ ಮತ್ತು ಅನಾನುಕೂಲದ ಬಗ್ಗೆ ಚರ್ಚೆ ಮಾಡಿದ್ದಾರೆ.

ಶೂಟಿಂಗ್ ಮುಗಿಸಿ ಕುಂಬಳಕಾಯಿ ಒಡೆದ 'ಮುಗುಳುನಗೆ'

Yogaraj Bhatt Write A Song On GST

ಸದ್ಯ, ಗಣೇಶ್ ಅಭಿನಯದ 'ಮುಗುಳುನಗೆ' ಚಿತ್ರವನ್ನ ನಿರ್ದೇಶನ ಮಾಡಿರುವ ಯೋಗರಾಜ್ ಭಟ್ ಅವರು, ಸಂಪೂರ್ಣ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದಾರೆ. ಇನ್ನು ಗಣೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಜುಲೈ 2 ರಂದು 'ಮುಗುಳುನಗೆ' ಚಿತ್ರದ ಆಡಿಯೋ ಬಿಡುಗಡೆ ಮಾಡಲಿದ್ದಾರೆ.

ಈ ಹಾಡು ಕೇಳಲು ಈ ಲಿಂಕ್ ಗಳನ್ನ ಕ್ಲಿಕ್ ಮಾಡಿ

English summary
Kannada Director Yogaraj Bhatt Write A Song On GST and Kannada Actor Duniya Vijay, Ganesh and V Harikrishna Sing The Song.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada