ಗೆಲುವಿನ ವಿಶ್ವಾಸದಲ್ಲಿ ಈ ವಾರ 'ಲಂಬೋದರ'ನ ಆಗಮನ
'ದುನಿಯಾ-2' ಚಿತ್ರದ ನಂತರ ಲೂಸ್ ಮಾದ ಯೋಗೇಶ್ ಲಂಬೋದರನಾಗಿ ತೆರೆಮೇಲೆ ಬರ್ತಿದ್ದಾರೆ. ಈಗಾಗಲೇ ಟ್ರೈಲರ್ ಮೂಲಕ ಕರ್ನಾಟಕದ ಮನೆ ಮನೆಯೂ ತಲುಪಿರುವ 'ಲಂಬೋದರ' ಜನವರಿ 11ರಂದು ಎಲ್ಲರನ್ನ ಥಿಯೇಟರ್ ಗೆ ಬರಮಾಡಿಕೊಳ್ಳುತ್ತಿದ್ದಾನೆ.
ಔಟ್ ಅಂಡ್ ಔಟ್ ಮನರಂಜನೆ ಮೂಲಕ ಪ್ರೇಕ್ಷಕರನ್ನ ರಂಜಿಸಲು ಸಿದ್ಧವಾಗಿರುವ ಯೋಗಿ ಅಂಡ್ ಟೀಂ ಈ ಸಲ ಗೆದ್ದೇ ಗೆಲ್ಲುವೆ ಎಂಬ ಭರವಸೆಯಲ್ಲಿದೆ. ಚಿತ್ರದ ಟೀಸರ್, ಟ್ರೈಲರ್ ಗೆ ಸಿಕ್ಕ ರೆಸ್ಪಾನ್ಸ್ ನೋಡಿದ್ರೆ ಲಂಬೋದರ ಸಿಕ್ಸರ್ ಬಾರಿಸುವ ಎಲ್ಲ ಲಕ್ಷಣಗಳಿವೆ.
ಕೆ.ಕೃಷ್ಣರಾಜ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು ವಿಶ್ವೇಶರ್, ರಾಘವೇಂದ್ರ ಭಟ್ ನಿರ್ಮಾಣ ಮಾಡಿದ್ದಾರೆ. ಲೂಸ್ ಮಾದ ಯೋಗಿ ನಾಯಕನಾಗಿರುವ ಈ ಚಿತ್ರದಲ್ಲಿ ಆಕಾಂಕ್ಷ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನುಳಿದಂತೆ ಅಚ್ಯುತ್ ಕುಮಾರ್, ಧರ್ಮಣ್ಣ, ಭೂಮಿಕಾ ಶೆಟ್ಟಿ, ಸಿದ್ದು ಮೂಲಿ ಮನಿ ಸೇರಿದಂತೆ, ಪ್ರತಿಭಾವಂತ ತಾರಾಬಳಗ ಲಂಬೋದರನಿಗೆ ಸಾಥ್ ನೀಡಿದ್ದಾರೆ.
More from Filmibeat
English summary
Loosemada yogesh starrer Lambodara movie will release on 11th january. the movie directed by k krishnaraj.


Click it and Unblock the Notifications











