For Quick Alerts
  ALLOW NOTIFICATIONS  
  For Daily Alerts

  ಕೊನೆಗೂ ತೆರೆಮೇಲೆ ಬರ್ತಿದೆ ಯೋಗಿಯ 'ದುನಿಯಾ'

  By Bharath Kumar
  |

  ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಯೋಗಿ ಅಭಿನಯದ 'ದುನಿಯಾ' ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ, ಟೈಟಲ್ ಸಮಸ್ಯೆಯಿಂದ ತಡವಾಗಿತ್ತು. ನಂತರ ಚಿತ್ರದ ಹೆಸರು ಬದಲಾಯಿಸಿಕೊಂಡು, ಈಗ ಸೆನ್ಸಾರ್ ಮುಗಿಸಿಕೊಂಡು ತೆರೆಗೆ ಬರಲು ಸಜ್ಜಾಗಿದೆ.

  ಮೊದಲು ಈ ಚಿತ್ರಕ್ಕೆ ದುನಿಯಾ-2' ಎಂದು ಹೆಸರಿಡಲಾಗಿತ್ತು. ಆದರೆ, ಆ ಟೈಟಲ್ ಬೇರೆ ಸಿನಿಮಾಗೆ ಬಳಸಿದ್ದರಿಂದ ಅದು ಸಾಧ್ಯವಾಗಲಿಲ್ಲ. ಅಂದ್ಹಾಗೆ, ಸೂರಿ ನಿರ್ದೇಶನ ಮಾಡಿದ್ದ 'ದುನಿಯಾ' ಸಿನಿಮಾ ಬಿಡುಗಡೆಯಾಗಿ ಫೆಬ್ರವರಿ 23ಕ್ಕೆ 11 ವರ್ಷವಾಗುತ್ತದೆ. ಅಂದು 'ಯೋಗಿ ದುನಿಯಾ' ಬಿಡುಗಡೆ ಮಾಡುವ ಯೋಚನೆ ಇತ್ತು. ಆದರೆ, ಅಂದು ಟಗರು' ರಿಲೀಸ್ ಆಗುತ್ತಿರುವುದರಿಂದ ಮಾರ್ಚ್ 9 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

  ಟೈಟಲ್ ವಿವಾದ ಅಂತ್ಯ : ಬದಲಾಗಿದೆ 'ದುನಿಯಾ 2' ಸಿನಿಮಾದ ಹೆಸರುಟೈಟಲ್ ವಿವಾದ ಅಂತ್ಯ : ಬದಲಾಗಿದೆ 'ದುನಿಯಾ 2' ಸಿನಿಮಾದ ಹೆಸರು

  ಅಂದ್ಹಾಗೆ, ಯೋಗಿಗೆ ನಾಯಕಿಯಾಗಿ ಹಿತಾ ಚಂದ್ರಶೇಖರ್ ನಟಿಸಿದ್ದಾರೆ. ಮಿಕ್ಕಂತೆ ವಸಿಷ್ಠ ಸಿಂಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹರಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದು ನಿರ್ದೇಶಿಸಿದ್ದಾರೆ. ಯೋಗಿ ತಂದೆ ಟಿ.ಪಿ. ಸಿದ್ಧರಾಜು ನಿರ್ಮಾಣ ಮಾಡಿದ್ದಾರೆ. ಇನ್ನುಳಿದಂತೆ ಬಿ.ಜೆ. ಭರತ್ ಅವರ ಸಂಗೀತ ಈ ಚಿತ್ರಕ್ಕಿದೆ.

  ಸದ್ಯ, ಸಿನಿಮಾ ನೋಡಿರುವ ಸೆನ್ಸಾರ್ ಮಂಡಳಿ ಚಿತ್ರಕ್ಕೆ 'ಎ' ಪ್ರಮಾಣಪತ್ರ ನೀಡಿದ್ದಾರೆ. ಟ್ರಾವೆಲ್ ಏಜೆಂಟ್ ಪಾತ್ರದಲ್ಲಿ ನಾಯಕ ನಟ ಯೋಗಿ ಅಭಿನಯಿಸಿದ್ದು, ಯೋಗಿ ಅವರ ಅಣ್ಣ ಮಹೇಶ್ ಕೂಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ಮುಸ್ಲಿಂ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Kannada actor Loose mada yogesh starrer kannada movie 'Yogi Duniya' will be releasing on the 09th of March. The film is written and directed by Hari and produced by T P Siddaraju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X