For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ, ರಚಿತಾಗೆ ಸಂಭಾವನೆ ಕೊಟ್ಟಿಲ್ಲವಂತೆ ದ್ವಾರಕೀಶ್ ಮಗ!

  |
  Bigg Boss Kannada 07 : Shine Shetty lifts the BB trophy | Kuri Prathap

  ನಿರ್ಮಾಪಕ ಯೋಗೇಶ್ ದ್ವಾರಕೀಶ್ ಹಾಗೂ ಜಯಣ್ಣ ನಡುವಿನ ಹಣಕಾಸಿನ ಗಲಾಟೆ ಅನೇಕ ವಿಷಯಗಳನ್ನು ಏಳೆದು ತಂದಿದೆ. ದ್ವಾರಕೀಶ್ ಮಗನ ಮೇಲೆ ಜಯಣ್ಣ ಗಂಭೀರ ಆರೋಪ ಮಾಡಿದ್ದಾರೆ.

  'ಆಯುಷ್ಮಾನ್ ಭವ' ಸಿನಿಮಾದ ನಿರ್ಮಾಣ ಮಾಡಿದ್ದ ಯೋಗೇಶ್ ದ್ವಾರಕೀಶ್ ಆ ಸಿನಿಮಾದ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಸರಿಯಾಗಿ ಸಂಭಾವನೆಯನ್ನು ನೀಡಿಲ್ಲವಂತೆ. ಅದರಲ್ಲಿಯೂ ನಾಯಕ, ನಾಯಕಿಯಾಗಿರುವ ಶಿವರಾಜ್ ಕುಮಾರ್ ಹಾಗೂ ರಚಿತಾ ರಾಮ್ ರಿಗೂ ಮಾತಿನಂತೆ ಸಂಭಾವನೆ ಕೊಟ್ಟಿಲ್ಲವಂತೆ.

  ದ್ವಾರಕೀಶ್ ಚಿತ್ರ ಸಂಸ್ಥೆ 50 ವರ್ಷಗಳನ್ನು ಚಿತ್ರರಂಗದಲ್ಲಿ ಪೂರೈಸಿದೆ. 52 ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಆದರೆ, ಇಂತಹ ದೊಡ್ಡ ಸಂಸ್ಥೆ ಮೇಲೆ ಈಗ ಆರೋಪ ಕೇಳಿ ಬಂದಿದೆ. 'ಆಯುಷ್ಮಾನ್ ಭವ' ಸಿನಿಮಾದ ಹಿಂದಿನ ಘಟನೆಯನ್ನು ಜಯಣ್ಣ ಹಂಚಿಕೊಂಡಿದ್ದಾರೆ.

  ಶಿವಣ್ಣನಿಗೆ ಪೂರ್ಣ ಸಂಭಾವನೆ ನೀಡಿಲ್ಲ

  ಶಿವಣ್ಣನಿಗೆ ಪೂರ್ಣ ಸಂಭಾವನೆ ನೀಡಿಲ್ಲ

  'ಆಯುಷ್ಮಾನ್ ಭವ' ಸಿನಿಮಾ ಮಾಡಲು ಶಿವರಾಜ್ ಕುಮಾರ್ ರಿಗೆ ಮೊದಲು ಇಷ್ಟ ಇರಲಿಲ್ಲವಂತೆ. ಆಗ ಜಯಣ್ಣ ಬಳಿ ಯೋಗೇಶ್ ದ್ವಾರಕೀಶ್ ಮಾತನಾಡಿ, ಶಿವಣ್ಣನನ್ನು ಒಪ್ಪಿಸಲು ಮನವಿ ಮಾಡಿದರಂತೆ. ನಂತರ ಶಿವಣ್ಣನೊಂದಿಗೆ ಜಯಣ್ಣ ಮಾತನಾಡಿದರೆ ಸಿನಿಮಾ ಶುರು ಆಗಿದೆ. ಆದರೆ, ಸಿನಿಮಾದಲ್ಲಿ ನಟಿಸಿದ ಶಿವಣ್ಣನಿಗೆ ಯೋಗೇಶ್ ಪೂರ್ಣ ಸಂಭಾವನೆ ನೀಡಿಲ್ಲವಂತೆ.

  ಸಂಭಾವನೆ ನೀಡಿಲ್ಲ ಎಂದು ರಚಿತಾ ಬೇಸರ

  ಸಂಭಾವನೆ ನೀಡಿಲ್ಲ ಎಂದು ರಚಿತಾ ಬೇಸರ

  ನಟಿ ರಚಿತಾ ರಾಮ್ ರಿಗೂ ಮಾತನಾಡಿದ ಹಾಗೆ ಪೂರ್ಣ ಸಂಭಾವನೆಯನ್ನು ದ್ವಾರಕೀಶ್ ಸಂಸ್ಥೆ ನೀಡಿಲ್ಲವಂತೆ. ಚಿತ್ರ ಬಿಡುಗಡೆಗೆ ಎರಡು ವಾರ ಇದ್ದರೂ, ಬರೀ 25% ಹಣವನ್ನು ಮಾತ್ರ ನೀಡಿದ್ದರಂತೆ. ಸಂಭಾವನೆ ಬರದೆ ಇದ್ದ ಸಮಯದಲ್ಲಿ ಜಯಣ್ಣರಿಗೆ ಕರೆ ಮಾಡಿದ ರಚಿತಾ ರಾಮ್ ಬೇಸರ ವ್ಯಕ್ತಪಡಿಸಿದರಂತೆ.

  ಚೆಕ್ ಬೋನ್ಸ್ ಆಗಿದೆ

  ಚೆಕ್ ಬೋನ್ಸ್ ಆಗಿದೆ

  ಸಿನಿಮಾದಲ್ಲಿ ಕೆಲಸ ಮಾಡಿದ ತಂತ್ರಜ್ಞರಿಗೆ ಸಹ ಸರಿಯಾಗಿ ನೀಡಬೇಕಾದ ಹಣವನ್ನು ನೀಡಿಲ್ಲ ಎಂದು ಜಯಣ್ಣ ಆರೋಪ ಮಾಡಿದ್ದಾರೆ. ನೃತ್ಯ ನಿರ್ದೇಶನ ಮಾಡಿರುವ ಹರ್ಷ, ಸಾಹಸ ನಿರ್ದೇಶನ ಮಾಡಿದ ರವಿವರ್ಮರಿಗೆ ನೀಡಿದ ಚೆಕ್ ಬೋನ್ಸ್ ಆಗಿದೆಯಂತೆ. ರಂಗಾಯಣ ರಘುರಿಗೆ ಸಹ ಹಣ ಕೊಟ್ಟಿಲ್ಲವಂತೆ.

  ಹಣ ಕೊಟ್ಟಿದ್ದೆ ತಪ್ಪಾ

  ಹಣ ಕೊಟ್ಟಿದ್ದೆ ತಪ್ಪಾ

  ದ್ವಾರಕೀಶ್ ಮಗ ಯೋಗೇಶ್ ಹಣಕಾಸಿನ ವ್ಯವಹಾರದ ಬಗ್ಗೆ ಮಾತನಾಡಿದ ಜಯಣ್ಣ ಸಂಭಾವನೆ ನೀಡಿಲ್ಲ ಎಂದರು. ತಮಗೆ 9 ಕೋಟಿ ಹಣ ಬರಬೇಕು ಆದರೆ, ಸದ್ಯಕ್ಕೆ ಫೈನಾನ್ಸರ್ ಬಳಿ ಕೊಡಿಸಿದ 5 ಕೋಟಿ ಹಣವನ್ನು ನೀಡಿ ಎಂದಿದ್ದೇನೆ. ಅವರಿಗೆ ನಮ್ಮ ಹಣವನ್ನು ವಾಪಸ್ ಕೊಡಿ ಎಂದು ಕೇಳಿದ್ದೆ ತಪ್ಪಾ ಎಂದು ಜಯಣ್ಣ ಪ್ರಶ್ನೆ ಮಾಡಿದ್ದಾರೆ.

  English summary
  Yogish Dwarakish didn't gave proper remuneration for Shiva Rajkumar and Rachita Ram says Producer Jayanna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X