For Quick Alerts
  ALLOW NOTIFICATIONS  
  For Daily Alerts

  ತುಂಡ್ ಹೈಕ್ಲ ಭಾರಿ ನಿರೀಕ್ಷೆಯಲ್ಲಿ ಭಟ್ಟರ ಡ್ರಾಮಾ

  By Rajendra
  |

  'ಪರಮಾತ್ಮ' ಚಿತ್ರದ ಬಳಿಕ ನಿರ್ದೇಶಕ, ಗೀತಸಾಹಿತಿ ಕಮ್ ನಿರ್ಮಾಪಕ ಯೋಗರಾಜ್ ಭಟ್ ಅವರಿಗೆ ಆತ್ಮ ಮತ್ತು ಪರಮಾತ್ಮನ ನಡುವಿನ ಅಂತರ ಗೊತ್ತಾದಂತಿದೆ. ಈ ಬಾರಿ ಅವರು 'ಡ್ರಾಮಾ' (ನ.23 ಬಿಡುಗಡೆ) ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

  ಸಾಗರ್, ವೀರೇಶ್, ಉಮಾ, ಮಾರುತಿ, ರಾಜಮುರಳಿ ಇತ್ಯಾದಿ ರೆಗ್ಯುಲರ್ ಸಿಂಗರ್ ಸ್ಕ್ರೀನ್ ಚಿತ್ರಮಂದಿರಗಳು ಸೇರಿದಂತೆ ಐನಾಕ್ಸ್, ಗೋಪಾಲನ್ ಸಿನಿಮಾಸ್, ಸಿನೆಪೊಲೀಸ್, ಫನ್, ಫ್ರೇಮ್ ಸಿನಿಮಾಸ್, ಸಿನೆಮ್ಯಾಕ್ಸ್ ಮಲ್ಟಿಫ್ಲೆಕ್ಸ್ ಗಳಲ್ಲೂಚಿತ್ರ ತೆರೆಕಾಣುತ್ತಿದೆ.

  ಕರೆಕ್ಟಾಗಿ ನೂರು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವ ಡ್ರಾಮಾ ಚಿತ್ರದ ಬಗ್ಗೆ ಅವರ ಎಂದಿನ ಪ್ರೇಕ್ಷಕರ ಬಳಗಕ್ಕೆ ಕುತೂಹಲ ಇದ್ದೇ ಇದೆ. ಭಟ್ಟರು ಈ ಬಾರಿ ಏನು ಮ್ಯಾಜಿಕ್ ಮಾಡಿದ್ದಾರಪ್ಪಾ ನೋಡೋಣ ಎಂಬ ನಿರೀಕ್ಷೆಯಲ್ಲಿ ತುಂಡ್ ಹೈಕ್ಲು ಇದ್ದಾರೆ. ಈ ಬಾರಿ ಭಟ್ಟರ 'ನಾಟಕ' ನಡೆಯುತ್ತಾ? ಗೊತ್ತಿಲ್ಲ.

  ಅದಕ್ಕೇ ಇರಬೇಕು ಭಟ್ಟರ ಲೇಖನಿ ಈ ಬಾರಿ "ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೆ ನಮ್ಗೆ ನಿಮ್ಗೆ ಯಾಕೆ ಟೆನ್ಸನ್ನು...." ಎಂದು ಆಧ್ಯಾತ್ಮಿಕ ಚಿಂತನೆಗೆ ಹೊರಳಿದೆ. ವಿ ಹರಿಕೃಷ್ಣ ಅವರ ಸಂಗೀತದ ಝಲಕ್ ಈಗಾಗಲೆ ತುಂಡ್ ಹೈಕ್ಲ ನಿದ್ದೆಕೆಡಿಸಿದೆ.

  ರೆಬೆಲ್ ಸ್ಟಾರ್ ಅಂಬರೀಶ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಕೆಮಿಸ್ಟ್ರಿ ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗಿದೆ ಎಂಬುದು ನ.23ರ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಗೊತ್ತಾಗಲಿದೆ. ನಿಮ್ಮ ನೆಚ್ಚಿನ ಅಂತರ್ಜಾಲ ತಾಣ 'ಒನ್ಇಂಡಿಯಾ ಕನ್ನಡ'ದಲ್ಲಿ ಚಿತ್ರ ವಿಮರ್ಶೆಗೆ ನಿರೀಕ್ಷಿಸಿ. (ಒನ್ಇಂಡಿಯಾ ಕನ್ನಡ)

  English summary
  The ace director Yograj Bhat's Kannada romantic-comedy film Drama releasing on 23rd November over 100 theaters across the state of Karnataka. It stars Yash, Radhika Pandit, Satish Neenasam and Pragna in leading roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X