»   » ಯೋಗರಾಜ್ ಭಟ್ 'ಡ್ರಾಮಾ' ಸೂಪರ್ ಹಿಟ್

ಯೋಗರಾಜ್ ಭಟ್ 'ಡ್ರಾಮಾ' ಸೂಪರ್ ಹಿಟ್

Posted By:
Subscribe to Filmibeat Kannada
ಯೋಗರಾಜ್ ಭಟ್ ನಿರ್ದೇಶನದ 'ಡ್ರಾಮಾ' ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ. ಚಿತ್ರದ ನಿರ್ಮಾಪಕ ಜಯಣ್ಣ ಹಾಗೂ ಭಟ್ಟರು ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರ ಯಶಸ್ವಿಯಾದ ಬಗ್ಗೆ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.

ಚಿತ್ರ ಬಿಡುಗಡೆಯಾದ ಒಂದೇ ವಾರದಲ್ಲಿ ಪೈಸಾ ವಸೂಲ್ ಮಾಡಿದೆ. ಡ್ರಾಮಾ ಚಿತ್ರ ಎಲ್ಲಾ ವಯೋಮಾನದವರನ್ನು ಸೆಳೆಯುತ್ತಿದೆ. ಚಿತ್ರಕ್ಕೆ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಫೆಕ್ಸ್ ಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತಮ್ಮ ಡ್ರಾಮಾ ಈ ಮಟ್ಟದಲ್ಲಿ ಯಶಸ್ವಿಯಾತ್ತದೆ ಎಂದು ಊಹಿಸಿರಲಿಲ್ಲ ಎಂದಿದ್ದಾರೆ ಯೋಗರಾಜ್ ಭಟ್.

ಉತ್ತಮ ಚಿತ್ರಗಳನ್ನು ಪ್ರೇಕ್ಷಕರು ಕೈಬಿಡಲ್ಲ ಎಂಬುದನ್ನು 'ಡ್ರಾಮಾ' ಚಿತ್ರ ನಿರೂಪಿಸಿದೆ. ಚಿತ್ರದಲ್ಲಿ ಅಂಬರೀಶ್ ಅವರು ಅಭಿನಯಿಸಿದ್ದು ಇನ್ನೊಂದು ಪ್ಲಸ್ ಪಾಯಿಂಟ್. ಅವರಿಗೆ ನಾವು ಆಭಾರಿಯಾಗಿದ್ದೇವೆ ಎಂದಿದ್ದಾರೆ ಚಿತ್ರದ ನಾಯಕ ನಟ ಯಶ್.

'ಅದ್ದೂರಿ' ಚಿತ್ರದ ಬಳಿಕ ರಾಧಿಕಾ ಪಂಡಿತ್ ಅಭಿನಯದ 'ಡ್ರಾಮಾ' ಚಿತ್ರವೂ ಸಕ್ಸಸ್ ಆಗಿದೆ. ಈ ಮೂಲಕ ಅವರು ಮತ್ತೊಬ್ಬ ಲಕ್ಕಿ ಸ್ಟಾರ್ ಎನ್ನಿಸಿಕೊಂಡಿದ್ದಾರೆ. 'ಅದ್ದೂರಿ' ತೆರೆಕಂಡ ಸಾಗರ್ ಚಿತ್ರಮಂದಿರಲ್ಲೇ 'ಡ್ರಾಮಾ' ಕೂಡ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವುದು ರಾಧಿಕಾ ಪಾಲಿಗೆ ಇನ್ನೊಂದು ವಿಶೇಷ. (ಏಜೆನ್ಸೀಸ್)

English summary
Yograj Bhat's Kannada film Drama turning out to be a very big hit said Jayanna, the producer of the film. The romantic-comedy film stars Yash, Radhika Pandit, Satish Neenasam and Sindhu Lokanath in leading roles.
Please Wait while comments are loading...