»   » ಏಪ್ರಿಲ್ 11ರಿಂದ ಯೋಗರಾಜ್ ಭಟ್ ಹೊಸ ಚಿತ್ರ

ಏಪ್ರಿಲ್ 11ರಿಂದ ಯೋಗರಾಜ್ ಭಟ್ ಹೊಸ ಚಿತ್ರ

Posted By:
Subscribe to Filmibeat Kannada
'ಡ್ರಾಮಾ' ಚಿತ್ರ ಹಿಟ್ ಆಯಿತು. ಯೋಗರಾಜ್ ಭಟ್ ರು ಖುಷಿಯಾದರು. ಅವರು ಮತ್ತೊಂದು ಕಥೆಯಲ್ಲಿ ಮಗ್ನರಾದರು. ಇದೀಗ ಅವರ ಮುಂದಿನ ಚಿತ್ರಕ್ಕೆ ಮುಹೂರ್ತ ನಿಗದಿಯಾಗಿದೆ. ಏಪ್ರಿಲ್ 11ರಿಂದ ಅವರ ಹೊಸ ಚಿತ್ರ ಆರಂಭವಾಗಲಿದೆ ಎನ್ನುತ್ತವೆ ಮೂಲಗಳು. ಈ ಸಲವು ಅವರ ಚಿತ್ರದಲ್ಲಿ ಯಶ್ ನಾಯಕ ನಟ ಎಂಬ ಸಮಾಚಾರವೂ ಇದೆ.

ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಈಗಾಗಲೆ ಒಂದೆರಡು ಸುತ್ತಿನ ಮಾತುಕತೆಯೂ ಆಗಿದೆಯಂತೆ. ಶೇ.90ರಷ್ಟು ಓಕೆ ಆಗಿದೆಯಂತೆ. ಯೋಗರಾಜ್ ಭಟ್ ಹಾಗೂ ಕರಿಸುಬ್ಬು, ಎನ್ ಕುಮಾರ್ ಜಂಟಿಯಾಗಿ ಕೈಗೆತ್ತಿಕೊಂಡಿರುವ ಪ್ರಾಜೆಕ್ಟ್ ಇದಾಗಿದೆ.

ಭಟ್ಟರ ಜೊತೆಗೆ ಈ ಹಿಂದೆ ಕರಿಸುಬ್ಬು ಅವರು ಮಣಿ ಚಿತ್ರ ಮಾಡಿದ್ದರು. ರಂಗ ಎಸ್ಎಸ್ಎಲ್ ಸಿ ಚಿತ್ರವನ್ನು ನಿರ್ಮಾಪಕ ಎನ್ ಕುಮಾರ್ ಮಾಡಿದ್ದರು. ಎರಡೂ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಈಗ ಮೂವರು ಸೇರಿ ಹೊಸ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಈ ಚಿತ್ರದ ತಾಂತ್ರಿಕ ಹಾಗೂ ಕಲಾವಿದರ ಆಯ್ಕೆ ನಡೆಯುತ್ತಿದೆ. ಕಥೆ ಇಲ್ಲದೆ ಸಿನಿಮಾ ಮಾಡುವ ಭಟ್ಟರು ಈ ಬಾರಿ ಅದೇನು ಮಾಡುತ್ತಾರೋ ಎಂಬ ಕುತೂಹಲವಿದೆ. ಅವರ 'ಡ್ರಾಮಾ' ಚಿತ್ರದ ಯಶಸ್ಸು ಭಟ್ಟರ ಜವಾಬ್ದಾರಿಯನ್ನು ಹೆಚ್ಚಿಸಿದೆ.

ಏತನ್ಮಧ್ಯೆ ಬೆಂಗಳೂರು ಮೇನಕ ಚಿತ್ರಮಂದಿರದಲ್ಲಿ 'ಡ್ರಾಮಾ' (ಚಿತ್ರ ವಿಮರ್ಶೆ ಓದಿ) ಚಿತ್ರ ನೂರು ದಿನಗಳು ಪೂರೈಸಿದೆ. ಔಟ್ ಅಂಡ್ ಔಟ್ ಕಾಮಿಡಿ ಚಿತ್ರವಾದ ಡ್ರಾಮ ಕಮರ್ಷಿಯಲ್ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ. ಈ ಬಾರಿ ಭಟ್ಟರು ತಮ್ಮ ಬತ್ತಳಿಕೆಯಿಂದ ಯಾವ ಅಸ್ತ್ರ ತೆಗೆಯುತ್ತಾರೋ ಏನೋ? (ಒನ್ಇಂಡಿಯಾ ಕನ್ನಡ)

English summary
Kannada films successful director Yograj Bhat is likely to cast Rocking Star Yash in the lead role of his yet to be titled upcoming film. The film will be jointly produced by Bhat's, Karisubbu and N Kumar.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada