For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ-ಪ್ರಭುದೇವ-ಭಟ್ ಕಾಂಬಿನೇಷನ್ ಚಿತ್ರಕ್ಕೆ ಟೈಟಲ್ ಏನು?

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಮೊಟ್ಟ ಮೊದಲ ಸಲ ನಿರ್ದೇಶಕ ಯೋಗರಾಜ್ ಭಟ್ ಸಿನಿಮಾ ಮಾಡುತ್ತಿದ್ದಾರೆ. ಇದು ಸಹಜವಾಗಿ ಕುತೂಹಲ ಮೂಡಿಸಿದೆ. ವಿಶೇಷ ಅಂದ್ರೆ, ಈ ಚಿತ್ರದಲ್ಲಿ ಶಿವಣ್ಣ ಜೊತೆ ಪ್ರಭುದೇವ ಸಹ ನಟಿಸಲಿದ್ದಾರೆ ಎಂಬ ಸುದ್ದಿ ಸ್ಯಾಂಡಲ್ ವುಡ್‌ನಲ್ಲಿ ಥ್ರಿಲ್ ಹೆಚ್ಚಿಸಿದೆ.

  ಅಧಿಕೃತವಾಗಿ ಪ್ರಾಜೆಕ್ಟ್ ಘೋಷಣೆಯಾಗದಿದ್ದರೂ ಸಿನಿಮಾ ಆರಂಭಕ್ಕೆ ಎಲ್ಲ ತಯಾರಿ ನಡೆದಿದೆ. ಶಿವಣ್ಣ ಮತ್ತು ಪ್ರಭುದೇವ ಕಾಂಬಿನೇಷನ್‌ ಚಿತ್ರಕ್ಕೆ ಹೆಸರು ಏನಿಡಬಹುದು ಎಂಬ ಕುತೂಹಲವೂ ಅಷ್ಟೇ ಕಾಡುತ್ತಿದೆ. ಅದಕ್ಕೆ ಉತ್ತರ ಸಿಕ್ಕಿದೆ. ಮೂವರು ಸೂಪರ್ ಸ್ಟಾರ್‌ಗಳು ಒಂದಾಗಿರುವ ಪ್ರಾಜೆಕ್ಟ್‌ಗೆ ಅಣ್ಣಾವ್ರು ನಟಿಸಿದ್ದ ಸೂಪರ್ ಹಿಟ್ ಹಾಡಿನ ಮೊದಲ ಸಾಲನ್ನೇ ಶೀರ್ಷಿಕೆಯನ್ನಾಗಿಸಲು ಪ್ಲಾನ್ ಮಾಡಲಾಗಿದೆ. ಮುಂದೆ ಓದಿ...

  'ಕುಲದಲ್ಲಿ ಕೀಳ್ಯಾವುದೋ' ಎನ್ನುತ್ತಿದ್ದಾರೆ ಭಟ್ಟರು

  'ಕುಲದಲ್ಲಿ ಕೀಳ್ಯಾವುದೋ' ಎನ್ನುತ್ತಿದ್ದಾರೆ ಭಟ್ಟರು

  ಸೆಂಚುರಿ ಸ್ಟಾರ್ ಶಿವಣ್ಣ ಮತ್ತು ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ಒಟ್ಟಿಗೆ ಅಭಿನಯಿಸಲಿರುವ ಈ ಚಿತ್ರಕ್ಕೆ 'ಕುಲದಲ್ಲಿ ಕೀಳ್ಯಾವುದೋ' ಎಂದು ಹೆಸರಿಡಲು ಯೋಗರಾಜ್ ಭಟ್ಟರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ, ಈ ಟೈಟಲ್ 1965ರಲ್ಲಿ ತೆರೆಕಂಡಿದ್ದ 'ಸತ್ಯಹರಿಶ್ಚಂದ್ರ' ಸಿನಿಮಾದ ಸೂಪರ್ ಹಿಟ್ ಹಾಡು ''ಕುಲದಲ್ಲಿ ಕೀಳ್ಯಾವುದೋ' ನೆನಪಿಸುತ್ತಿದೆ. ಆದರೆ, ಈ ಟೈಟಲ್ ಅಂತಿಮವಾಗಿಲ್ಲ ಎಂದು ಹೇಳಲಾಗಿದೆ.

  ಭಟ್ಟರ ನಿರ್ದೇಶನದಲ್ಲಿ ಶಿವರಾಜ್ ಕುಮಾರ್-ಪ್ರಭುದೇವಾ: ಏನು ನಿರೀಕ್ಷಿಸಬಹುದು?ಭಟ್ಟರ ನಿರ್ದೇಶನದಲ್ಲಿ ಶಿವರಾಜ್ ಕುಮಾರ್-ಪ್ರಭುದೇವಾ: ಏನು ನಿರೀಕ್ಷಿಸಬಹುದು?

  1960-70ರ ಕಾಲಘಟ್ಟದ ಚಿತ್ರ

  1960-70ರ ಕಾಲಘಟ್ಟದ ಚಿತ್ರ

  ಅಂದ್ಹಾಗೆ, 1960 ಮತ್ತು 1970 ನಡುವಿನ ನಡೆಯುವ ಕಥೆ ಇದಾಗಿದ್ದು, ಇಬ್ಬರು ನಟರು 60ರ ದಶಕದ ಪಾತ್ರಗಳಲ್ಲಿ ನಟಿಸಲಿದ್ದಾರೆ. ಆದರೆ, ಇದು ಯಾವುದೇ ನೈಜ ಘಟನೆಗಳ ಕುರಿತಾದ ಚಿತ್ರವಲ್ಲ ಎಂದು ಯೋಗರಾಜ್ ಭಟ್ ಅವರು ಸ್ಪಷ್ಟನೆ ಸಹ ನೀಡಿದ್ದಾರೆ.

  ಗಾಳಿಪಟ 2 ಮುಗಿದ ಮೇಲೆ ಆರಂಭ

  ಗಾಳಿಪಟ 2 ಮುಗಿದ ಮೇಲೆ ಆರಂಭ

  ಯೋಗರಾಜ್ ಭಟ್ ಅವರು ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಗಾಳಿಪಟ-2' ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಕೆಲಸ ಸಂಪೂರ್ಣವಾಗಿ ಮುಗಿದ ಮೇಲೆ ಅಷ್ಟೇ ಹೊಸ ಪ್ರಾಜೆಕ್ಟ್ ಆರಂಭವಾಗಲಿದೆ. ಮತ್ತೊಂದೆಡೆ 'ಭಜರಂಗಿ-2' ಚಿತ್ರೀಕರಣ ಮಾಡುತ್ತಿರುವ ಶಿವಣ್ಣ ಅವನೇ ಶ್ರೀಮನ್ನಾರಾಯಣ ನಿರ್ದೇಶಕನ ಜೊತೆಯೂ ಹೊಸ ಸಿನಿಮಾವೊಂದು ಮಾಡಲಿದ್ದಾರೆ.

  ಒಂದು ವರ್ಷದ ಬಳಿಕ ಶೈನ್ ಶೆಟ್ಟಿ ಮನೆಗೆ ಬಂದ ಅದೃಷ್ಟ ಲಕ್ಷ್ಮಿ | Shine Shetty | Filmibeat Kannada
  18 ವರ್ಷದ ಬಳಿಕ ಕನ್ನಡಕ್ಕೆ ಪ್ರಭುದೇವ

  18 ವರ್ಷದ ಬಳಿಕ ಕನ್ನಡಕ್ಕೆ ಪ್ರಭುದೇವ

  ಪ್ರಭುದೇವಾ 18 ವರ್ಷಗಳ ಬಳಿಕ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎಚ್‌2ಒ ಸಿನಿಮಾದ ಬಳಿಕ ಕನ್ನಡದಲ್ಲಿ ಇದೇ ಅವರ ಪೂರ್ಣ ಪ್ರಮಾಣದ ಪಾತ್ರ. ಅವರ ಸಹೋದರ ನಾಗೇಂದ್ರ ಪ್ರಸಾದ್ ನಾಯಕರಾಗಿದ್ದ 'ಮನಸೆಲ್ಲಾ ನೀನೆ' ಸಿನಿಮಾದಲ್ಲಿ ಅತಿಥಿ ಪಾತ್ರವೊಂದನ್ನು ನಿರ್ವಸಿದ್ದರು ಪ್ರಭುದೇವಾ.

  English summary
  Kannada Director Yograj Bhat's new film with Shivarajkumar and Prabhudeva tentatively named Kuladalli Keelyavudo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X