twitter
    For Quick Alerts
    ALLOW NOTIFICATIONS  
    For Daily Alerts

    ನನ್ನ ವೃತ್ತಿ ಜೀವನ ಶುರುಮಾಡಿಸಿದ ದೊಡ್ಡ ಮನುಷ್ಯ ಶಿವರಾಂ: ಯೋಗರಾಜ್ ಭಟ್ ಭಾವುಕ

    |

    ನಟ ಶಿವರಾಂ ಸುಮಾರು 6 ದಶಕಗಳ ಕಾಲ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದವರು. ಅಂಥಹಾ ಮೇರು ಜೀವ ಇಂದು ಮಣ್ಣಿಗೆ ಒರಗಿದೆ. ಈ ಆರು ದಶಕದಲ್ಲಿ ಶಿವರಾಂ, ಹಲವರೊಟ್ಟಿಗೆ ಕೆಲಸ ಮಾಡಿದ್ದಾರೆ, ಹಲವರಿಗೆ ಮಾರ್ಗದರ್ಶನ ನೀಡಿದ್ದಾರೆ, ಸಹಾಯ ಮಾಡಿದ್ದಾರೆ. ಅವರಲ್ಲಿ ಒಬ್ಬರು ಈಗಿನ ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್.

    ಶಿವರಾಂ ಅವರ ಅಂತಿಮ ದರ್ಶನಕ್ಕೆ ಬಂದಿದ್ದ ಯೋಗರಾಜ್ ಭಟ್ ತಮ್ಮ ವೃತ್ತಿ ಜೀವನದ ಆರಂಭದ ಸಮಯದಲ್ಲಿ ಶಿವರಾಂ ನೀಡಿದ್ದ ಮಾರ್ಗದರ್ಶನ, ಭರವಸೆಯನ್ನು ನೆನಪು ಮಾಡಿಕೊಂಡು ಭಾವುಕರಾಗಿದ್ದಾರೆ.

    ''ನಾವೆಲ್ಲರೂ ಅವರನ್ನು ಶಿವರಾಮಣ್ಣ ಎಂತಲೇ ಕರೆಯುವುದು, ಅವರಿಂದು ಚಿರಶಾಂತಿ ಸೇರಿದ್ದಾರೆ. ನನ್ನ ಮೊಟ್ಟ ಮೊದಲ ನಿರ್ದೇಶನದ ಸಾಹಸಕ್ಕೆ ಅವರು ಬೆಂಬಲ ನೀಡಿದ್ದರು. ದೂರದರ್ಶನಕ್ಕಾಗಿ 'ಚಕ್ರ' ಹೆಸರಿನ ಧಾರಾವಾಹಿ ಮಾಡಿದ್ದೆ, ಅದರಲ್ಲಿ ಪ್ರಮುಖ ಪಾತ್ರದಲ್ಲಿ ಅವರು ಅಭಿನಯಿಸಿದ್ದರು. ನಮ್ಮ ಜೀವನದ ಜರ್ನಿಯವನ್ನು ಶುರು ಮಾಡಿಸಿದ್ದ ದೊಡ್ಡ ಹೃದಯ ಅವರದ್ದು'' ಎಂದಿದ್ದಾರೆ ಯೋಗರಾಜ್ ಭಟ್.

    Yograj Bhat Said Shivaram Helped To His Career In Early Days

    ''ಬಹಳ ಸಂತೋಶದ ವಿಷಯವೆಂದರೆ, ಅವರು ಬಹಳ ಜ್ಞಾನಿಗಳಾಗಿದ್ದರು. ಅವರ ಜೊತೆಗೆ ಕಳೆದ ಘಳಿಗೆಗಳೆಲ್ಲ ಅವರು ಜ್ಞಾನಪೂರ್ಣವಾದ ವಿಷಯಗಳನ್ನು ಹೇಳುತ್ತಿದ್ದರು. ಯಾವುದ್ಯಾವುದೋ ವಿಷಯಗಳನ್ನು ಅವರು ಅಧ್ಯಯನ ಮಾಡಿ ನಮಗೆ ತಿಳಿಸುತ್ತಿದ್ದರು. ಇವತ್ತು ಅವರು ಸುಖನಿದ್ರೆಯಲ್ಲಿ ಮಲಗಿದ್ದಾರೆ. ಅವರ ಆತ್ಮಕ್ಕೆ ನೆಮ್ಮದಿ ಇರಲಿ ಎಂದು ಒಬ್ಬ ಕನ್ನಡಿಗನಾಗಿ ಹಾಗೂ ಅವರೊಂದಿಗೆ ಒಡನಾಡಿದ, ಅವರ ಪ್ರೀತಿಯ ಹುಡುಗನಾಗಿ ನನ್ನ ಆರೈಕೆ'' ಎಂದರು ಯೋಗರಾಜ್ ಭಟ್.

    ನಟಿ ಪ್ರೇಮಾ ಸಹ ಶಿವರಾಂ ಅವರ ಅಂತಿಮ ದರ್ಶನ ಮಾಡಿದರು. ಬಳಿಕ ಮಾತನಾಡಿದ ಅವರು, ''ನನ್ನ ಮೊದಲ ಸಿನಿಮಾ 'ಸವ್ಯಸಾಚಿ'ಯಲ್ಲಿ ನನ್ನ ತಂದೆಯ ಪಾತ್ರದಲ್ಲಿ ಅವರು ನಟಿಸಿದ್ದರು. ನಾನು ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವಳ್ಳಲ್ಲ. ಅವರಷ್ಟು ದೊಡ್ಡ ಕಲಾವಿದೆಯೂ ಅಲ್ಲ. ಮೊದಲ ಸಿನಿಮಾದಲ್ಲಿ ಅವರೊಟ್ಟಿಗೆ ನಟಿಸಿದಾಗ ಅವರನ್ನು ನೋಡಿ ನಾನು ಇವರಂತೆ ಆಗಬೇಕು, ಇವರಂತೆ ನಟಿಸಬೇಕು, ಇವರಂತೆ ಹೆಸರು ಮಾಡಬೇಕು ಎನಿಸಿತ್ತು. ನನ್ನ ತಂದೆಯ ಪಾತ್ರದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ನನ್ನ ತಂದೆಯೂ ಈಗಿಲ್ಲ, ಈಗ ಶಿವರಾಂ ಅವರೂ ಇಲ್ಲ'' ಎಂದು ಪ್ರೇಮಾ ಭಾವುಕರಾದರು.

    ಫೈಟ್ ಮಾಸ್ಟರ್ ಥ್ರಿಲ್ಲರ್ ಮಂಜು ಸಹ ಶಿವರಾಂ ಅವರ ಅಂತಿಮ ದರ್ಶನ ಪಡೆದರು. ಮಾಧ್ಯಮಗಳೊಟ್ಟಿಗೆ ಮಾತನಾಡಿದ ಮಂಜು, ''ಎರಡು ತಿಂಗಳ ಹಿಂದೆಯಷ್ಟೆ ಪುಟ್ಟಣ್ಣ ಕಣಗಾಲ್ ಅವರ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಅವರು ಆಗಮಿಸಿದ್ದರು. ಲವಲವಿಕೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಮ್ಮೊಂದಿಗೆ ಸುಮಾರು ಎಂಟು ಗಂಟೆ ಕಾಲ ಇದ್ದು ಮ್ಯಾಚ್ ನೋಡಿ ಖುಷಿ ಪಟ್ಟಿದ್ದರು. ಆ ಕ್ಷಣಗಳನ್ನು ನೆನಪಿಸಿಕೊಂಡರೆ ಇಷ್ಟೋಂದು ಕ್ಷಣಿಕವಾ ಜೀವನ ಎನಿಸುತ್ತದೆ. ಯಾಕೋ ನಮ್ಮ ಕನ್ನಡ ಚಿತ್ರರಂಗದ ಸಮಯವೇ ಸರಿ ಇಲ್ಲ ಎನಿಸುತ್ತದೆ'' ಎಂದರು ಮಂಜು.

    English summary
    Yograj Bhat said he Shivaram guided him in his early days of career. He also said Shivaram is a Devine person.
    Saturday, December 4, 2021, 22:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X