twitter
    For Quick Alerts
    ALLOW NOTIFICATIONS  
    For Daily Alerts

    ಲಾಕ್‌ಡೌನ್ ನಡುವೆಯೂ ಶೂಟಿಂಗ್ ಮಾಡಿದ ಯೋಗರಾಜ್ ಭಟ್!

    |

    ಕೊರೊನಾ ಲಾಕ್‌ಡೌನ್ ಶುರುವಾದ ಬಳಿಕ ದೇಶದಾದ್ಯಂತ ಸಿನಿಮಾ, ಧಾರವಾಹಿ ಸೇರಿದಂತೆ ಎಲ್ಲಾ ರೀತಿಯ ಚಿತ್ರೀಕರಣ ಬಂದ್ ಆಗಿದೆ.

    ಲಾಕ್‌ಡೌನ್ ನಿಂದಾಗಿ ಇಡೀಯ ಕನ್ನಡ ಚಿತ್ರರಂಗವೂ ಸ್ಥಬ್ಧವಾಗಿದೆ. ಯಾವುದೇ ಚಿತ್ರೀಕರಣ ನಡೆಯುತ್ತಿಲ್ಲ, ಇಂಥಹಾ ಸಮಯದಲ್ಲೂ ಸಹ ನಿರ್ದೇಶಕ ಯೋಗರಾಜ ಭಟ್ ಚಿತ್ರೀಕರಣ ಮಾಡಿದ್ದಾರೆ!

    ಯೋಗರಾಜ್ ಭಟ್ಟರು ಗಾಳಿಪಟ-2 ಸಿನಿಮಾ ನಿರ್ದೇಶಿಸುತ್ತಿರುವುದು, ಸಿನಿಮಾದ ಚಿತ್ರೀಕರಣ ಸಾಗುತ್ತಿರುವುದು ಗೊತ್ತಿರುವ ವಿಚಾರವೇ, ಆದರೆ ಅವರು ಈಗ ಆಕ್ಷನ್ ಕಟ್ ಹೇಳಿರುವುದು ತಮ್ಮ ಗಾಳಿಪಟ-2 ಗೆ ಅಲ್ಲ.

    ಕೊರೊನಾ ಯೋಧರ ಕುರಿತ ಡಾಕ್ಯುಮೆಂಟರಿ

    ಕೊರೊನಾ ಯೋಧರ ಕುರಿತ ಡಾಕ್ಯುಮೆಂಟರಿ

    ಕೊರೊನಾ ಸಂಕಷ್ಟದ ಸಮಯದಲ್ಲಿ ಪೊಲೀಸರ ಕಾರ್ಯವನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಪೊಲೀಸರ ಕಾರ್ಯವನ್ನು ಗುರುತಿಸುವ, ಅವರಿಗೆ ಅಭಿನಂಧಿಸುವ ಕಾರಣದಿಂದ ಯೋಗರಾಜ್ ಭಟ್ಟರು ಕಿರುಚಿತ್ರ ನಿರ್ದೇಶಿಸುತ್ತಿದ್ದು, ಅದರ ಚಿತ್ರೀಕರಣವನ್ನು ಭಟ್ಟರು ಮಾಡಿದ್ದಾರೆ.

    ಟೌನ್‌ಹಾಲ್ ಎದುರು ನಡೆದ ಚಿತ್ರೀಕರಣ

    ಟೌನ್‌ಹಾಲ್ ಎದುರು ನಡೆದ ಚಿತ್ರೀಕರಣ

    ನಗರದ ಟೌನ್‌ಹಾಲ್ ಎದುರು ಯೋಗರಾಜ್ ಭಟ್ಟರು, ಕೆಲವು ಪೊಲೀಸರನ್ನು ಸೇರಿಸಿಕೊಂಡು ಚಿತ್ರೀಕರಣ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳ ಕಾರ್ಯವನ್ನು ಗುರುತಿಸುವ ಚಿತ್ರ ಇದಾಗಿರಲಿದೆ.

    ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತು

    ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತು

    ಚಿತ್ರೀಕರಣದ ಬಗ್ಗೆ ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, 'ನಾನೇ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿದ್ದೇನೆ. ಇಂಥಹಾ ಸಂಕಷ್ಟದ ಸಮಯದಲ್ಲಿ ಪೊಲೀಸರ ಕಾರ್ಯವನ್ನು ಗುರುತಿಸುವ, ದಾಖಲಿಸುವ ಕಾರ್ಯವನ್ನು ಯೋಗರಾಜ್ ಭಟ್ಟರು ಮಾಡುತ್ತಿದ್ದಾರೆ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.

    ಚುನಾವಣೆ ಆಯೋಗಕ್ಕಾಗಿ ಹಾಡು ಮಾಡಿದ್ದ ಭಟ್ಟರು

    ಚುನಾವಣೆ ಆಯೋಗಕ್ಕಾಗಿ ಹಾಡು ಮಾಡಿದ್ದ ಭಟ್ಟರು

    ಈ ಹಿಂದೆ ಯೋಗರಾಜ್ ಭಟ್ಟರು ಚುನಾವಣಾ ಆಯೋಗದ ಮನವಿ ಮೇರೆಗೆ ಚುನಾವಣೆ ಗೀತಚಿತ್ರಗಳನ್ನು, ಕೆಲವು ಕಿರುಚಿತ್ರಗಳನ್ನು ಮಾಡಿಕೊಟ್ಟಿದ್ದಾರೆ. ಲಾಕ್‌ಡೌನ್ ಗೆ ಮುನ್ನಾ ಗಾಳಿಪಟ-2 ಸಿನಿಮಾ ನಿರ್ದೇಶನದಲ್ಲಿ ಭಟ್ಟರು ತೊಡಗಿಸಿಕೊಂಡಿದ್ದರು. ಸಿನಿಮಾದಲ್ಲಿ ಗಣೇಶ್, ದಿಗಂತ್, ಪವನ್ ಕುಮಾರ್ ನಟಿಸುತ್ತಿದ್ದಾರೆ.

    English summary
    Director Yograj Bhat shooting short movie to mark police work in this coronavirus crisis.
    Saturday, May 30, 2020, 14:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X