»   » ಅಮಿತಾಬ್ ಗೆ ಆಕ್ಷನ್ ಕಟ್ ಯೋಗರಾಜ್ ಭಟ್

ಅಮಿತಾಬ್ ಗೆ ಆಕ್ಷನ್ ಕಟ್ ಯೋಗರಾಜ್ ಭಟ್

Posted By:
Subscribe to Filmibeat Kannada
Yograj Bhat
ಚಲನಚಿತ್ರ ನಿರ್ದೇಶಕ ಕಮ್ ಗೀತಸಾಹಿತಿ ಯೋಗರಾಜ್ ಭಟ್ಟರಿಗೆ ಇಲ್ಲಿ 'ಲೈಫ್ ಇಷ್ಟೆನೆ' ಅನ್ನಿಸಿತೋ ಏನೋ ಗೊತ್ತಿಲ್ಲ. ಅವರೀಗೆ ಮುಂಬೈಗೆ ವರ್ಗಾವಾಗಿದ್ದಾರೆ. ಹೊಸಬರೊಂದಿಗೆ ಬಾಲಿವುಡ್ ನಲ್ಲಿ ಹೊಸ ಪ್ರಯೋಗ ಮಾಡಲು ಹೊರಟಿದ್ದಾರೆ. ಅವರ ಜೊತೆಗೆ ಒಂದಷ್ಟು ಮಂದಿ ಜೊತೆಗೂಡಿದ್ದಾರೆ.

ಸದ್ಯಕ್ಕೆ ಕಥೆ ಹೆಣೆಯುವ ಕಾಯದಲ್ಲಿ ಭಟ್ಟರು ಬಿಜಿ. ತಾವು ಹೆಣೆಯುತ್ತಿರುವ ಹೊಸ ಕಥೆಯಲ್ಲಿ ವಯಸ್ಸಾದ ಪಾತ್ರವೊಂದು ಇದೆಯಂತೆ. ಈ ಪಾತ್ರವನ್ನು ಬಿಗ್ ಬಿ ಅಮಿತಾಬ್ ಬಚ್ಚನ್ ಪೋಷಿಸಿದರೆ ಸೂಪರ್ ಎಂಬ ಆಲೋಚನೆ ಅವರಿಗೆ ಬಂದಿದೆ. ಕೂಡಲೆ ಬಚ್ಚನ್ ಜೊತೆ ಮಾತುಕತೆಯೂ ಆಗಿದೆ.

ಕಥೆ ಕೇಳಿರುವ ಅಮಿತಾಬ್ ಇನ್ನೂ ಏನನ್ನೂ ಹೇಳಿಲ್ಲ. ಆದರೆ ತಮ್ಮ ಪಾತ್ರದ ಬಗ್ಗೆ ಮಾತ್ರ ಇಂಪ್ರೆಸ್ ಆಗಿದ್ದಾರಂತೆ. ಅವರು ಓಕೆ ಎಂದರೆ ಅಮಿತಾಬ್ ಗೆ ಆಕ್ಷನ್ ಕಟ್ ಹೇಳುವುದೊಂದು ಬಾಕಿ ಇರುತ್ತದೆ. ಆಗಸ್ಟ್ ನಲ್ಲಿ ಚಿತ್ರೀಕರಣವಂತೆ. ಕನ್ನಡ ಹಾಗೂ ಹಿಂದಿ ಎರಡೂ ಭಾಷೆಗಳಲ್ಲಿ ಚಿತ್ರ ಏಕಕಾಲಕ್ಕೆ ತೆರೆಕಾಣಲಿದೆಯಂತೆ.

ಎಂದಿನಂತೆ ಇದು ಹದಿಹರೆಯದ ಪ್ರೇಮ ಕಥೆ. ಕಾಲೇಜಿನ ಯುವಕ, ಯುವತಿಯನ್ನು ಗಮನದಲ್ಲಿಟ್ಟುಕೊಂಡು ಹೆಣೆದ ಕಥೆ ಇದು ಎನ್ನುತ್ತಾರೆ ಭಟ್. ಕಲಾವಿದರ ಆಯ್ಕೆ ನಡೆಯುತ್ತಿದೆ. ಉಳಿದ ವಿವರಗಳು ಸದ್ಯಕ್ಕೆ ಅಲಭ್ಯ. (ಏಜೆನ್ಸೀಸ್)

English summary
Kannada films successful director Yograj Bhat all set to debut bollywood. He approached Amitabh Bachchan for a role in the film. Big B not yet agreed to do the role but he impressed the story line, sources says.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada