twitter
    For Quick Alerts
    ALLOW NOTIFICATIONS  
    For Daily Alerts

    ಹಿರಿಯ ಪೊಲೀಸ್ ಅಧಿಕಾರಿಯನ್ನು ಮನಸಾರೆ ಹೊಗಳಿದ ಯೋಗರಾಜ್ ಭಟ್

    |

    ನಿರ್ದೇಶಕ ಯೋಗರಾಜ್ ಭಟ್ ವ್ಯಕ್ತಿಗಳನ್ನು ಹೊಗಳುವುದು ತುಸು ಅಪರೂಪ. ಅವರೇನಿದ್ದರೂ ಸಮಾಜದ ಅಂಕು-ಡೊಂಕುಗಳನ್ನು ತಮ್ಮ ಚುಟುಕುಗಳ ಮೂಲಕ ಕುಟುಕಲು ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ.

    Recommended Video

    ಶಿವಣ್ಣನ ಮನೆಗೆ ಎಲ್ಲಾ ಹೀರೋಗಳು ಬಂದ್ರು ಆದ್ರೆ ದರ್ಶನ್, ಸುದೀಪ್ ಬರ್ಲಿಲ್ಲ. | Filmibeat Kannada

    ಚಿತ್ರರಂಗದಲ್ಲಿ ಹಲವಾರು ಗೆಳೆಯರನ್ನು ಹೊಂದಿರುವ ಯೋಗರಾಜ್ ಭಟ್ಟರು ಚಿತ್ರರಂಗದ ಹೊರಗೂ ಕೆಲವು ಗೆಳೆಯರನ್ನು ಹೊಂದಿದ್ದಾರೆ.

    ಗಣೇಶ್ ಹುಟ್ಟುಹಬ್ಬ ವಿಶ್‌ ನಲ್ಲಿ ತಪ್ಪು: ಯೋಗರಾಜ್ ಭಟ್ ಕೊಟ್ಟ ಕಾರಣಗಣೇಶ್ ಹುಟ್ಟುಹಬ್ಬ ವಿಶ್‌ ನಲ್ಲಿ ತಪ್ಪು: ಯೋಗರಾಜ್ ಭಟ್ ಕೊಟ್ಟ ಕಾರಣ

    ಸಾಹಿತಿಗಳು, ಉದ್ಯಮಿಗಳು ಇನ್ನೂ ಹಲವು ರಂಗದಲ್ಲಿ ಗೆಳೆಯರನ್ನು ಹೊಂದಿರುವ ಯೋಗರಾಜ್ ಭಟ್, ಪೊಲೀಸ್ ಇಲಾಖೆಯಲ್ಲಿಯೂ ಗೆಳೆಯರನ್ನು ಹೊಂದಿದ್ದಾರೆ. ಭಟ್ಟರು ಇದೀಗ ತಮ್ಮ ಆತ್ಮೀಯರಾಗಿರುವ ಹಿರಿಯ ಪೊಲೀಸ್ ಅಧಿಕಾರಿಯನ್ನು ಹೊಗಳಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.

    ಭಾಸ್ಕರ್ ರಾವ್ ಬಗ್ಗೆ ಭಟ್ಟರ ಪೋಸ್ಟ್

    ಭಾಸ್ಕರ್ ರಾವ್ ಬಗ್ಗೆ ಭಟ್ಟರ ಪೋಸ್ಟ್

    ಐಪಿಎಸ್ ಅಧಿಕಾರಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್ ಅವರ ಕುರಿತಾಗಿ ಯೋಗರಾಜ್ ಭಟ್ಟರು ಫೇಸ್‌ಬುಕ್‌ನಲ್ಲಿ ಕೆಲವು ಸಾಲು ಬರೆದಿದ್ದಾರೆ. ಭಾಸ್ಕರ್ ರಾವ್ ಅವರ ಕರ್ತವ್ಯ, ಸ್ನೇಹಪರ ಮನಸ್ಸನ್ನು ಕೊಂಡಾಡಿದ್ದಾರೆ.

    'ಕಲಾ ಪ್ರೇಮಕ್ಕೆ ಸದಾ ವಂದನೆಗಳು'

    'ಕಲಾ ಪ್ರೇಮಕ್ಕೆ ಸದಾ ವಂದನೆಗಳು'

    'ತಮ್ಮ ಶ್ರದ್ಧೆ, ಕೆಲಸ, ಸೇವೆ, ಕಲಾ ಪ್ರೇಮಕ್ಕೆ ಸದಾ ವಂದನೆಗಳು ಭಾಸ್ಕರ್ ರಾಯರೆ ಎಂದು ಯೋಗರಾಜ್ ಭಟ್ಟರು, ಭಾಸ್ಕರ್ ರಾವ್ ಅವರ ಕುರಿತಾಗಿ ಬರೆದಿದ್ದಾರೆ. ಭಾಸ್ಕರ್ ರಾವ್ ನಿನ್ನೆಯಷ್ಟೆ ಬೆಂಗಳೂರು ನಗರ ಆಯುಕ್ತ ಹುದ್ದೆಯಿಂದ ವರ್ಗಾವಣೆ ಗೊಂಡಿದ್ದಾರೆ ಹಾಗಾಗಿ ಭಟ್ಟರು ಇದನ್ನು ಬರೆದಿದ್ದಾರೆ.

    ಯೋಗರಾಜ್ ಭಟ್ಟರ 'ಸೀರೆ' ತೊಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್ಯೋಗರಾಜ್ ಭಟ್ಟರ 'ಸೀರೆ' ತೊಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್

    ಹಾಡಿನ ಚಿತ್ರೀಕರಣಕ್ಕೆ ಸಾಥ್

    ಹಾಡಿನ ಚಿತ್ರೀಕರಣಕ್ಕೆ ಸಾಥ್

    ಯೋಗರಾಜ್ ಭಟ್ಟರು ಕೊರೊನಾ ಕುರಿತಾಗಿ ನಿರ್ದೇಶಿಸಿದ್ದ ವಿಡಿಯೋ ಹಾಡಿನಲ್ಲಿ ಭಾಸ್ಕರ್ ರಾವ್ ಇದ್ದರು. ಪೊಲೀಸರು ಸೇರಿ ಕೊರೊನಾ ವಾರಿಯರ್‌ಗಳ ಕುರಿತಾದ ಆ ಹಾಡಿಗೆ ಚಿತ್ರೀಕರಣ ವ್ಯವಸ್ಥೆಯಿಂದ ಹಿಡಿದು ಸಾಕಷ್ಟು ಸಹಕಾರವನ್ನು ಭಾಸ್ಕರ್ ರಾವ್ ನೀಡಿದ್ದರು. ಹಾಗಾಗಿ ಯೋಗರಾಜ್ ಭಟ್ಟರು ಹಾಗೂ ಭಾಸ್ಕರ್ ರಾವ್ ಮಧ್ಯೆ ಉತ್ತಮ ಗೆಳೆತನವಿದೆ.

    ಭಾಸ್ಕರ್ ರಾವ್ ಸ್ಥಾನಕ್ಕೆ ಕಮಲ್ ಪಂಥ್

    ಭಾಸ್ಕರ್ ರಾವ್ ಸ್ಥಾನಕ್ಕೆ ಕಮಲ್ ಪಂಥ್

    ಭಾಸ್ಕರ್ ರಾವ್ ಕಳೆದ ಒಂದು ವರ್ಷದಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಿದ್ದಾರೆ. ಈಗವರು ವರ್ಗಾವಣೆಯಾಗಿದ್ದು ಅವರ ಸ್ಥಾನಕ್ಕೆ ಕಮಲ್ ಪಂಥ್ ಬಂದಿದ್ದಾರೆ. ಭಾಸ್ಕರ್ ರಾವ್ ಅವರು ಆಂತರಿಕ ಭದ್ರತೆ ವಿಭಾಗ ಎಡಿಜಿಪಿ ಸ್ಥಾನಕ್ಕೆ ವರ್ಗ ಮಾಡಲಾಗಿದೆ.

    ಯೋಗರಾಜ್ ಭಟ್‌ ಗೆ ರಾಜಕೀಯ ಪಕ್ಷಗಳ ಕಾಟ: ಇದೊಂಥರಾ ಹಿಂಸೆ ಎಂದ ಭಟ್ಟರುಯೋಗರಾಜ್ ಭಟ್‌ ಗೆ ರಾಜಕೀಯ ಪಕ್ಷಗಳ ಕಾಟ: ಇದೊಂಥರಾ ಹಿಂಸೆ ಎಂದ ಭಟ್ಟರು

    English summary
    Director Yograj Bhatt praises IPS officer, Bengaluru city police commissioner Bhaskar Rao.
    Saturday, August 1, 2020, 14:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X