Don't Miss!
- News
Breaking; ಸಾಹಿತಿ, ವಿಮರ್ಶಕ ಕೆ. ವಿ. ತಿರುಮಲೇಶ್ ನಿಧನ
- Technology
ಜಿಯೋ ಗ್ರಾಹಕರೆ, ಈ ರೀಚಾರ್ಜ್ ಪ್ಲ್ಯಾನ್ ಅನ್ನು ಖಂಡಿತಾ ನೀವು ಇಷ್ಟ ಪಡ್ತೀರಿ!?
- Automobiles
'ಅಲ್ಟ್ರಾವೈಲೆಟ್ F77' ಹೇಗಿದೆ ಗೋತ್ತಾ.. ಇಲ್ಲಿದೆ ವಿಮರ್ಶೆ
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದುಡ್ಡು ಕೊಟ್ರೆ ಕೋಟಿ ಕೋಟಿ ಯುಟ್ಯೂಬ್ ವ್ಯೂಸ್ ಸಿಗುತ್ತೆ, ಟ್ರೆಂಡ್ ಮಾಡೋಕಾಗಲ್ಲ ಎಂದ ದರ್ಶನ್!
ನೇರ ನುಡಿಗೆ ಹೆಸರುವಾಸಿಯಾಗಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಲವು ಬಾರಿ ಸಂದರ್ಶನಗಳಲ್ಲಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತಮಗನಿಸಿದ್ದನ್ನು ಮುಖದ ಮೇಲೆ ಹೊಡೆದ ಹಾಗೆ ಹೇಳಿದ್ದಾರೆ. ಇನ್ನು ಈ ಹಿಂದೆ ಹೆಚ್ಚಾಗಿ ಸಂದರ್ಶನಗಳಲ್ಲಿ ಭಾಗವಹಿಸದೇ ಇದ್ದ ದರ್ಶನ್ ಸದ್ಯ ಕ್ರಾಂತಿ ಚಿತ್ರದ ಪ್ರಚಾರಕ್ಕಾಗಿ ಸಾಲು ಸಾಲು ಸಂದರ್ಶನಗಳಲ್ಲಿ ಭಾಗವಹಿಸಿದ್ದಾರೆ.
ಇನ್ನು ಮಾಧ್ಯಮಗಳು ದರ್ಶನ್ ಕುರಿತಾದ ಯಾವ ಸುದ್ದಿಗಳನ್ನೂ ಸಹ ಪ್ರಸಾರ ಮಾಡಬಾರದು ಎಂದು ತೀರ್ಮಾನಿಸಿರುವ ಕಾರಣ ದರ್ಶನ್ ಯುಟ್ಯೂಬ್ ಚಾನೆಲ್‌ಗಳಿಗೆ ಹೆಚ್ಚು ಸಂದರ್ಶನಗಳನ್ನು ನೀಡಿದ್ದಾರೆ. ತಮ್ಮ ಕ್ರಾಂತಿ ಚಿತ್ರದ ಬಗ್ಗೆ ಮಾತ್ರವಲ್ಲದೇ ಚಿತ್ರದ ಆಚೆಗಿನ ಕೆಲ ವಿಷಯಗಳ ಬಗ್ಗೆಯೂ ಸಹ ದರ್ಶನ್ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ದರ್ಶನ್‌ಗೆ
'ಚಾಲೆಂಜಿಂಗ್
ಸ್ಟಾರ್',
'ಡಿಬಾಸ್'
ಅನ್ನೋ
ಟೈಟಲ್
ಬಂದಿದ್ದು
ಯಾವಾಗ?
ಇನ್ನು ಅಂತರ್ಜಾಲದ ಯುಗದಲ್ಲಿ ಚಿತ್ರಗಳ ಪ್ರಚಾರ ಮಾಡಲು ದೊಡ್ಡ ವೇದಿಕೆಯಾಗಿರುವ ಯುಟ್ಯೂಬ್‌ನಲ್ಲಿ ದುಡ್ಡು ಕೊಟ್ಟರೆ ವೀಕ್ಷಣೆಗಳು ಸಿಗುತ್ತೆ ಎಂಬ ಗಂಭೀರ ಆರೋಪವನ್ನು ನಟ ದರ್ಶನ್ 'ಖಡಕ್ ಸಿನಿಮಾ' ಎಂಬ ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನವೊಂದರಲ್ಲಿ ಮಾಡಿದ್ದಾರೆ. ಸದ್ಯ ದರ್ಶನ್ ಅವರ ಈ ನೇರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಓಪನ್ ಆಗಿ ಹೇಳ್ತೀನಿ ಎಂದು ಯುಟ್ಯೂಬ್ ವೀಕ್ಷಣೆ ಬಗ್ಗೆ ಮಾತನಾಡಿದ ದರ್ಶನ್
ಸಂದರ್ಶನದಲ್ಲಿ ದಾಖಲೆಗಳ ಕುರಿತಾದ ಚರ್ಚೆ ಎದುರಾದಾಗ ಮಾತನಾಡಿದ ನಟ ದರ್ಶನ್ ಯುಟ್ಯೂಬ್ ಅನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ, ಇದರ ಬಗ್ಗೆ ಕೆಲವರು ಮಾತನಾಡಲ್ಲ, ನಾನು ಓಪನ್ ಆಗಿ ಹೇಳ್ತಿನಿ ಎಂದರು. ಯುಟ್ಯೂಬ್‌ನಲ್ಲಿ ಹಾಡೊಂದು ಬಿಡುಗಡೆಯಾದಾಗ ಒಂದು ಗಂಟೆಗೆ ಒಂದು ಮಿಲಿಯನ್ ವೀಕ್ಷಣೆ ಇರುತ್ತೆ, ಮೂರು ಗಂಟೆ ನಂತರ ಮೂರು ಮಿಲಿಯನ್, ನಂತರದ ದಿನಗಳಲ್ಲಿ ಐವತ್ತು ಹಾಗೂ ನೂರು ಮಿಲಿಯನ್ ತಲುಪುತ್ತವೆ, ಹೀಗೆ ಹಾಡನ್ನು ನೋಡಿದಷ್ಟು ಜನರಲ್ಲಿ 10% ಜನರು ಚಿತ್ರಮಂದಿರಕ್ಕೆ ಬಂದು ಚಿತ್ರವನ್ನು ವೀಕ್ಷಿಸಿದರೆ ಆ ಚಿತ್ರ ಸೂಪರ್ ಹಿಟ್ ಆಗಿಬಿಡುತ್ತೆ, ಆದರೆ ಯಾಕೆ ಆಗಲ್ಲ, ಏಕೆಂದರೆ ವೀಕ್ಷಣೆಗಳನ್ನು ದುಡ್ಡು ಕೊಟ್ಟು ಖರೀದಿಸಬಹುದು ಎಂದು ಹೇಳಿದರು.

ವ್ಯೂಸ್ ಖರೀದಿಸಬಹುದು, ಟ್ರೆಂಡಿಂಗ್ ಮಾಡೊಕಾಗಲ್ಲ
ಇನ್ನೂ ಮುಂದುವರೆದು ಮಾತನಾಡಿದ ದರ್ಶನ್ ಹಾಡುಗಳಿಗೆ ದುಡ್ಡು ಹಾಕಿ ವೀಕ್ಷಣೆಗಳನ್ನು ಕೊಂಡುಕೊಳ್ಳಬಹುದು, ಆದರೆ ಟ್ರೆಂಡಿಂಗ್ ಮಾಡೊಕಾಗಲ್ಲ ಎಂದರು. ಇದಕ್ಕೆ ತಮ್ಮದೇ ಕ್ರಾಂತಿ ಚಿತ್ರದ ಮೂರು ಹಾಡುಗಳನ್ನು ಉದಾಹರಣೆಯನ್ನಾಗಿ ನೀಡಿದ ದರ್ಶನ್ ನಮ್ಮ ಚಿತ್ರದ ಮೂರು ಹಾಡುಗಳು ಟ್ರೆಂಡ್ ಆಗ್ತಿವೆ, ಏಕೆಂದರೆ ನಿಜವಾದ ವೀಕ್ಷಕರು ಹಾಡುಗಳನ್ನು ವೀಕ್ಷಿಸುತ್ತಿದ್ದಾರೆ ಅದಕ್ಕೆ ಟ್ರೆಂಡ್ ಆಗ್ತಿದೆ, ದುಡ್ಡು ಕೊಟ್ಟು ವ್ಯೂಸ್ ಪಡೆದರೆ ಟ್ರೆಂಡ್ ಆಗಲ್ಲ ಎಂದು ತಿಳಿಸಿದರು.

ಕ್ರಾಂತಿ ನಾಲ್ಕನೇ ಹಾಡು ಯಾವಾಗ?
ಇನ್ನು ಕ್ರಾಂತಿ ಚಿತ್ರದ ಮೊದಲ ಮೂರು ಹಾಡುಗಳು ಈಗಾಗಲೇ ಬಿಡುಗಡೆಗೊಂಡಿದ್ದು, ಚಿತ್ರದ ನಾಲ್ಕನೇ ಹಾಡು 'ಡೋಂಟ್ ಮೆಸ್ ವಿಥ್ ಹಿಮ್' ಇದೇ ತಿಂಗಳ 14ರಂದು ಸಂಜೆ 7 ಗಂಟೆಗೆ ತುಮಕೂರಿನ ಬಿಎಚ್ ರಸ್ತೆಯಲ್ಲಿರುವ ಡಾ. ಶಿವಕುಮಾರ ಸ್ವಾಮೀಜಿ ವೃತ್ರದಲ್ಲಿ ಬಿಡುಗಡೆಗೊಳ್ಳಲಿದೆ. ಕ್ರಾಂತಿ ಚಿತ್ರದಲ್ಲಿ ಒಟ್ಟಾರೆ ಐದು ಹಾಡುಗಳಿದ್ದು, ಅಂತಿಮ ಹಾಡನ್ನು ಯಾವ ಊರಿನಲ್ಲಿ ಬಿಡುಗಡೆ ಮಾಡಲಿದ್ದರೋ ಕಾದು ನೋಡಬೇಕಿದೆ.