ಈ ಒಂದು ಕಾರಣಕ್ಕಾಗಿ 'ಮದುವೆ ಆಗಲ್ಲ' ಎಂದ ಸಾಯಿ ಪಲ್ಲವಿ
ಮಲಯಾಳಂ ಸೂಪರ್ ಹಿಟ್ 'ಪ್ರೇಮಂ' ಚಿತ್ರದ ಮೂಲಕ ರಾತ್ರೋರಾತ್ರಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡ ಚೆನ್ನೈ ಚೆಲುವೆ ಸಾಯಿ ಪಲ್ಲವಿ, ಚೊಚ್ಚಲ ಸಿನಿಮಾದಲ್ಲೇ ಅನೇಕ ಹುಡುಗರ ಮನಸ್ಸು ಕದ್ದರು.
'ಪ್ರೇಮಂ' ಗುಂಗಿನಲ್ಲಿರುವಾಗಲೇ 'ಫಿದಾ' ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು, ಅಲ್ಲೂ ಮೋಡಿ ಮಾಡಿದ್ರು. 26 ವರ್ಷ ಈ ನಟಿಯ ನಟನೆ ಹಾಗೂ ಸೌಂದರ್ಯಕ್ಕೆ ಟಾಲಿವುಡ್ ಬಾಕ್ಸ್ ಆಫೀಸ್ ಕೂಡ ಬೋಲ್ಡ್ ಆಯ್ತು.
ಅಲ್ಲಿಂದ ಸೌತ್ ಇಂಡಸ್ಟ್ರಿಯ ಬಹುಬೇಡಿಕೆಯ ನಟಿಯಾದ ಸಾಯಿ ಪಲ್ಲವಿ, ನಾನಿ ಅಭಿನಯದ ಎಂಸಿಎ, ಶಾರ್ವಾನಂದ ಜೊತೆ ಒಂದು ಸಿನಿಮಾ ಹಾಗೂ ಧನುಶ್ ಜೊತೆ 'ಮಾರಿ-2' ಮಾಡಿ ಅಭಿಮಾನಿಗಳನ್ನ ಕಾಡಿದ್ರು. ಇಂತಹ ನಟಿ ಈಗ ಮದ್ವೆ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡು ಎಲ್ಲರಿಗೂ ಶಾಕ್ ನೀಡಿದ್ದಾರೆ. ಏನದು? ಮುಂದೆ ಓದಿ....

ಮದ್ವೆ ಆಗಲ್ಲ ಎಂದ ಸಾಯಿ ಪಲ್ಲವಿ
28 ವರ್ಷದ ಸಾಯಿ ಪಲ್ಲವಿ ಈಗ ಮದುವೆ ವಿಚಾರದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಎಲ್ಲೇ ಹೋದ್ರು ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆ ಎದುರಾಗುತ್ತಿದೆ. ಈ ಪ್ರಶ್ನೆಯಿಂದ ದೂರವಿರಲು ನಿರ್ಧರಿಸಿದ ಸಾಯಿ ಪಲ್ಲವಿ ಮದುವೆ ಆಗುವುದಿಲ್ಲ ಎಂದು ಅಚ್ಚರಿ ನೀಡಿದ್ದಾರೆ.

ಮದುವೆ ಬೇಡ ಎನ್ನಲು ಕಾರಣ ಇದೆ
ಮದುವೆ ಆಗೋದಿಲ್ಲ ಎಂದು ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ ಸಾಯಿ ಪಲ್ಲವಿ ಯಾಕೆ ಎಂಬ ಕಾರಣವನ್ನ ಕೂಡ ಬಿಚ್ಚಿಟ್ಟಿದ್ದಾರೆ. ''ನನ್ನ ಭವಿಷ್ಯವನ್ನ ನನ್ನ ಪೋಷಕರಿಗಾಗಿ ಮೀಸಲಿಡುತ್ತೇನೆ. ಅವರ ಯೋಗಕ್ಷೇಮ ವಿಚಾರಿಸಿಕೊಳ್ಳುವುದು ನನ್ನ ಜವಾಬ್ದಾರಿ. ನನ್ನ ಕುಟುಂಬದ ಜೊತೆ ಇರಲು ನಾನು ನಿರ್ಧರಿಸಿದ್ದೇನೆ. ಮದುವೆಯಿಂದ ನನ್ನ ಜವಾಬ್ದಾರಿಯನ್ನ ಪೂರೈಸಲು ಸಾಧ್ಯವಿಲ್ಲ. ಹಾಗಾಗಿ ಮದುವೆ ಆಗಲ್ಲ'' ಎಂದಿದ್ದಾರೆ.

ನಿರ್ಮಾಪಕರ ನಷ್ಟ ಭರಿಸಿದ್ದ ನಟಿ
ಶಾರ್ವಾನಂದ್ ಮತ್ತು ಸಾಯಿ ಪಲ್ಲವಿ ಅಭಿನಯಿಸಿದ್ದ 'ಪಡಿ ಪಡಿ ಲೇಚೇ ಮನಸ್ಸು' ಸಿನಿಮಾ ಡಿಸೆಂಬರ್ 21 ರಂದು ಬಿಡುಗಡೆಯಾಗಿತ್ತು. ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಫ್ಲಾಫ್ ಆಯಿತು. ಹಾಗಾಗಿ, ನಿರ್ಮಾಪಕರಿಂದ ಬರಬೇಕಿದ್ದ ಬಾಕಿ ಹಣವನ್ನ ಪಡೆಯದೇ ಪ್ರೊಡ್ಯೂಸರ್ ಕಷ್ಟಕ್ಕೆ ಜೊತೆಯಾಗಿ ನಿಂತರು. ಇದು ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು.

ಸೂರ್ಯ ಚಿತ್ರದಲ್ಲಿ ನಟನೆ?
ಮಾರಿ 2 ಚಿತ್ರದ ಯಶಸ್ಸಿನ ನಂತರ ತಮಿಳು ನಟ ಸೂರ್ಯ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಇದರ ಜೊತೆ ತೆಲುಗಿನ ಚಿತ್ರವೊಂದರಲ್ಲಿ ನೆಕ್ಸಲಿಸ್ಟ್ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿಯೂ ಇದೆ.


Click it and Unblock the Notifications











