'ಪದ್ಮಾವತ್' ಸಿನಿಮಾ ನೋಡುತ್ತಿದ್ದ ವೇಳೆ ಯುವತಿಯ ಮೇಲೆ ಅತ್ಯಾಚಾರ
ದೀಪಿಕಾ ಪಡುಕೋಣೆ ಅಭಿನಯದ 'ಪದ್ಮಾವತ್' ಸಿನಿಮಾ ನೋಡುತ್ತಿದ್ದಾಗ ಯುವತಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಸಿಕಂದರಾಬಾದ್ ನಲ್ಲಿ ನಡೆದಿದೆ.
ಯುವಕ ಮತ್ತು ಯುವತಿ ಇಬ್ಬರು ಸಿಕಂದರಾಬಾದ್ ನಲ್ಲಿರುವ ಪ್ರಶಾಂತ್ ಚಿತ್ರಮಂದಿರದಲ್ಲಿ 'ಪದ್ಮಾವತ್' ಸಿನಿಮಾ ನೋಡಲು ಹೋಗಿದ್ದರು. ಈ ವೇಳೆ ಸ್ನೇಹಿತನೇ ಆ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಸ್ವತಃ ಹುಡುಗಿಯೇ ದೂರು ನೀಡಿದ್ದಾಳೆ.
ಅಂದ್ಹಾಗೆ, ಇವರಿಬ್ಬರಿಗೆ ಫೇಸ್ ಬುಕ್ ನಲ್ಲಿ ಪರಿಚಯವಾಗಿತ್ತು. ಎರಡು ಬಾರಿ ನೇರವಾಗಿ ಭೇಟಿಯಾಗಿದ್ದರು. ಎರಡನೇ ಸಲ ಭೇಟಿಯಾದಾಗ 'ಪದ್ಮಾವತ್' ಸಿನಿಮಾಗೆ ಹೋಗಲು ನಿರ್ಧರಿಸಿ, ಯುವಕ ಆ ಯುವತಿಯನ್ನ ಕರೆದುಕೊಂಡು ಹೋಗಿದ್ದಾನೆ. ಚಿತ್ರಮಂದಿರದಲ್ಲಿ ಕಡಿಮೆ ಜನ ಇದ್ದ ಹಿನ್ನೆಲೆ ಬಲತ್ಕಾರ ಮಾಡಿದ್ದಾನೆ ಎನ್ನಲಾಗಿದೆ.

ಜನವರಿ 29 ರಂದು ಈ ಘಟನೆ ನಡೆದಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಇನ್ನು ಸರಿಯಾದ ಭದ್ರತೆ ಇಲ್ಲದ ಕಾರಣ ಪ್ರಶಾಂತ್ ಚಿತ್ರಮಂದಿರದ ವಿರುದ್ಧವೂ ದೂರು ದಾಖಲಾಗಿದೆ.
English summary
When a young woman was raped while watching Padmavat movie at Sikandrabad film theater.


Click it and Unblock the Notifications