ನಟಿಗೆ ಬ್ಲೂ ಫಿಲಂನಲ್ಲಿ ನಟಿಸ್ತೀರಾ? ಎಂದು ಕೇಳಿದ್ದ ಯೂಟ್ಯೂಬರ್‌ಗೆ ಜಾಡಿಸಿದ ಟೀಂ: ಬುದ್ದಿ ಕಲಿಯದ ಆತ ಮಾಡಿದ್ದೇನು?

ಏಪ್ರಿಲ್ 7ಕ್ಕೆ ಕನ್ನಡದ 'ಪೆಂಟಗನ್' ಸಿನಿಮಾ ಬಿಡುಗಡೆ ಆಗ್ತಿದೆ. ಚಿತ್ರದಲ್ಲಿ ಕಿರುತೆರೆ ನಟಿ ತನಿಷಾ ಕುಪ್ಪಂಡ ಸಖತ್ ಬೋಲ್ಡ್ ಆಗಿ ನಟಿಸಿದ್ದಾರೆ. ಈ ಬಗ್ಗೆ ಅವರು ಸಿನಿಮಾ ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ಇದೇ ವೇಳೆ ಒಬ್ಬ ಯೂಟ್ಯೂಬರ್‌ ನಟಿಯ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಸಿನಿಮಾದಲ್ಲಿ ಇಷ್ಟು ಬೋಲ್ಡ್ ಆಗಿ ನಟಿಸಿದ್ದೀರಲ್ಲ, ಬ್ಲೂ ಫಿಲಂನಲ್ಲೂ ನಟಿಸ್ತೀರಾ? ಎಂದು ಕೇಳಿದ್ದಾನೆ.

ಆನ್‌ಲೈನ್ ಮೋಸ, ಅಪರಾಧ ಜಗತ್ತು, ಯುವ ಜನತೆಯ ಭವಿಷ್ಯದ ಕುರಿತಾದ 'ಪೆಂಟಗನ್' ಚಿತ್ರದಲ್ಲಿ ತನಿಷಾ ಲಿಪ್‌ಲಾಕ್ ಹಾಗೂ ಬ್ಯಾಕ್‌ಲೆಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಪ್ರಚಾರದ ಹೆಸರಿನಲ್ಲಿ ಯೂಟ್ಯೂಬರ್ ಕೆಟ್ಟ ವರ್ತನೆ ತೋರಿದ್ದಾನೆ. ಚಿತ್ರದ ಸಂದರ್ಶನದಲ್ಲಿ ನಟಿಗೆ ಕೇಳಬಾರದ ಪ್ರಶ್ನೆ ಕೇಳಿದ್ದಾನೆ. ಪತ್ರಕರ್ತನ ಸೋಗಿನಲ್ಲಿ ಬಂದಿದ್ದ ವ್ಯಕ್ತಿ ನಟಿಯನ್ನು ಸಂದರ್ಶನ ಮಾಡ್ತೀನಿ ಅಂತ ಹೇಳಿ ಕೆಟ್ಟದ್ದಾಗಿ ನಡೆದುಕೊಂಡಿದ್ದಾನೆ. ನಟಿ ತನಿಷಾ ಕುಪ್ಪುಂದಗೆ ಅಸಹ್ಯಕರ ಪ್ರಶ್ನೆ ಕೇಳಿದ್ದಾನೆ.

YouTuber asked Pentagan movie actress Tanisha kuppada will you act in nude film

ನೀವು ನ್ಯೂಡ್ ಚಿತ್ರಗಳಲ್ಲಿ ನಟಿಸ್ತೀರಾ? ಎಂದು ಆತ ಪ್ರಶ್ನೆ ಕೇಳಿದ ಕೂಡಲೇ ನಟಿ ಗರಂ ಆಗಿದ್ದಾರೆ. "ಹಾಗಿದ್ರೆ ನಾನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರಬಾರದಿತ್ತು. ನೀಲಿ ಸಿನಿಮಾ ಇಂಡಸ್ಟ್ರಿಯಲ್ಲೇ ಇರಬೇಕಿತ್ತು. ಬೋಲ್ಡ್ ಆಗಿ ನಟಿಸಿದ ಮಾತ್ರಕ್ಕೆ ಇಂತಹ ಪ್ರಶ್ನೆ ಕೇಳುವುದರಲ್ಲಿ ಅರ್ಥವಿಲ್ಲ. ನೀಲಿ ಚಿತ್ರದ ತಾರೆಯರು ಬೆತ್ತಲಾಗುತ್ತಾರೆ. ನಾನು ನೀಲಿ ಚಿತ್ರದ ತಾರೆಯಲ್ಲ. ಯಾಕೆ ಈ ರೀತಿ ಪ್ರಶ್ನೆ ಮಾಡ್ತಿದ್ದೀರಾ.? ಪ್ರಶ್ನೆ ಮಾಡುವುದಕ್ಕು ಮುನ್ನ ಕಾಮನ್ ಸೆನ್ಸ್ ಇರಬೇಕು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರು ಬೆತ್ತಲೆ ಸಿನಿಮಾ ಮಾಡ್ತಿದ್ದಾರೆ? ಯಾಕೆ ಈ ರೀತಿ ಅಸಭ್ಯವಾಗಿ ಪ್ರಶ್ನೆಯನ್ನ ಕೇಳುತ್ತಿದ್ದೀರಾ?" ಎಂದು ಆಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೂಡಲೇ ಚಿತ್ರತಂಡ ಕೂಡ ಆತನನ್ನು ತರಾಟೆಗೆ ತೆಗೆದುಕೊಂಡಿದೆ. ಅಸಂಬದ್ಧ ಪ್ರಶ್ನೆ ಕೇಳಿದ್ದಕ್ಕೆ ಹಿಗ್ಗಾಮುಗ್ಗ ಜಾಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ನಂತರ ಮಲ್ಲೇಶ್ವರಂ ಪೊಲೀಸ್‌ ಠಾಣೆಯಲ್ಲಿ ಎನ್‌ಸಿಆರ್ ಮಾಡಿಸಿದ್ದಾರೆ. ಯುವಕನ ಭವಿಷ್ಯ ಹಾಳಾಗುತ್ತದೆ ಎಂದು ಮತ್ತೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೇ ಭೂಪ ಮತ್ತೆ ತನ್ನ ಚಾಳಿ ತೋರಿಸಿದ್ದಾನೆ. ಮಧ್ಯರಾತ್ರಿ ನಟಿ ತನಿಷಾಗೆ ಕರೆ ಮಾಡಿ ಕಾಟ ಕೊಟ್ಟಿದ್ದಾನೆ. ಕ್ಷಮೆ ಕೇಳಿದರೂ ಕೂಡ ಯಾಕೆ ಅಷ್ಟೆಲ್ಲಾ ಗಲಾಟೆ ಮಾಡಿದ್ದು ಎಂದು ಕೇಳಿದ್ದಾನೆ ಎನ್ನಲಾಗಿದೆ.

ಇದೇ ರೀತಿ ಸಾಕಷ್ಟು ನಟಿಯರ ಜೊತೆ ಈತ ಕೆಟ್ಟದಾಗಿ ನಡೆದುಕೊಂಡಿದ್ದಾನೆ ಎನ್ನುವ ಮಾತುಗಳು ಕೇಳಿ ಬರ್ತಿದೆ. ಮತ್ತೊಂದು ಕಡೆ ಏಪ್ರಿಲ್ ಫೂಲ್ ವಿಡಿಯೋ ವೈರಲ್ ಆಗಿದೆ ಎಂದು ಆತ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ನಟಿ ತನಿಷಾ ಸುದ್ದಿಗೋಷ್ಠಿ ನಡೆಸಿ ಆತನ ಬಗ್ಗೆ ಮಾತನಾಡಲು ನಿರ್ಧರಿಸಿದ್ದಾರೆ.

YouTuber asked Pentagan movie actress Tanisha kuppada will you act in nude film

'ಪೆಂಟಗನ್' 5 ಕಥೆಗಳಿರುವ ವಿಭಿನ್ನ ಸಿನಿಮಾ. ರಾಘು ಶಿವಮೊಗ್ಗ ನಿರ್ದೇಶನದ ಕತೆಯಲ್ಲಿ ನಟಿ ತನಿಷಾ ಕಾಣಿಸಿಕೊಂಡಿದ್ದಾರೆ. 'ಕಾಮನ ಬಿಲ್ಲು ಮೂಡುತ್ತಿದೆ' ಹಾಡಿನಲ್ಲಿ ಆಕೆ ಬೋಲ್ಡ್ ಆಗಿ ದರ್ಶನ ಕೊಟ್ಟಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ, ನಾಗಾರ್ಜುನ ಶರ್ಮಾ ಸಾಹಿತ್ಯ ಹಾಡಿಗಿದೆ. ಸಂತೋಷ್ ವೆಂಕಿ ಮತ್ತು ಇಂಚರಾ ರಾವ್ ಹಾಡ ಹಾಡಿದ್ದಾರೆ.

More from Filmibeat

English summary
YouTuber asked Pentagan movie actress Tanisha kuppada will you act in nude film. Actress angry on Youtuber for his nonsense question. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X