For Quick Alerts
  ALLOW NOTIFICATIONS  
  For Daily Alerts

  ಕೊಲೆಗಾರ ಮತ್ತು ರಾಜ್‌ ಶೆಟ್ಟಿ: ನ್ಯೂಯಾರ್ಕ್ ಮಹಿಳೆಯರು ಆರಿಸಿದ್ದು ಯಾರನ್ನು?

  |

  ರಾಜ್ ಬಿ ಶೆಟ್ಟಿ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಮತ್ತು ನಿರ್ದೇಶಕ. ಅವರು ನಿರ್ದೇಶಿಸಿ, ನಟಿಸಿರುವ 'ಗರುಡಗಮನ ವೃಷಭ ವಾಹನ' ಸೂಪರ್ ಹಿಟ್ ಆಗಿದೆ.

  'ಗರುಡಗಮನ ವೃಷಭ ವಾಹನ' ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆದ ಬಳಿಕ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ರಾಜ್ ಬಿ ಶೆಟ್ಟಿ ಜನಪ್ರಿಯರಾಗಿದ್ದಾರೆ. ಅವರ ಕಚ್ಚಾ ಸ್ಟೈಲ್ ಹಾಗೂ ನಟನೆ ಕಂಡು ವಾವ್ ಎಂದಿದ್ದಾರೆ.

  ದುಬೈನಲ್ಲಿ ರಾಜ್ ಕಪ್: ಹೆಡ್ ಬುಷ್, ಕಬ್ಜ ಸಿನಿಮಾದ್ದೇ ಹವಾ! ದುಬೈನಲ್ಲಿ ರಾಜ್ ಕಪ್: ಹೆಡ್ ಬುಷ್, ಕಬ್ಜ ಸಿನಿಮಾದ್ದೇ ಹವಾ!

  ವಿಷಯ ಅದಲ್ಲ, ರಾಜ್ ಬಿ ಶೆಟ್ಟಿ ಅವರ ಚಿತ್ರವನ್ನು ಬಳಸಿಕೊಂಡು ಯೂಟ್ಯೂಬರ್ ಒಬ್ಬ ನ್ಯೂಯಾರ್ಕ್‌ನಲ್ಲಿ ಸಾಮಾಜಿಕ ಪ್ರಯೋಗವೊಂದನ್ನು (ಸೋಷಿಯಲ್ ಎಕ್ಸ್‌ಪೆರಿಮೆಂಟ್) ಮಾಡಿದ್ದಾನೆ. ರಾಜ್ ಶೆಟ್ಟಿಯ ಚಿತ್ರ ಬಳಸಿಕೊಂಡು 'ಮುಖ ನೋಡಿ ಮಣೆ ಹಾಕಬಾರದು ಎಂಬ ವಿಷಯವನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದಾನೆ. ಏನಿದು ಸೋಷಿಯಲ್ ಎಕ್ಸ್‌ಪೆರಿಮೆಂಟ್? ಇಲ್ಲಿದೆ ಮಾಹಿತಿ.

  ರಾಜ್ ಬಿ ಶೆಟ್ಟಿ ಚಿತ್ರ ತೋರಿಸಿ ಪ್ರಶ್ನೆ

  ರಾಜ್ ಬಿ ಶೆಟ್ಟಿ ಚಿತ್ರ ತೋರಿಸಿ ಪ್ರಶ್ನೆ

  ಕರಿಮ್ ಜೋವಿಯನ್ ಹೆಸರಿನ ಯೂಟ್ಯೂಬರ್, ನಟ, ರಾಜ್ ಬಿ ಶೆಟ್ಟಿಯ ಚಿತ್ರ ಬಳಸಿಕೊಂಡು ನ್ಯೂಯಾರ್ಕ್‌ನಲ್ಲಿ ಸೋಷಿಯಲ್ ಎಕ್ಸ್‌ಪೆರಿಮೆಂಟ್ ಒಂದನ್ನು ಮಾಡಿದ್ದಾನೆ. ರಾಜ್ ಬಿ ಶೆಟ್ಟಿಯವರ ಹಳೆಯ ಚಿತ್ರ ಹಾಗೂ ಅವರ ಪಕ್ಕದಲ್ಲೇ ಕುಖ್ಯಾತ ಸರಣಿ ಕೊಲೆಗಾರನೊಬ್ಬನ ಚಿತ್ರವನ್ನು ಜನರಿಗೆ ತೋರಿಸಿ, ಇವರಿಬ್ಬರಲ್ಲಿ ನೀವು ಯಾರನ್ನು ನಂಬುತ್ತೀರಿ. ಯಾರು ಒಳ್ಳೆಯವನು ಎನ್ನಿಸುತ್ತದೆ? ಯಾರೊಂದಿಗೆ ನೀವು ಮಾತನಾಡಲು ಇಷ್ಟಪಡುತ್ತೀರಿ? ಇಬ್ಬರಲ್ಲಿ ಯಾರೊಟ್ಟಿಗೆ ಗೆಳೆತನ ಬಯಸುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

  ಹಲವರು ಕೊಲೆಗಾರನನ್ನೇ ಆಯ್ಕೆ ಮಾಡಿದ್ದಾರೆ!

  ಹಲವರು ಕೊಲೆಗಾರನನ್ನೇ ಆಯ್ಕೆ ಮಾಡಿದ್ದಾರೆ!

  ಬಹುಪಾಲು ಮಂದಿ ರಾಜ್ ಬಿ ಶೆಟ್ಟಿಯ ಬದಲಿಗೆ ತಲೆತುಂಬ ಕೂದಲಿರುವ, ನೋಡಲು ಸುಂದರವಾಗಿ ಕಾಣುವ ಕೊಲೆಗಾರನನ್ನು ಆಯ್ಕೆ ಮಾಡಿದ್ದಾರೆ. ಕೆಲವರು ಮಾತ್ರವೇ ರಾಜ್ ಬಿ ಶೆಟ್ಟಿಯನ್ನು ಆಯ್ಕೆ ಮಾಡಿದ್ದಾರೆ. ಒಬ್ಬನಂತೂ ರಾಜ್ ಬಿ ಶೆಟ್ಟಿಯ ಕಣ್ಣುಗಳನ್ನು ಗಮನಿಸಿ ಈತ ಒಳ್ಳೆಯವಂತೆ ಕಾಣಿಸುತ್ತಾನೆ, ತನಗನ್ನಿಸಿದಂತೆ ಜೀವನ ನಡೆಸುವಾತ ಎಂಬಂತೆ ಕಾಣಿಸುತ್ತಾನೆ ಎಂದಿದ್ದಾನೆ. ಸ್ವತಃ ಯೂಟ್ಯೂಬರ್ ಕರಿಮ್ ಜೋವಿಯನ್ ಸಹ ರಾಜ್ ಬಿ ಶೆಟ್ಟಿ ಒಬ್ಬ ಅದ್ಭುತ ನಟ, ತಾನು ಇದ್ದಂತೆಯೇ ತೆರೆ ಮೇಲೆ ಕಾಣಿಸಿಕೊಳ್ಳಲು ಇಷ್ಟಪಡುವಾತ ಎಂದು ವಿಡಿಯೋದ ಅಂತ್ಯದಲ್ಲಿ ಹೇಳಿದ್ದಾನೆ.

  ರಾಜ್ ಬಿ ಶೆಟ್ಟಿ ಹೇಳಿದ್ದೂ ಅದನ್ನೇ!

  ರಾಜ್ ಬಿ ಶೆಟ್ಟಿ ಹೇಳಿದ್ದೂ ಅದನ್ನೇ!

  ನೋಡಲು ಸುಂದರವಾಗಿ ಕಾಣುವವರು ಒಳ್ಳೆಯರೆಂದು ಅರ್ಥವಲ್ಲ ಎಂಬುದನ್ನು ತೋರಿಸಲು, ಕಲಿಸಲು ಈ ಸೋಷಿಯಲ್ ಎಕ್ಸ್‌ಪೆರಿಮೆಂಟ್ ಅನ್ನು ಯೂಟ್ಯೂಬರ್‌ ಕರಿಮ್ ಜೋವಿಯನ್ ಮಾಡಿದ್ದಾನೆ. ಅಸಲಿಗೆ ರಾಜ್ ಬಿ ಶೆಟ್ಟಿ ಸಹ ತಮ್ಮ ಮೊದಲ ಸಿನಿಮಾ 'ಒಂದು ಮೊಟ್ಟೆಯ ಕತೆ'ಯಲ್ಲಿ ಇದನ್ನೇ ಹೇಳಲು ಯತ್ನಿಸಿದ್ದರು. ವ್ಯಕ್ತಿತ್ವಕ್ಕೂ ದೇಹಾಕಾರ, ಸೌಂದರ್ಯಕ್ಕೂ ಸಂಬಂಧವಿಲ್ಲ ಎಂಬುದನ್ನೇ ಹಾಸ್ಯದ ಧಾಟಿಯಲ್ಲಿ ಹೇಳಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಯಿತು.

  ಯೂಟ್ಯೂಬರ್ ಕರಿಮ್ ಜೋವಿಯನ್

  ಯೂಟ್ಯೂಬರ್ ಕರಿಮ್ ಜೋವಿಯನ್

  ಯೂಟ್ಯೂಬರ್ ಕರಿಮ್ ಜೋವಿಯನ್ ಈ ರೀತಿಯ ಸಾಕಷ್ಟು ಸೋಷಿಯಲ್ ಎಕ್ಸ್‌ಪೆರಿಮಿಂಟ್‌ಗಳನ್ನು ಮಾಡಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾನೆ. ಮುಸ್ಲಿಂ ವ್ಯಕ್ತಿಯನ್ನು ಹೇಗೆ ಜನ ನೋಡುತ್ತಾರೆ, ಹಿಜಾಬ್ ಧರಿಸಿದ ಮಹಿಳೆಯೊಂದಿಗೆ ಜನ ಹೇಗೆ ಟ್ರೀಟ್ ಮಾಡುತ್ತಾರೆ? ಪುರುಷನೊಬ್ಬ ಮಹಿಳೆಯಂತೆ ವೇಷ ಧರಿಸಿದರೆ ಜನ ಹೇಗೆ ಬಿಹೇವ್ ಮಾಡುತ್ತಾರೆ. ಹೀಗೆ ಅನೇಕ ಸಾಮಾಜಿಕ ಪ್ರಯೋಗಗಳನ್ನು ಆತ ಮಾಡಿದ್ದಾನೆ. ಈತನಂತೆ ಸೋಷಿಯಲ್ ಎಕ್ಸ್‌ಪೆರಿಮೆಂಟ್ ಮಾಡುವ ಚಾನೆಲ್‌ಗಳು ಯೂಟ್ಯೂಬ್‌ನಲ್ಲಿ ಲಭ್ಯವಿವೆ.

  English summary
  YouTuber Karim Jovian did a social experiment in New York using Sandalwood actor Raj B Shetty.
  Sunday, September 25, 2022, 19:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X