ನಾನು ಮದ್ವೆಯಾಗಿದ್ದು ಸ್ವಇಚ್ಛೆಯಿಂದ ; ಮುಕಳೆಪ್ಪ ವಿರುದ್ಧ ತಂದೆ-ತಾಯಿಯ ಲವ್ ಜಿಹಾದ್ ಆರೋಪಕ್ಕೆ ಪುತ್ರಿ ತಿರುಗೇಟು

ಪ್ರೀತಿ ಹೃದಯದ ಭಾಷೆ ಎನ್ನುವುದು ಲೋಕಾರೂಢಿ. ಆದರೆ ಕಾಲ ಕಳೆದಂತೆ ಪ್ರೀತಿ ಹುಟ್ಟುವ ಹೃದಯವೂ ಕೂಡ ವ್ಯಾವಹಾರಿಕವಾಗಿದೆ. ಇನ್ನು ಕೆಲವೊಮ್ಮೆ ಹೃದಯದಲ್ಲಿ ಅರಳಿದ ಪ್ರೀತಿಗೆ ಜಾತಿ-ಧರ್ಮ- ಅಂತಸ್ತು-ಮನೆತನ- ಸಂಪ್ರದಾಯ-ಗೌರವ ಇತ್ಯಾದಿ ಮನುಷ್ಯ ನಿರ್ಮಿತ ಗೋಡೆಗಳು ಅಡ್ಡಿಯಾಗುತ್ತಾವೆ.ಆಗ ಕೆಲವರ ಪ್ರೀತಿ ಕಮರಿ ಹೋಗುತ್ತೆ.ಇನ್ನು ಕೆಲವರ ಮನೆಯಲ್ಲಿ ಹೆತ್ತವರ ವಿರೋಧದಿಂದ ಮನೆಯಿಂದ ಓಡಿ ಹೋಗಿ ಮದುವೆಯಾಗ್ಲೇ ಬೇಕಾದ ಅನಿವಾರ್ಯತೆ ಎದುರಾಗುತ್ತೆ.

ಈ ಅನಿವಾರ್ಯತೆಗೆ ಧಾರವಾಡ ಜಿಲ್ಲೆಯ ಗಾಯತ್ರಿ ಸಿಲುಕಿದ್ದರಾ ಇದೇ ಅನಿವಾರ್ಯತೆಯಿಂದ ''ಕ್ವಾಜಾ ಬಂದೇನ್‌ವಾಜಾ ಮಹಮದ್ ಹನೀಫ್‌'' ಅಲಿಯಾಸ್ ಮುಕಳೆಪ್ಪ ಜೊತೆ ಮದುವೆಯಾದರಾ ಗೊತ್ತಿಲ್ಲ. ಆದರೆ ಸದ್ಯ ಮುಕಳೆಪ್ಪ ಸುತ್ತ ಲವ್ ಜಿಹಾದ್ ಹುತ್ತ ಬೆಳೆದಿದೆ. ತಮ್ಮ ಮಗಳು ಗಾಯತ್ರಿಯ ತಲೆ ಕೆಡಿಸಿ ಮುಕಳೆಪ್ಪ ಮದುವೆಯಾಗಿದ್ದಾನೆ ಎನ್ನುವ ಆರೋಪ ಕೂಡ ಗಾಯತ್ರಿ ಅವರ ಕುಟುಂಬ ಮಾಡಿದೆ.

youtubers-wife-gayathri-slams-love-jihad-claims-in-viral-video-defending-her-marriage-to-mukaleppaYo

ಇದರ ನಡುವೆ ಇದೀಗ ಈ ಎಲ್ಲಾ ವಿವಾದಕ್ಕೆ ಖುದ್ದು ''ಮುಕಳೆಪ್ಪ'' ಜೊತೆ ಮದುವೆಯಾದ ''ಗಾಯತ್ರಿ'' ಉತ್ತರವನ್ನು ನೀಡಿದ್ದಾರೆ. ತಮ್ಮ ತಂದೆ ತಾಯಿಯ ತಲೆಯನ್ನು ಯಾರೋ ಕೆಡೆಸಿದ್ದಾರೆ ಎಂದು ಹೇಳಿದ್ದಾರೆ. ಈ ಕುರಿತು ವಿಡಿಯೋ ಮೂಲಕ ತಮ್ಮ ಮನದ ಮಾತು ಹಂಚಿಕೊಂಡಿರುವ ಗಾಯತ್ರಿ ಜಾಲಿಹಾಳ್ ಇತ್ತೀಚೆಗೆ ನನ್ನ ಗಂಡನ ಬಗ್ಗೆ ಮುಕಳೆಪ್ಪ ಲವ್ ಜಿಹಾದ್.. ಮುಕಳೆಪ್ಪ ಲವ್ ಜಿಹಾದ್.. ಎಂದು ಏನೇನೋ ಆರೋಪಗಳನ್ನು ಮಾಡುತ್ತಿದ್ದಾರೆ, ಸುದ್ದಿಯನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಲವ್ ಜಿಹಾದ್ ಏನು ಆಗಿಲ್ಲ. ನಾನು ಸ್ವಇಚ್ಛೆಯಿಂದಲೇ ಪ್ರೀತಿಸಿ ಮದುವೆಯಾಗಿದ್ದೇ ಎಂದು ಹೇಳಿರುವ ಗಾಯತ್ರಿ, ರಿಜಿಸ್ಟರ್ ಮ್ಯಾರೇಜ್ ಕೂಡ ನಾವು ಮಾಡಿಕೊಂಡಿದ್ದೇವೆ, ನ್ಯೂಸ್ ಎದುರು ಮೀಡಿಯಾದವರ ಎದುರು ನಮ್ಮವ್ವ ಏನೇನೋ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಮಾಧ್ಯಮದವರ ಮುಂದೆ ನಮ್ಮವ್ವ ಏನೇನೋ ಹೇಳಿಕೆ ಕೊಡ್ತಿದ್ದಾಳೆ ಅದೆಲ್ಲಾ ಸುಳ್ಳು ಎಂದಿರುವ ಗಾಯತ್ರಿ, ನಮ್ಮವ್ವ ಮದುವೆಯಾದ ಮೇಲೆ ನಮಗೆ ತುಂಬಾ ಬೆಂಬಲ ನೀಡಿದ್ದಾರೆ. ಅದಕ್ಕೆ ಬೇಕಾದಂತಹ ಸಾಕ್ಷಿಗಳೆಲ್ಲವೂ ನನ್ನ ಬಳಿ ಇವೆ, ಅದೆಲ್ಲವನ್ನೂ ನಾನೇ ಸಮಯ ಬಂದಾಗ ನಿಮಗೆ ತೋರಿಸ್ತೀನಿ, ಆದರೆ.. ಈಗ ಅವಳು ಯಾರ ಮಾತು ಕೇಳಿ ಇದೆಲ್ಲಾ ಮಾಡುತ್ತಿದ್ದಾಳೆ ಎನ್ನುವುದು ನನಗೆ ಗೊತ್ತಿಲ್ಲ ಎಂದಿದ್ದಾರೆ.

ಮುಂದುವರೆದು ಹುಡುಗಿ ಮೈಂಡ್ ವಾಶ್ ಮಾಡಿ ಮುಕಳೆಪ್ಪ ಕರೆದುಕೊಂಡು ಹೋಗಿದ್ದಾನೆ ಎಂದು ಹೇಳುತ್ತಿದ್ದಾರೆ. ನನಗೆ ಯಾರು ಮೈಂಡ್ ವಾಶ್ ಮಾಡಿಲ್ಲ. ಏನೂ ಮಾಡಿಲ್ಲ ನಾನು ಸ್ವಇಚ್ಚೆಯಿಂದನೆ ಇವರ ಜೊತೆಗೆ ಬಂದೀನಿ ಎಂದು ಹೇಳಿರುವ ಗಾಯತ್ರಿ ನನಗೆ ನನ್ ಗಂಡನಿಗೆ, ನನ್ನ ಗಂಡನ ಮನಯವರಿಗೆ ಏನಾದ್ರು ತೊಂದರೆ ಆದರೆ ಕಾನೂನು ನ್ಯಾಯ ಸಿಗಬೇಕೆಂದು ನಾನು ಕೇಳಿಕೊಳ್ಳುತ್ತೇನೆ ಎಂದು ವಿಡಿಯೋ ಮೂಲಕ ಹೇಳಿದ್ದಾರೆ. ನನ್ನ ಅಪ್ಪ ಅವ್ವಗ ಮೈಂಡ್ ವಾಶ್ ಮಾಡಿ ಅವರಿಂದ ಸುಳ್ಳು ಸುದ್ದಿ ಹೇಳಿಸ್ತಿದಾರೆ. ಇದನ್ನು ಯಾರು ನಂಬಬಾರದು ಎಂದು ಮುಕಳೆಪ್ಪ ಪತ್ನಿ ಗಾಯತ್ರಿ ಮನವಿ ಮಾಡಿಕೊಂಡಿದ್ದಾರೆ.

youtubers-wife-gayathri-slams-love-jihad-claims-in-viral-video-defending-her-marriage-to-mukaleppayo

ಸದ್ಯ ಗಾಯತ್ರಿ ಮಾತನಾಡಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವು ಪ್ರಶ್ನೆಗಳ ಜೊತೆ ಚರ್ಚೆಗೆ ಕೂಡ ನಾಂದಿಯನ್ನು ಈ ವಿಡಿಯೋ ಹಾಡಿದೆ. ಇನ್ನುಳಿದಂತೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯತ್ರಿ ಅವರ ತಂದೆ ತಾಯಿ ಮಾಧ್ಯಮದವರ ಮುಂದೆ ದಿನ ನಿತ್ಯ ಹೇಳಿಕೆ ನೀಡುತ್ತಿದ್ದು ನನ್ನ ಮಗಳ ತಲೆ ಕೆಡಿಸಿ ಮುಕಳೆಪ್ಪ ಮದುವೆಯಾಗಿದ್ದಾನೆ ಎಂದು ಆರೋಪವನ್ನು ಮಾಡುತ್ತಿದ್ದಾರೆ. ನಮ್ಮ ಮಗಳು ನಮಗೆ ಬೇಕು ಎಂದು ಕಣ್ಣೀರಿಡುತ್ತಿದ್ದಾರೆ.

More from Filmibeat

English summary
In a shocking viral video, Gayathri, the wife of YouTuber Mukaleppa, firmly denies the "love jihad" allegations, stating her marriage was a choice made out of love. Watch her powerful statement that's sparking a new debate.
Read more about: love social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X