ಅಜಯ್ ರಾವ್ ಧರಿಸಿದ್ದ ವಾಚ್ ಯಾವುದು ಗೊತ್ತೇ? ಇದರ ಬೆಲೆ ಎಷ್ಟು?

By ಎಸ್ ಸುಮಂತ್

ನಟ ಅಜಯ್ ರಾವ್ ಒಂದು ಕಾಲದಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ಕೊಟ್ಟಂತ ಹೀರೋ. ಆರಂಭದಲ್ಲಿಯೇ ಆಯ್ಕೆ ಮಾಡಿಕೊಂಡಿದ್ದ ಎಕ್ಸ್ ಕ್ಯೂಸ್ ಮೀ ಸಿನಿಮಾ ಕೈ ಹಿಡಿದಿತ್ತು. ಬಳಿಕ ಕೃಷ್ಣನ ಹೆಸರಲ್ಲಿ ಬಂದಂತ 'ಕೃಷ್ಣನ್ ಲವ್ ಸ್ಟೋರಿ', 'ಕೃಷ್ಣ ಲೀಲಾ', 'ಕೃಷ್ಣ ರುಕ್ಕು' ಸಿನಿಮಾಗಳು ಕೂಡ ಯಶಸ್ಸು ಕಂಡಿತ್ತು. ಸಕ್ಸಸ್ ರೇಟ್ ಏರಿಕೆಯಾಗುತ್ತಿರುವಾಗಲೇ ಫೇಲ್ಯೂರ್ ರೇಟ್ ಕೂಡ ಜಾಸ್ತಿಯಾಗಿತ್ತು. ಹೀಗಾಗಿ ಅಜಯ್ ರಾವ್ ಒಂದೊಳ್ಳೆ ಬ್ರೇಕ್‌ಗಾಗಿ ಕಾಯುತ್ತಾ ಇದ್ದರು. ಆ ಬ್ರೇಕ್ ಅನ್ನು 'ಯುದ್ಧಕಾಂಡ ಚಾಪ್ಟರ್ 2' ಸಿನಿಮಾದಲ್ಲಿ ನಿರೀಕ್ಷೆ ಮಾಡ್ತಾ ಇದ್ದಾರೆ.

ಅಜಯ್ ರಾವ್ 2003ರಲ್ಲಿ ಸಿನಿಮಾ ಇಂಡಸ್ಟ್ರಿಗೆ ಬಂದವರು‌. ಪ್ರತಿಭೆ ಕೂಡ ಇರುವಂತಹ ನಟ. ಆದರೆ‌ ಇಂಡಸ್ಟ್ರಿನಲ್ಲಿ ತನ್ನನ್ನ ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಿಲ್ಲ ಎಂಬ ಬೇಸರವೂ ಅವರಲ್ಲಿದೆ. ಆ ನೋವನ್ನ ಈಗಾಗಲೇ ಹೊರಗೂ ಹಾಕಿದ್ದಾರೆ. ಅದರಲ್ಲೂ ಸಿನಿಮಾ ಇಂಡಸ್ಟ್ರಿ ಅಂದ್ರೆನೇ ಅಲ್ಲಿ ಲಕ್ ಬಹಳ ಮುಖ್ಯವಾಗುತ್ತದೆ. ಪ್ರತಿಭೆ ಜೊತೆಗೆ ಅದೃಷ್ಟವೂ ಕೈಹಿಡಿದಾಗ ಮಾತ್ರ ಒಳ್ಳೊಳ್ಳೆ ಅವಕಾಶಗಳು ಸಿಗುವುದು. ಎರಡು ಬಹಳ ಮುಖ್ಯ ಅಂತಾನೇ ಅಜಯ್ ರಾವ್ ಕೂಡ ಹೇಳ್ತಾರೆ.

Yuddhkanda chapter 2 Actor Ajay Rao watch price and brand details

ಅಜಯ್ ರಾವ್ ಎಲ್ಲಿಯೂ ತಮ್ಮ ನೋವು ನಲಿವನ್ನ ಹಂಚಿಕೊಂಡವರಲ್ಲ. ಆದರೆ ಇತ್ತೀಚೆಗೆ ರ್‍ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಜರ್ನಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ಬೆಂಗಳೂರಿಗೆ ಬಂದಾಗ ತಮ್ಮ ಬಳಿ ಏನಿತ್ತು? ಹೇಗೆಲ್ಲಾ ಕಷ್ಟ ಪಟ್ಟೆ ಎಂಬುದರ ಬಗ್ಗೆಯೂ ಹೇಳಿದ್ದರು. ಆರಂಭದಲ್ಲಿ ಅವಕಾಶಕ್ಕಾಗಿ ಗಾಂಧಿನಗರದಲ್ಲೆಲ್ಲಾ ಅಲೆಯುತ್ತಿದ್ದರಂತೆ. ಇರುವ ಹಣದಲ್ಲಿಯೇ ನಿರ್ಮಾಪಕರಿಗೆ ಏನಾದರೂ ಊಟ, ತಿಂಡಿ ಕೊಡಿಸಿದರೆ ತಾವೂ ಖಾಲಿ ಹೊಟ್ಟೆಯಲ್ಲೋ, ಇಲ್ಲ ಎರಡು ಇಡ್ಲಿ ತಿಂದೋ ಅಂದಿನ ಜೀವನ ಕಳೆಯುತ್ತಿದ್ದರಂತೆ. ಎಷ್ಟೋ ಸಲ ಕಡ್ಲೆ ತಿಂದೆ ಜೀವಿಸಿದ್ದಾರಂತೆ. ಆರಂಭದಲ್ಲಿ ಇಂತ ಕಷ್ಟದ ದಿನಗಳನ್ನು ನೋಡಿದ್ದ ಅಜಯ್ ರಾವ್ ಈಗ ಸಿನಿಮಾ ನಿರ್ಮಾಪಕ ಕೂಡ. ಮೊದಲ ಸಿನಿಮಾ ನಿರ್ಮಾಣ ಮಾಡಿ ಕೈತುಂಬಾ ಲಾಭ ಮಾಡಿಕೊಂಡಿರುವ ಕೃಷ್ಣ ಈಗ ಮತ್ತೆ ಸಿನಿಮಾ ನಿರ್ಮಾಣದತ್ತ ಮನಸ್ಸು ಮಾಡಿದ್ದಾರೆ. ನಟನಾಗಿ ಒಳ್ಳೆಯ ಬ್ರೇಕ್ ಗಾಗಿ ಕಮ್ ಬ್ಯಾಕ್ ಕೂಡ ಮಾಡ್ತಾ ಇದಾರೆ.

'ಯುದ್ದಕಾಂಡ ಚಾಪ್ಟರ್ 2' ಎಂಬ ಸಿನಿಮಾದಲ್ಲಿ ಲಾಯರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಟನೆಯ ಜೊತೆಗೆ ಇವರದ್ದೇ ನಿರ್ಮಾಣ ಕೂಡ. ಹೆಣ್ಣು ಮಕ್ಕಳ ಮೇಲೆ ನಡೆದಿರುವ ದೌರ್ಜನ್ಯವನ್ನೇ ಹೈಲೈಟ್ ಪಾಯಿಂಟ್ ಆಗಿಟ್ಟುಕೊಂಡು ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ ಎಂಬ ಹಿಂಟ್ ಬಿಟ್ಟುಕೊಟ್ಟಿದ್ದಾರೆ. ಸಮಾಜಕ್ಕೆ ಒಂದೊಳ್ಳೆ ಸಂದೇಶ, ಗಂಡಸರಿಗೂ ಒಂದೊಳ್ಳೆ ಬದಲಾವಣೆಯ ವಿಚಾರ ಇದರಲ್ಲಿದೆ ಎಂದು ವಿಶ್ವಾಸದಿಂದ ಹೇಳುತ್ತಾರೆ ಅಜಯ್ ರಾವ್. ಇತ್ತೀಚೆಗೆ ನಡೆದ ಪ್ರೆಸ್ ಮೀಟ್‌ನಲ್ಲಿ ಆಕ್ಟರ್ ಅಲ್ಲದೆ ಆಂಕರ್ ಕೂಡ ಆಗಿದ್ದರು. ತಾವೇ ಮುಂದೆ ನಿಂತು ಎಲ್ಲರನ್ನು ಸ್ವಾಗತಿಸಿದರು. ಬಳಿಕ ತಮ್ಮ ಪಾತ್ರದ ಬಗ್ಗೆ ಹೇಳಿದರು, ಹಿರಿಯ ಕಲಾವಿದರು ಕೂಡ ಸಿನಿಮಾದ ಫ್ರೆಶ್ನೆಸ್ ಬಗ್ಗೆ ಮಾತನಾಡಿದರು. ಇದರ ನಡುವೆ ಗಮನ ಸೆಳೆದಿದ್ದೇ ಅಜಯ್ ರಾವ್ ಹಾಕಿದ್ದಂತ ವಾಚ್.

Yuddhkanda chapter 2 Actor Ajay Rao watch price and brand details

ಹೌದು ಇಂದಿನ ಪ್ರೆಸ್ ಮೀಟ್ ಗೆ ಅಜಯ್ ರಾವ್ Maserati ಬ್ರ್ಯಾಂಡ್ ವಾಚ್ ಅನ್ನ ಕಟ್ಟಿಕೊಂಡು ಬಂದಿದ್ದರು. ಇದರ ಇದು ಮೆನ್ಸ್ ವಾಚ್ ಆಗಿದ್ದು, ಅದರ ಬೆಲೆ ಭಾರತದಲ್ಲಿ 18,525 ರೂಪಾಯಿ ನಿಜವಾದ ಬೆಲೆಯಾಗಿದೆ. ಈ ವಾಚ್ ಅನ್ನು ಧರಿಸಿ ಬಂದಿದ್ದ ಅಜಯ್ ರಾವ್ ಕೈ ಮೇಲೆ ಎಲ್ಲರ ಕಣ್ಣು ಇದ್ದವು.

More from Filmibeat

English summary
Yuddhkanda chapter 2 Actor Ajay Rao watch price and brand details;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X