»   » ಬಾಲಾಜಿಯನ್ನು ಹೀರೋ ಮಾಡುವ ಆಸೆಯನ್ನು ಇನ್ನೂ ಕೈ ಬಿಟ್ಟಿಲ್ಲ

ಬಾಲಾಜಿಯನ್ನು ಹೀರೋ ಮಾಡುವ ಆಸೆಯನ್ನು ಇನ್ನೂ ಕೈ ಬಿಟ್ಟಿಲ್ಲ

Posted By: Staff
Subscribe to Filmibeat Kannada

ಸ್ಯಾಂಡಲ್‌ವುಡ್‌ಗೀಗ ಸುಂದರಿಯರ ಶುಕ್ರದೆಶೆ. ಶಿವರಾಜ್‌ ಜೊತೆ ಹೆಜ್ಜೆ ಹಾಕುತ್ತಿರುವ ಲಿಸಾ ರೇ, ಉಪ್ಪಿ ಮುಖ ನೋಡಿ ಕನ್ನಡಕ್ಕೆ ಬಂದಿರುವ ಕೀರ್ತಿ, ಜ್ಯೂಹಿ- ರವೀನಾ ಪುನರಾಗಮನ... ಇಂಥಾ ಮಸ್ತ್‌ ಮಸ್ತ್‌ ಹುಡುಗಿಯರ ಸಾಲಿಗೀಗ ಹೊಸ ಸೇರ್ಪಡೆ ಮಾಜಿ ಮಿಸ್‌ ವರ್ಲ್ಡ್‌ ಯುಕ್ತಾ ಮುಖಿ.

ಯುಕ್ತಾ ಅವರನ್ನು ಕನ್ನಡಕ್ಕೆ ತರಲಿದ್ದಾರೆ ಕನಸುಗಾರ ರವಿಚಂದ್ರನ್‌. ಆದರೆ ಹೀರೋ ಅವರಲ್ಲ. ನೆನೆಗುದಿಗೆ ಬಿದ್ದ 'ಕಾಲೇಜು" ಎಂಬ ಸಿನಿಮಾ ನಾಯಕ ಬಾಲಾಜಿ; ಅರ್ಥಾತ್‌ ರವಿ ಪ್ರೀತಿಯ ತಮ್ಮ ಈಶ್ವರ್‌. ಚಿತ್ರದ ಹೆಸರು ಪ್ರೀತ್ಸೋಣ ಬಾ. ರವಿ ಈಗಾಗಲೇ ಯುಕ್ತಾ ಅವರನ್ನು ಕಾಂಟ್ಯಾಕ್ಟ್‌ ಮಾಡಿದ್ದಾರೆ. ಆಕೆ ಕಾಲ್‌ಷೀಟ್‌ ಕೊಡುವುದೊಂದೇ ಬಾಕಿ.

ರಾಮು ನಿರ್ಮಾಣದ ಶಕುನಿಯಲ್ಲಿ ರವೀನಾ-ಜ್ಯೂಹಿ-ನಗ್ಮಾ. ಅದರ ಹೀರೋ ಖುದ್ದು ರವಿಚಂದ್ರನ್‌. ಹೊರನಾಡಿನ ನಿರ್ಮಾಪಕರೊಬ್ಬರ ಚಿತ್ರದಲ್ಲಿ ಶಿವಣ್ಣನ ಜೊತೆಯಲ್ಲಿ ರವಿ ನಟಿಸುತ್ತಿದ್ದಾರೆ. ಈ ಎರಡು ಪ್ರೊಜೆಕ್ಟ್‌ಗಳ ನಡುವೆ ತಮ್ಮನನ್ನು ತೆರೆಗೆ ಪರಿಚಯಿಸಲು ರವಿ ಹೇಗೆ ಸಮಯ ಹೊಂದಿಸಿಕೊಳ್ಳುತ್ತಾರೆ ಅನ್ನೋದು ಈ ಹೊತ್ತಿನ ಪ್ರಶ್ನೆ.

ಯುಕ್ತಾ ಅಭಿನಯದ ಯಾವ ಚಿತ್ರವೂ ಇನ್ನೂ ತೆರೆ ಕಂಡಿಲ್ಲ. ಮಾಧವನ್‌ ಜೊತೆ ತಮಿಳು ಚಿತ್ರವೊಂದರಲ್ಲಿ ಅವರು ನಟಿಸುತ್ತಿದ್ದಾರೆ. ಬಾಲಿವುಡ್‌ನಲ್ಲೂ ಕೂಡ ಆಫರ್‌ಗಳಿವೆಯಂತೆ. ಜಾಕಿಷ್ರಾಫ್‌ ಜೊತೆ ಒಂದು ಚಿತ್ರದಲ್ಲಿ ಕಾಣಿಸಿಕೊಳ್ಳುವರು ಎಂಬ ಸುದ್ದಿ ಇದೆ. ಮಾಡೆಲಿಂಗ್‌ ಈಗಲೂ ಮುಂದುವರೆದಿದೆ. ಆದರೂ ಯುಕ್ತಾ ತುಂಬಾ ಬಿಜಿಯಾಗೇನೂ ಇಲ್ಲ. ಹೀಗಾಗಿ ಕಾಲ್‌ಷೀಟ್‌ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ ಅನ್ನೋದು ರವಿ ನಂಬುಗೆ.

ಕನಸುಗಾರ ಮುಗಿಸಿ, ನೆಮ್ಮದಿಯ ನಿಟ್ಟುಸಿರಿಟ್ಟ ರವಿ, 'ಪ್ರೀತ್ಸೋಣ ಬಾ ಥೇಟ್‌ ಪ್ರೇಮಲೋಕ ಪಂಚ್‌ ಕೊಡಲಿದೆ. ಬಲವಾದ ಪ್ರೇಮ ಕತೆ ಅದು" ಎಂದರು. 'ಕಾಲೇಜ್‌"ಗೆ ಆದ ಗತಿ 'ಪ್ರೀತ್ಸೋಣ..."ಗೆ ಆಗದಿರಲಿ.

English summary
Ravichandran to introduce yuktha mookkey to sandalwood. His brother Balaji will be hero
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada