ಮೈಯೆಲ್ಲಾ ರಕ್ತ, ಯುವ ರಾಜ್‌ಕುಮಾರ್‌ಗೆ ಏನಾಯ್ತು? ವೀಡಿಯೋ ವೈರಲ್
ರಾಘವೇಂದ್ರ ರಾಜ್‌ಕುಮಾರ್ ಕಿರಿಯ ಪುತ್ರ ಯುವ ರಾಜ್‌ಕುಮಾರ್ ಚಿತ್ರರಂಗಕ್ಕೆ ಬಂದಿದ್ದಾರೆ. ಈಗಾಗಲೇ 'ಯುವ' ಚಿತ್ರದಲ್ಲಿ ನಟಿಸಿ ಗೆದ್ದಿದ್ದಾರೆ. ಇತ್ತೀಚೆಗೆ ಎರಡನೇ ಸಿನಿಮಾ ಕೂಡ ಘೋಷಣೆ ಆಗಿದೆ. ರಾಜ್ಯೋತ್ಸವಕ್ಕೆ ಟೈಟಲ್ ಸಮೇತ ಸಿನಿಮಾ ಬಗ್ಗೆ ಮಾಹಿತಿ ಸಿಗಲಿದೆ. ಇದೆಲ್ಲದರ ನಡುವೆ ಯುವ ರಾಜ್‌ಕುಮಾರ್ ವೀಡಿಯೋವೊಂದು ಸದ್ದು ಮಾಡ್ತಿದೆ.
ಯುವ ರಾಜ್‌ಕುಮಾರ್ ಗಾಯಗೊಂಡು ಮೈಯಲ್ಲಿ ರಕ್ತ ಸುರಿಯುತ್ತಿದ್ದರೆ ಪೊಲೀಸರು ಅವರನ್ನು ಹಿಡಿದುಕೊಂಡು ಹೋಗುತ್ತಿರುವ ವೀಡಿಯೋ ವೈರಲ್ ಆಗ್ತಿದೆ. ಅಷ್ಟಕ್ಕೂ ಯುವ ರಾಜ್‌ಕುಮಾರ್‌ಗೆ ಏನಾಯ್ತು? ಎಂದು ಕೆಲವರು ತಲೆಕೆಡಿಸಿಕೊಂಡಿದ್ದಾರೆ. ಸಾಕಷ್ಟು ಜನ ಸುತ್ತಾ ಜಮಾಯಿಸಿದ್ದು ಏನಾಯ್ತು ಎಂದು ನೋಡುತ್ತಿರುವುದನ್ನು ವೀಡಿಯೋದಲ್ಲಿ ಗಮನಿಸಬಹುದು.

ಅಂದಹಾಗೆ ಇದು 'ಯುವ 02' ಸಿನಿಮಾ ಟೀಸರ್ ಶೂಟ್ ಎನ್ನಲಾಗ್ತಿದೆ. ಅಲ್ಲಿ ಯಾರೋ ಮೊಬೈಲ್‌ನಲ್ಲಿ ಈ ವೀಡಿಯೋ ಸೆರೆ ಹಿಡಿದು ವೈರಲ್ ಮಾಡುತ್ತಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಜಂಟಿಯಾಗಿ 'ಯುವ 02' ಚಿತ್ರವನ್ನು ನಿರ್ಮಾಣ ಮಾಡಲಿವೆ. ರೋಹಿತ್ ಪದಕಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಅಧಿಕೃತವಾಗಿ ಈಗಾಗಲೇ ಸಿನಿಮಾ ಘೋಷಣೆ ಆಗಿದೆ.
ಟೀಸರ್ ಸಮೇತ ಟೈಟಲ್ ಘೋಷಣೆ ಪ್ಲ್ಯಾನ್ ನಡೀತಿದೆ. ಅದಕ್ಕಾಗಿಯೇ ಶಿವಾಜಿ ನಗರದ ರಸೆಲ್ ಮಾರ್ಕೆಟ್ ಬಳಿ ಇತ್ತೀಚೆಗೆ ಟೀಸರ್ ಶೂಟ್ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋ ಇದು ಎಂದು ಹೇಳಲಾಗ್ತಿದೆ. ಬಹಳ ದೊಡ್ಡಮಟ್ಟದಲ್ಲೇ 'ಯುವ 02' ಸಿನಿಮಾ ಮೂಡಿ ಬರುವ ಸುಳಿವು ಸಿಗುತ್ತಿದೆ. ತಾರಾಗಣ ಸೇರಿದಂತೆ ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಸಿಗಲಿದೆ.
ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಧನಂಜಯ ನಟನೆಯ 'ಉತ್ತರಕಾಂಡ' ಚಿತ್ರವನ್ನು ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದರು. ಆದರೆ ಅದನ್ನು ಪಕ್ಕಕ್ಕಿಟ್ಟು 'ಯುವ 02' ಚಿತ್ರ ಕೈಗೆತ್ತಿಕೊಂಡಿದ್ದಾರೆ. ಖಡಕ್ ಟೈಟಲ್‌ನಲ್ಲಿ ಒಂದು ಮಾಸ್ ಎಂಟರ್‌ಟೈನರ್ ಸಿನಿಮಾ ಪ್ಲ್ಯಾನ್ ಮಾಡಲಾಗಿದೆ. ಆಯುಧಪೂಜೆ ಸಂಭ್ರಮದಲ್ಲಿ ಬಂದಿದ್ದ ಪ್ರೀ ಲುಕ್ ಪೋಸ್ಟರ್‌ನಲ್ಲಿ ಅದರ ಸುಳಿವು ಸಿಕ್ಕಿತ್ತು.
ರಕ್ತ ಮೆತ್ತಿದ ಕೈಯಲ್ಲಿ ಯುವರಾಜ್‌ಕುಮಾರ್ ಲಾಂಗ್ ಹಿಡಿದ ಪೋಸ್ಟರ್ ಬಿಟ್ಟು 'ಯುವ' ಚಿತ್ರದ ಮಾಹಿತಿ ನೀಡಲಾಗಿತ್ತು. ಪೋಸ್ಟರ್‌ನಲ್ಲಿದ್ದ 'ಮನುಷ್ಯತ್ವ ನಮ್ಮೊಳಗಿರೋ ಮೃಗದ ಮುಖವಾಡ' ಎನ್ನುವ ಸಾಲು ಇದು ರಗಡ್ ಸಿನಿಮಾ ಎನ್ನುವ ಸುಳಿವು ಕೊಟ್ಟಿತ್ತು. 'ಯುವ' ಸಿನಿಮಾ ಬಹಳಿಕ 2ನೇ ಸಿನಿಮಾ ಯಾವುದು ಎನ್ನುವ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಪಿಆರ್‌ಕೆ ಪ್ರೊಡಕ್ಷನ್‌ನಲ್ಲೇ ಸಿನಿಮಾ ಎಂದು ಭಾವಿಸಲಾಗಿತ್ತು. ಆದರೆ ಕೆಆರ್‌ಜಿ, ಜಯಣ್ಣ ಫಿಲ್ಮ್ಸ್ ಕೂಡ ಕೈ ಜೋಡಿಸಿದ್ದು ಅಚ್ಚರಿ ಮೂಡಿಸಿದೆ.
ಮಾರ್ಚ್ ಕೊನೆ ವಾರದಲ್ಲಿ ತೆರೆಗೆ ಬಂದಿದ್ದ 'ಯುವ' ಸಿನಿಮಾ ತಕ್ಕಮಟ್ಟಿಗೆ ಗೆದ್ದಿತ್ತು. ಅಣ್ಣಾವ್ರ ಮೊಮ್ಮಗನ ಡ್ಯಾನ್ಸ್, ಡೈಲಾಗ್ ಡೆಲಿವರಿ ಮತ್ತು ಸ್ಟಂಟ್ಸ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಮೊದಲ ಪ್ರಯತ್ನದಲ್ಲೇ ಭರವಸೆಯ ನಟನಾಗಿ ಯುವ ಹೊರಹೊಮ್ಮಿದ್ದರು. ಹಾಗಾಗಿ ದೊಡ್ಮನೆ ಅಭಿಮಾನಿಗಳು ಅವರ ಎರಡನೇ ಚಿತ್ರಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಪುನೀತ್ ರಾಜ್‌ಕುಮಾರ್ ಅಗಲಿಕೆ ಬಳಿಕ ಯುವ ರಾಜ್‌ಕುಮಾರ್ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆ ಇತ್ತು. ಅದನ್ನು ಮೊದಲ ಚಿತ್ರದಲ್ಲೇ ತಕ್ಕಮಟ್ಟಿಗೆ ಯುವ ಸಾಬೀತುಪಡಿಸಿಕೊಂಡಿದ್ದಾರೆ. ಇನ್ನು 2ನೇ ಚಿತ್ರಕ್ಕೆ 'ಎಕ್ಕ ರಾಜ ರಾಣಿ' ಎನ್ನುವ ಟೈಟಲ್ ಪರಿಶೀಲನೆಯಲ್ಲಿದೆಯಂತೆ ಚಿತ್ರತಂಡ. ಜಬರ್ದಸ್ತ್ ಟೀಸರ್ ಸಮೇತ ಸಂತೋಷ್ ಆನಂದ್ ರಾಮ್ ಹಿಂದೆ 'ಯುವ' ಚಿತ್ರವನ್ನು ಘೋಷಣೆ ಮಾಡಿದ್ದರು. ಅದೇ ರೀತಿ 2ನೇ ಚಿತ್ರಕ್ಕೂ ಪ್ಲ್ಯಾನ್ ಮಾಡಲಾಗುತ್ತಿದೆ.


Click it and Unblock the Notifications











