'ಯುವ'ರಾಜನ ಗಜಗಾಂಭೀರ್ಯ ; ಎಷ್ಟಕ್ಕೆ ಮಾರಾಟವಾಯಿತು ಗೊತ್ತಾ ಆಡಿಯೋ ಹಕ್ಕು..?

ಡಾ.ಪುನೀತ್ ರಾಜ್ ಕುಮಾರ್ ಅವರ ಉತ್ತರಾಧಿಕಾರಿ ಎಂದೇ ಬಿಂಬಿತರಾದ ಯುವರಾಜ್ ಕುಮಾರ್ ಅವರ ಮೊದಲ ಬಣ್ಣ ಬಣ್ಣದ ಕನಸು ನನಸಾಗಲು, ಅಭಿಮಾನಿಗಳ ಕಲ್ಪನೆ ಬೆಳ್ಳಿ ತೆರೆಯಲ್ಲಿ ಅನಾವರಣವಾಗಲು ಇನ್ನೇನು ಕೆಲವೇ ದಿನ ಉಳಿದಿವೆ. ಹೀಗಿರುವಾಗ ಗಂಧದ ಗುಡಿಯ ನೂತನ ಯುವರಾಜನ ಮುಡಿಗೆ ಮೂರು ಕೋಟಿ ಬೆಲೆ ಬಾಳುವ ಕಿರೀಟವನ್ನ ತೊಡಿಸಲಾಗಿದೆ.

ಹೌದು, ನಿಮಗೆ ಗೊತ್ತು. ಯುವ ರಾಜ್ ಕುಮಾರ್ ಅವರ ಚೊಚ್ಚಲ ಚಿತ್ರ ಯುವ , ಚಿತ್ರದ ಚಿತ್ರೀಕರಣ ಮೊನ್ನೆಯಷ್ಟೇ ಮುಕ್ತಾಯವಾಗಿದೆ. ಈ ಮಾರ್ಚ್ 28ರಿಂದ ಕರುನಾಡಿನೆಲ್ಲೆಡೆ ಯುವ ಪರ್ವ ಆರಂಭವಾಗಲಿದೆ. ಇನ್ನೂ.. ಬಿಡುಗಡೆಗೆ ಕೆಲವೇ ದಿನ ಇರುವ ಹಿನ್ನೆಲೆಯಲ್ಲಿ ಚಿತ್ರದ ಪ್ರಚಾರದ ರೂಪುರೇಷೆಯನ್ನ ಹೊಂಬಾಳೆ ಸಂಸ್ಥೆ ಸಿದ್ದ ಪಡಿಸುತ್ತಿದೆ. ಚಿತ್ರದ ಮೊದಲ ಹಾಡನ್ನ ಅದ್ಧೂರಿಯಾಗಿ ಬಿಡುಗಡೆ ಮಾಡುವ ಆಲೋಚನೆ ಕೂಡ ಹೊಂಬಾಳೆ ಸಂಸ್ಥೆಗೆ ಇದೆ ಅನ್ನುವ ಮಾತು ಇದೆ. ಇದೆಲ್ಲದಕ್ಕೂ ಪುಷ್ಠಿ ನೀಡುವಂತೆ ಯುವ ಚಿತ್ರದ ಆಡಿಯೋ ಹಕ್ಕು ಈಗ ಬಿಕರಿಯಾಗಿದೆ. ಅದು ಒಂದಲ್ಲ.. ಎರಡಲ್ಲ.. ಮೂರು ಕೋಟಿಗೆ ಅನ್ನುವುದು ಗಾಂಧಿನಗರದಲ್ಲಿ ಕೇಳಿ ಬರುತ್ತಿರುವ ಲೇಟೆಸ್ಟ್ ನ್ಯೂಸು

Yuva Audio Rights Acquired By Aanand Audio

ಕನ್ನಡದ ಪ್ರತಿಷ್ಠಿತ ಆಡಿಯೋ ಸಂಸ್ಥೆಯಲ್ಲಿ ಒಂದಾದ, ಆನಂದ್ ಆಡಿಯೋ ಯುವ ಚಿತ್ರದ ಆಡಿಯೋ ಹಕ್ಕುಗಳನ್ನ ಖರೀದಿಸಿದೆ. ನಿಜಕ್ಕೂ ವ್ಯಾಪಾರ ಎಷ್ಟು ಕೋಟಿಗೆ ಆಗಿದೆ ಅನ್ನುವುದು ಸದ್ಯಕ್ಕೆ ಗೌಪ್ಯವಾಗಿದ್ದರೂ, ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಆನಂದ್ ಆಡಿಯೋ ಕಛೇರಿ ಸುತ್ತ ಮುತ್ತು ಯುವ ಚಿತ್ರದ ಆಡಿಯೋ ರೈಟ್ಸ್ ಮೂರು ಕೋಟಿಗೆ ಮಾರಾಟವಾಗಿದೆ ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ. ನೆನಪಿರಲಿ.. ದಶಕಗಳಿಂದ ಸೂಪರ್ ಸ್ಟಾರ್ ಪಟ್ಟವನ್ನ ಅಲಂಕರಿಸಿರುವ ನಾಯಕರ ಸಿನಿಮಾದ ಹಾಡುಗಳೇ 02 ಕೋಟಿ ಗಡಿ ದಾಟುವುದು ಅಪರೂಪ. ಅಂತದ್ರಲ್ಲಿ ಯುವರಾಜ್ ಕುಮಾರ್ ಮೊದಲ‌ ಸಿನಿಮಾದ ಹಾಡುಗಳು ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರೋದು ದಾಖಲೆಯೇ ಸರಿ

ರಾಜಕುಮಾರದಂಥಾ ಸಾರ್ವಕಾಲಿಕ ಹಿಟ್ ಚಿತ್ರದ ನಂತರ ಮತ್ತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗಾಗಿ ಯುವರತ್ನ ಚಿತ್ರವನ್ನ ನಿರ್ದೇಶಿಸಿದ್ದ ಸಂತೋಷ್ ಆನಂದ ರಾಮ್ ನಿರ್ದೇಶನದಲ್ಲಿ ಸಿದ್ಧವಾದ ಯುವ ಚಿತ್ರಕ್ಕೆ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಇದೆ. ಶ್ರೀಶಾ ಕುದುವಳ್ಳಿ ಯುವ ಚಿತ್ರದ ಕಲರ್ ಫುಲ್ ಪ್ರಪಂಚವನ್ನ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಸಪ್ತಮಿ ಗೌಡ ಯುವ ಜೊತೆ ಇಲ್ಲಿ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ

Yuva Audio Rights Acquired By Aanand Audio

ಒಟ್ಟಿನಲ್ಲಿ ಆನಂದ್ ಆಡಿಯೋ , ಯುವ ರಾಜ್ ಕುಮಾರ್ ಅವರ ಚೊಚ್ಚಲ ಚಿತ್ರ ಯುವ ಚಿತ್ರದ ಹಾಡುಗಳ ದಿಬ್ಬಣಕ್ಕೆ ಚಾಲನೆ ನೀಡಿದೆ. ಕರುನಾಡಿನೆಲ್ಲೆಡೆ ಯುವ ಚಿತ್ರದ ಹಾಡುಗಳ ಮೆರವಣಿಗೆ ಶೀಘ್ರದಲ್ಲಿಯೇ ಆರಂಭವಾಗಲಿದೆ. ಯುವ ಪರ್ವಕ್ಕೆ ಬೆಳ್ಳಿತೆರೆ ಮಾರ್ಚ್ 28ಕ್ಕೆ ಸಾಕ್ಷಿಯಾಗಲಿದೆ.

More from Filmibeat

English summary
Aanand Audio bagged the audio rights of Yuva Raj Kumar's debut film Yuva. The film directed by Santhosh Anandd Ram is set to release on March 28
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X