2ನೇ ದಿನ 'ಯುವ' ಕಲೆಕ್ಷನ್ ಎಷ್ಟು? 3ನೇ ದಿನ ಚಿತ್ರಕ್ಕೆ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿದೆ?

ಬಾಕ್ಸಾಫೀಸ್‌ನಲ್ಲಿ 'ಯುವ' ದರ್ಬಾರ್ ಮುಂದುವರೆದಿದೆ. ನಿಧಾನವಾಗಿ ಸಿನಿಮಾ ಫ್ಯಾಮಿಲಿ ಆಡಿಯನ್ಸ್‌ನ ಸೆಳೆಯುತ್ತಿದೆ. ಸಂತೋಷ್ ಆನಂದ್ ರಾಮ್‌ ನಿರ್ದೇಶನದ ಚಿತ್ರದಲ್ಲಿ ರಾಘಣ್ಣ ಕಿರಿಮಗ ಯುವ ರಾಜ್‌ಕುಮಾರ್ ಹೀರೊ ಆಗಿ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಪ್ರಯತ್ನದಲ್ಲೇ 'ಯುವ' ಗೆದ್ದಿದ್ದಾರೆ. ಅಭಿಮಾನಿಗಳಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಸೇರಿಸಿ 'ಯುವ' ಸಿನಿಮಾ ಕಟ್ಟಿಕೊಡಲಾಗಿದೆ. ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರಿಗೆ ಇಷ್ಟವಾಗುವಂತೆ ನಿರ್ದೇಶಕರು ಸಿನಿಮಾ ತೆರೆಗೆ ತಂದಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕೇಳಿದ್ದನ್ನೆಲ್ಲಾ ಕೊಟ್ಟು ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಿದೆ. ಇತ್ತೀಚಿನ ವರ್ಷಗಳಲ್ಲಿ ಮೊದಲ ದಿನ ಯಾವುದೇ ಹೊಸ ನಟನ ಚಿತ್ರಕ್ಕೆ ಸಿಗದಂತಹ ರೆಸ್ಪಾನ್ಸ್ 'ಯುವ' ಚಿತ್ರಕ್ಕೆ ಸಿಕ್ಕಿದೆ.

Yuva Box Office Collection Day 2 Yuva Rajkumar Santhosh Ananddram s film Remains Stable

ಅಭಿಮಾನಿಗಳು ಹಬ್ಬದ ರೀತಿ 'ಯುವ' ಚಿತ್ರವನ್ನು ಸ್ವಾಗತಿಸಿದ್ದಾರೆ. ಗುಡ್‌ಫ್ರೈಡೇ ರಜೆ ಕೂಡ ಮೊದಲ ದಿನ ಚಿತ್ರದ ಕಲೆಕ್ಷನ್‌ಗೆ ಪ್ಲಸ್ ಆಗಿತ್ತು. ಎರಡನೇ ದಿನವೂ ಸಿನಿಮಾ ಒಳ್ಳೆ ಗಳಿಕೆ ಕಂಡಿದೆ. ಈ ವರ್ಷ ಕನ್ನಡದಲ್ಲಿ ದೊಡ್ಡ ಸಿನಿಮಾಗಳು ಬಂದಿರಲಿಲ್ಲ. ಆ ಬರವನ್ನು 'ಯುವ' ತೀರಿಸಿದ್ದಾರೆ. ಎಲೆಕ್ಷನ್ ಕಾವು, ಐಪಿಎಲ್ ನಡುವೆಯೂ ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಆದರೆ ಪರಭಾಷಾ ಸಿನಿಮಾಗಳ ಹಾವಳಿ 'ಯುವ'ನ ಮೇಲೆ ಪರಿಣಾಮ ಬೀರಿರುವುದು ಸುಳ್ಳಲ್ಲ.

'ಯುವ' ಫಸ್ಟ್ ಡೇ ಕಲೆಕ್ಷನ್

ಕರ್ನಾಟಕ ಮಾತ್ರವಲ್ಲದೇ ದೆಹಲಿ, ಹೈದರಾಬಾದ್‌, ಚೆನ್ನೈನಲ್ಲಿ ಕೂಡ ಬಿಡುಗಡೆಯಾಗಿದೆ. ಮೊದಲ ದಿನ ಸಿನಿಮಾ 4 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಅಂದಾಜಿಸಲಾಗಿತ್ತು. ಯುವ ನಟನೊಬ್ಬನ ಮೊದಲ ಚಿತ್ರಕ್ಕೆ ಕನ್ನಡದಲ್ಲಿ ಇದು ಹೆಚ್ಚು ಕಲೆಕ್ಷನ್ ಎಂದು ಹೇಳಲಾಗುತ್ತಿದೆ. ಇನ್ನು ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚಿಕೊಂಡಾಡುತ್ತಿದ್ದಾರೆ.

Yuva Box Office Collection Day 2 Yuva Rajkumar Santhosh Ananddram s film Remains Stable

2ನೇ ದಿನದ ಕಲೆಕ್ಷನ್

ಶನಿವಾರ ಕೂಡ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮೌತ್‌ ಟಾಕ್‌ ಚಿತ್ರಕ್ಕೆ ಪ್ಲಸ್ ಆಗುತ್ತಿದೆ. 2ನೇ ದಿನವೂ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿದೆ. ಶನಿವಾರ 'ಯುವ' ಸಿನಿಮಾ ಕಲೆಕ್ಷನ್ 3.5 ರೂ. ಕೋಟಿ ದಾಟಿದೆ ಎಂದು ಚರ್ಚೆ ನಡೆಯುತ್ತಿದೆ. ಆದರೆ ಚಿತ್ರತಂಡ ಕಲೆಕ್ಷನ್ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

3ನೇ ದಿನವೂ ಒಳ್ಳೆ ರೆಸ್ಪಾನ್ಸ್

ಮೊದಲ ಎರಡು ದಿನಗಳಿಗಿಂತ 3ನೇ ದಿನ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಭಾನುವಾರ ಆಗಿರುವ ಕಾರಣ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ನೋಡಲು ಮುಗಿಬೀಳುತ್ತಿದ್ದಾರೆ. ಬುಕ್‌ಮೈ ಶೋನಲ್ಲಿ ಕೂಡ ಟಿಕೆಟ್ ಬುಕ್ಕಿಂಗ್ ಜೋರಾಗಿದೆ. ಒಟ್ಟಾಗಿ ಫಸ್ಟ್ ವೀಕೆಂಡ್‌ನಲ್ಲಿ ಸಿನಿಮಾ ಗಳಿಕೆ 10 ಕೋಟಿ ದಾಟುವ ನಿರೀಕ್ಷೆಯಿದೆ. ವೀಕೆಂಡ್‌ನಲ್ಲಿ ಸಂಜೆ ಐಪಿಎಲ್ ಪಂದ್ಯಗಳು ಇರುವುದು ಕೊಂಚ ಮಟ್ಟಿಗೆ ಹಿನ್ನಡೆ ಆಗುವಂತೆ ಮಾಡುತ್ತಿದೆ.

BMSನಲ್ಲಿ 66 ಸಾವಿರ ಟಿಕೆಟ್ ಮಾರಾಟ

ಶುಕ್ರವಾರ ಹಾಗೂ ಶನಿವಾರ ಬುಕ್‌ಮೈ ಶೋನಲ್ಲಿ ಎಷ್ಟು ಟಿಕೆಟ್ ಮಾರಾಟವಾಗಿದೆ ಎನ್ನುವ ಲೆಕ್ಕ ಸಿಕ್ಕದೆ. ಮೊದಲ ದಿನ 34 ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳು ಸೇಲಾಗಿದ್ದರೆ ಶನಿವಾರ 31 ಸಾವಿರಕ್ಕೂ ಹೆಚ್ಚು ಟಿಕೆಟ್ ಬುಕ್ ಆಗಿತ್ತು. ಭಾನುವಾರವೂ ಬುಕ್‌ಮೈ ಶೋನಲ್ಲಿ 'ಯುವ' ಟ್ರೆಂಡ್ ಕ್ರಿಯೇಟ್ ಮಾಡಿದ್ದಾನೆ. ಟಿಕೆಟ್‌ ಬುಕ್ಕಿಂಗ್‌ಗೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಒಟ್ಟಾರೆ ಅದ್ಧೂರಿಯಾಗಿ ಮೂಡಿ ಬಂದಿರುವ ಸಿನಿಮಾ ಉತ್ತಮ ಗಳಿಕೆ ಕಾಣುತ್ತಿದೆ. ಮುಂದೆ 'ಯುವ' ಆರ್ಭಟ ಹೇಗಿರುತ್ತೆ? ಕಾದು ನೋಡಬೇಕಿದೆ.

More from Filmibeat

English summary
Yuva film 2 days Box Office report;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X