twitter
    For Quick Alerts
    ALLOW NOTIFICATIONS  
    For Daily Alerts

    ಯುವ ದಸರಾ ಆಯೋಜಕರೇಕೆ ಕನ್ನಡ ಚಲನಚಿತ್ರರಂಗದವರ ರೀತಿ ಆಗೋದ್ರು; ರಾಹುಲ್ ಡಿಟೋ ಕಿಡಿ!

    |

    ಸದ್ಯ ದೇಶದಾದ್ಯಂತ ನವರಾತ್ರಿ ಸಡಗರ ಶುರುವಾಗಿದ್ದು, ವಿಶೇಷವಾಗಿ ಮೈಸೂರಿನಲ್ಲಿ ಸಂಭ್ರಮ ದೊಡ್ಡ ಮಟ್ಟದಲ್ಲಿದೆ. ಕಳೆದೆರಡು ವರ್ಷಗಳಲ್ಲಿ ಸರಳವಾಗಿ ದಸರಾ ಆಚರಣೆಯನ್ನು ಮಾಡಲಾಗಿದ್ದು, ಈ ಬಾರಿ ಬಹಳ ವಿಜೃಂಭಣೆಯಿಂದ ದಸರಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

    ದೀಪಾಲಂಕಾರದಿಂದ ಮಿರಿಮಿರಿ ಮಿಂಚುತ್ತಿರುವ ಮೈಸೂರು ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಯುವ ದಸರಾ ಕಾರ್ಯಕ್ರಮ ಕೂಡ ನಿನ್ನೆಯಿಂದ ( ಸೆಪ್ಟೆಂಬರ್ 28 ) ಆರಂಭಗೊಂಡಿದ್ದು ದಸರಾ ಸಡಗರ ಮತ್ತಷ್ಟು ಹೆಚ್ಚಾಗಿದೆ. ಯುವ ದಸರಾದ ಉದ್ಘಾಟನಾ ದಿನವನ್ನು ಸಂಪೂರ್ಣವಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮೀಸಲಿಡುವುದರ ಮೂಲಕ ಪ್ರಶಂಸೆ ಪಡೆದುಕೊಂಡಿರುವ ಯುವದಸರಾ ಆಯೋಜಕರು ಸದ್ಯ ನಂತರ ಆಯೋಜಿಸಿರುವ ಕಾರ್ಯಕ್ರಮಗಳಿಂದಾಗಿ ಟೀಕೆಗಳಿಗೂ ಗುರಿಯಾಗಿದ್ದಾರೆ.

    ಅಪ್ಪುಮಯವಾದ ಯುವ ದಸರಾ, ಭಾವುಕರಾದ ಅಶ್ವಿನಿ ಪುನೀತ್ ರಾಜ್‌ಕುಮಾರ್ಅಪ್ಪುಮಯವಾದ ಯುವ ದಸರಾ, ಭಾವುಕರಾದ ಅಶ್ವಿನಿ ಪುನೀತ್ ರಾಜ್‌ಕುಮಾರ್

    ಹೌದು, ಯುವ ದಸರಾ ಕಾರ್ಯಕ್ರಮದಲ್ಲಿ ಕನ್ನಡದ ಕಲಾವಿದರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಾಗಿಲ್ಲ ಎಂಬ ದೊಡ್ಡ ಆರೋಪ ಇದೀಗ ಯುವ ದಸರಾ ಆಯೋಜಕರ ವಿರುದ್ಧ ಕೇಳಿಬಂದಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಈ ಕುರಿತಾದ ಪೋಸ್ಟ್ ಹರಿದಾಡುತ್ತಿದ್ದು ಈ ವಿಷಯ ತಿಳಿದ ಕನ್ನಡಿಗರು ಆಯೋಜಕರ ವಿರುದ್ಧ ಕಾಮೆಂಟ್ ಮಾಡುವುದರ ಮೂಲಕ ಕಿಡಿಕಾರಿದ್ದಾರೆ.

     ಕನ್ನಡದ ಹಾಡುಗಾರರಿಗಿಲ್ಲ ಅವಕಾಶ!

    ಕನ್ನಡದ ಹಾಡುಗಾರರಿಗಿಲ್ಲ ಅವಕಾಶ!

    ಲೋಹಿತ್ ರಾಜ್ ಕುಮಾರ್ ಎಂಬುವವರು ಯುವ ದಸರಾ ಕಾರ್ಯಕ್ರಮದ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದು, ಯುವ ದಸರಾ ಆಯೋಜಕರೇ ನೀವೇಕೆ ಕನ್ನಡ ಚಲನಚಿತ್ರರಂಗದ ನಿರ್ದೇಶಕರ ರೀತಿ ಪರಭಾಷೆಯಿಂದ ಹಾಡುಗಾರರನ್ನು ಕರೆಸುತ್ತಿದ್ದೀರ ಎಂಬುದು ಅರ್ಥವಾಗುತ್ತಿಲ್ಲ, ನಮ್ಮ ನೆಲದ ಹಲವಾರು ಗಾಯಕರು ಮತ್ತು rappers ಇರುವಾಗ ಪರಭಾಷೆಯ ಹಾಡುಗಾರರಿಗೆ ಅವಕಾಶ ನೀಡುವುದರಲ್ಲಿ ಅರ್ಥವೇನಿದೆ ಎಂದು ಕಿಡಿಕಾರಿದ್ದಾರೆ.

     ಅವರಿಗೆ ಲಕ್ಷ ಸುರಿಯುವ ಬದಲು ನಮ್ಮವರಿಗೆ ಅವಕಾಶ ನೀಡಿ

    ಅವರಿಗೆ ಲಕ್ಷ ಸುರಿಯುವ ಬದಲು ನಮ್ಮವರಿಗೆ ಅವಕಾಶ ನೀಡಿ

    ಇನ್ನೂ ಮುಂದುವರಿದು ಈ ಪೋಸ್ಟ್‌ನಲ್ಲಿ ಬಾಲಿವುಡ್ ಗಾಯಕರನ್ನು ಕರೆಸಿ ಲಕ್ಷಲಕ್ಷ ಸುರಿಯುವ ಬದಲು ನಮ್ಮ ನೆಲದ ಹಾಡುಗಾರರಿಗೆ ಅವಕಾಶವನ್ನು ನೀಡಿದರೆ ವೇದಿಕೆ ಸಿಕ್ಕಿದೆ ಎಂಬ ಖುಷಿಯಲ್ಲಿ ಮತ್ತಷ್ಟು ಉತ್ತಮವಾಗಿ ಪ್ರದರ್ಶನವನ್ನು ನೀಡಲಿದ್ದಾರೆ, ಈ ವಿಷಯವನ್ನು ಯಾರಾದರೂ ಆಯೋಜಕರಿಗೆ ಮುಟ್ಟಿಸುತ್ತಾರೆ ಮತ್ತು ಮುಂದಿನ ಬಾರಿಯಿಂದ ಈ ಬದಲಾವಣೆ ಆಗಲಿದೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ಬರೆದುಕೊಂಡಿದ್ದಾರೆ.

     ಪೋಸ್ಟ್ ಶೇರ್ ಮಾಡಿದ ರಾಹುಲ್ ಡಿಟೋ

    ಪೋಸ್ಟ್ ಶೇರ್ ಮಾಡಿದ ರಾಹುಲ್ ಡಿಟೋ

    ಹೀಗೆ ಯುವದಸರಾ ಆಯೋಜಕರ ಕುರಿತು ಲೋಹಿತ್ ರಾಜ್ ಕುಮಾರ್ ಎಂಬುವವರು ಮಾಡಿರುವ ಪೋಸ್ಟ್ ಅನ್ನು ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯ ಸ್ಟೋರಿಯಲ್ಲಿ ರಾಹುಲ್ ಡಿಟ್ಟೊ ಶೇರ್ ಮಾಡಿದ್ದಾರೆ. ಈ ಮೂಲಕ ಯುವ ದಸರಾ ಕಾರ್ಯಕ್ರಮದಲ್ಲಿ ಕನ್ನಡದ ಹಾಡುಗಾರರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬುದರ ವಿರುದ್ಧ ರಾಹುಲ್ ಡಿಟ್ಟೊ ದನಿ ಎತ್ತಿದ್ದಾರೆ.

     ಯುವ ದಸರಾದಲ್ಲಿ ಹಿಂದಿ ಗಾಯಕರಿಗೆ ಹೆಚ್ಚು ಅವಕಾಶ ನೀಡಿರುವುದು ನಿಜ!

    ಯುವ ದಸರಾದಲ್ಲಿ ಹಿಂದಿ ಗಾಯಕರಿಗೆ ಹೆಚ್ಚು ಅವಕಾಶ ನೀಡಿರುವುದು ನಿಜ!

    ಇನ್ನು ಯುವ ದಸರಾ ಆಯೋಜಕರ ವಿರುದ್ಧ ಕೇಳಿಬರುತ್ತಿರುವ ಈ ಆರೋಪ ನಿಜವೇ ಎಂದು ಪರಿಶೀಲಿಸಿದಾಗ ಸಿಗುವ ಉತ್ತರ ಹೌದು ಎಂಬುದು. ಯುವ ದಸರಾದ ಎರಡನೇ ದಿನ ಹಿಂದಿ ಗಾಯಕಿ ಕನಿಕಾ ಕಪೂರ್, ನಾಲ್ಕನೇ ದಿನ ಹಿಂದಿಯ ಗಾಯಕ ಸೋನು ನಿಗಮ್, ಐದನೇ ದಿನ ತೆಲುಗಿನ ಮಂಗ್ಲಿ ಮತ್ತು ಹಿಂದಿಯ ಅಮಿತ್ ತ್ರಿವೇದಿ ಹಾಗೂ ಆರನೇ ದಿನ ಹಿಂದಿಯ ಸುನಿಧಿ ಚೌಹಾಣ್ ವೇದಿಕೆ ಏರಿ ಪ್ರದರ್ಶನ ನೀಡಲಿದ್ದಾರೆ. ಸೋನು ನಿಗಮ್ ಜತೆ ಕನ್ನಡದ ಗಾಯಕಿ ಶಮಿತಾ ಮಲ್ನಾಡ್ ವೇದಿಕೆ ಹಂಚಿಕೊಳ್ಳಲಿದ್ದು ಇದನ್ನು ಹೊರತುಪಡಿಸಿ ಕನ್ನಡದ ಗಾಯಕರಿಗೆ ಯಾವುದೇ ಅವಕಾಶವನ್ನು ನೀಡಲಾಗಿಲ್ಲ.

    English summary
    Yuva Dasara Organisers are behaving like Kannada movie directors; Netizens slams Yuva Dasara
    Thursday, September 29, 2022, 12:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X