For Quick Alerts
  ALLOW NOTIFICATIONS  
  For Daily Alerts

  ಯುವ ದಸರಾ: ಬಾಲಿವುಡ್‌ನಿಂದಲೂ ಬರಲಿದ್ದಾರೆ ಕಲಾವಿದರು! ಯಾವ ದಿನ ಯಾರ ಕಾರ್ಯಕ್ರಮ?

  |

  ಪ್ರತಿ ವರ್ಷದಂತೆ ಈ ವರ್ಷವೂ ಮೈಸೂರು ದಸರಾ ಅದ್ಧೂರಿಯಾಗಿ ನಡೆಯಲಿದೆ. ಈಗಾಗಲೇ ತಯಾರಿಗಳೆಲ್ಲ ಮುಗಿದಿದ್ದು, ಸಾಂಪ್ರಾಯಿಕ ದಸರಾ ಜೊತೆಗೆ ಯುವ ದಸರಾ ಸಹ ಎಂದಿನಂತೆ ಈ ಬಾರಿಯೂ ಗಮನ ಸೆಳೆಯಲಿದೆ.

  ಈ ಬಾರಿಯ ಯುವ ದಸರಾನಲ್ಲಿ ಹಲವು ವಿಶೇಷತೆಗಳು ಇರಲಿವೆ. ಸೆಪ್ಟೆಂಬರ್ 27 ರಂದು ಆರಂಭವಾಗುವ ಯುವ ದಸರಾ ಕಾರ್ಯಕ್ರಮವನ್ನು ಕಿಚ್ಚ ಸುದೀಪ್ ಉದ್ಘಾಟನೆ ಮಾಡಲಿದ್ದಾರೆ. ಜೊತೆಗೆ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಇರಲಿದ್ದಾರೆ. ಶಾಸಕ ಎಲ್.ನಾಗೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

  ಯುವ ದಸರಾ ಕಾರ್ಯಕ್ರಮದಲ್ಲಿ ಈ ಬಾರಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹಾಗಿದ್ದಾಗಿಯೂ ಕಾರ್ಯಕ್ರಮಕ್ಕೆ ಬಾಲಿವುಡ್ ಹಾಗೂ ಪರಭಾಷೆಯ ಕಲಾವಿದರೂ ಸಹ ಆಗಮಿಸಿ ಪ್ರದರ್ಶನ ನೀಡಲಿದ್ದಾರೆ.

  ಯಾವ ದಿನ ಯಾರ ಕಾರ್ಯಕ್ರಮಗಳು ಆಯೋಜಿತವಾಗಿರಲಿವೆ ಎಂಬ ಮಾಹಿತಿಯನ್ನು ಇಂದು ಯುವ ದಸರಾ ಉಪಸಮಿತಿಯ ವಿಶೇಷಾಧಿಕಾರಿ ಎಸ್‌ಪಿ ಆರ್ ಚೇತನ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮಗಳ ಪಟ್ಟಿ ಇಂತಿದೆ.

  * ಸೆಪ್ಟೆಂಬರ್ 27 ರಂದು ಶ್ರೀಧರ್ ಜೈನ್ ನೃತ್ಯ ತಂಡದಿಂದ ಕಾರ್ಯಕ್ರಮ, ಗಾಯಕರಾದ ರಘು ಧೀಕ್ಷಿತ್ ಹಾಗೂ ಗಾಯಕಿ ಮಂಗ್ಲಿ ಅವರಿಂದ ಗಾಯನ.

  * ಸೆಪ್ಟೆಂಬರ್ 28 ರಂದು ಅಪ್ಪು ನಮನ: ಯುವ ದಸರಾದ 2ನೇ ದಿನದ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್‌ಕುಮಾರ್‌ಗೆ ಗೌರವ ಸಲ್ಲಿಸಲಾಗುತ್ತಿದ್ದು, ಗಾಯಕರಾದ ಗುರುಕಿರಣ್, ವಿಜಯಪ್ರಕಾಶ್, ಕುನಾಲ್ ಗಾಂಜಾವಾಲ ಗಾಯನದ ಮೂಲಕ ಅಪ್ಪು ಅವರಿಗೆ ನಮನ ಸಲ್ಲಿಸಲಿದ್ದಾರೆ.

  * ಸೆಪ್ಟೆಂಬರ್ 29 ರಂದು ಲೇಸರ್ ಶೋ, ಸಿಗ್ನೇಚರ್ ಗ್ರೂಪ್ ನೃತ್ಯ ತಂಡ, ಕನ್ನಿಕಾ ಕಪೂರ್ ಮತ್ತು ಅಸೆಂಟ್ ತಂಡದಿಂದ ಕಾರ್ಯಕ್ರಮ ನಡೆಯಲಿದೆ.

  * ಸೆಪ್ಟೆಂಬರ್ 30: ಸ್ಯಾಂಡಲ್‌ವುಡ್ ನೈಟ್ ಇರಲಿದ್ದು, ಕನ್ನಡ ಚಿತ್ರರಂಗದ ನಟಿ ನಟಿಯರು ಭಾಗವಹಿಸಲಿದ್ದಾರೆ.

  * ಅಕ್ಟೋಬರ್ 1: ಗಾಯಕಿ ಡಾ.ಶಮಿತಾ ಮಲ್ನಾಡ್ ತಮ್ಮ ಗಾಯನದ ಮೂಲಕ ರಂಜಿಸಲಿದ್ದಾರೆ.

  * ಅಕ್ಟೋಬರ್ 2: ಪವನ್ ಡ್ಯಾನ್ಸರ್, ನಟಿ ಹರ್ಷಿಕಾ ಪೂಣಚ್ಚ, ನಟ ವಿಜಯ ರಾಘವೇಂದ್ರ, ಅಮಿತ್ ತ್ರಿವೇದಿಯಿಂದ ಕಾರ್ಯಕ್ರಮ.

  * ಅಕ್ಟೋಬರ್ 3: ಸುಪ್ರಿಯಾ ರಾಮ್ ಮತ್ತು ಮಹಿಳಾ ಬ್ಯಾಂಡ್ ತಂಡ ಕಾರ್ಯಕ್ರಮ ನಡೆಸಿಕೊಡಲಿದೆ. ಬಳಿಕ ಪ್ಯಾಷನ್ ಶೋ.

  English summary
  Yuva Dasara will start from September 27: Here is the celebrities list who are going to perform at Yuva Dasara for seven days.
  Friday, September 23, 2022, 11:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X