"ನನ್ನೇನು ಅಭಿಮನ್ಯು ಅಂದುಕೊಂಡ್ಯ..; ಕೆಲವ್ರು ಕುಡಿದ ಮೇಲೆ ಗಂಡಸರಾಗ್ತಾರೆ.. ಇಲ್ಲಿವೆ 'ಯುವ' ಡೈಲಾಗ್ಸ್

'ಯುವ' ಬಂದಾಯ್ತು. ಹವಾ ಶುರುವಾಯ್ತು. ಅಭಿಮಾನಿಗಳ ಮೆರವಣಿಗೆ ಜೋರಾಯ್ತು. ಇನ್ನುಮುಂದೆ ಉತ್ಸವ ಹೇಗಿರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಸಂತೋಷ್ ಆನಂದ್‌ ರಾಮ್ ನಿರ್ದೇಶನದ 'ಯುವ' ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಸಣ್ಣಪುಟ್ಟ ತಪ್ಪುಗಳನ್ನು ಪಕ್ಕಕ್ಕಿಟ್ಟು ಸಿನಿರಸಿಕರು ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಯುವ ರಾಜ್‌ಕುಮಾರ್ ಪರ್ಫಾರ್ಮೆನ್ಸ್, ಅಚ್ಯುತ್‌ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ ನಟನೆ, ಸಂತೋಷ್ ಡೈರೆಕ್ಷನ್ ಎಲ್ಲದರ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಫಸ್ಟ್‌ ಹಾಫ್‌ನಲ್ಲಿ ಕಾಲೇಜು ಗ್ಯಾಂಗ್‌ವಾರ್, 'ಯುವ'ನ ಲವ್‌ಸ್ಟೋರಿಯಿಂದ ಆರಂಭಿಸಿ ಎರಡನೇ ಭಾಗದಲ್ಲಿ ಮಧ್ಯಮವರ್ಗದ ಕುಟುಂಬದ ಕಥೆಯನ್ನು ಹೇಳಿ ಕ್ಲಾಸ್, ಮಾಸ್ ಎರಡನ್ನೂ ಬ್ಯಾಲೆನ್ಸ್ ಮಾಡಿ ಚಿತ್ರತಂಡ ಗೆದ್ದಿದೆ.

Yuva film gets a heartwarming response from audience Yuva Rajkumar s Dialogues goes viral

ಇಡೀ 'ಯುವ' ಚಿತ್ರದಲ್ಲಿ ಹೈಲೆಟ್ ಎನಿಸಿಕೊಂಡಿರುವುದು ಡೈಲಾಗ್ಸ್. ಹೌದು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಬರೆದ ಸಾಲುಗಳು ಯುವ ರಾಜ್‌ಕುಮಾರ್ ಬಾಯಲ್ಲಿ ಬುಲೆಟ್‌ ರೀತಿ ಸಿಡಿದಿದೆ. ಬರೀ ಹೀರೋಗೆ ಮಾತ್ರವಲ್ಲ ಎಲ್ಲಾ ಪಾತ್ರಗಳಿಗೂ ಆಯಾ ಸಂದರ್ಭಕ್ಕೆ ಒಳ್ಳೆ ಒಳ್ಳೆ ಡೈಲಾಗ್ಸ್ ಸಿಕ್ಕಿದೆ. ಸೆಕೆಂಡ್ ಹಾಫ್‌ನಲ್ಲಿ ಫ್ಯಾಮಿಲಿ ಬಾಂಡಿಂಗ್ ಬಗ್ಗೆ ಹೇಳುವಾಗಳು ಸಂಭಾಷಣೆ ಬಹಳ ಆಪ್ತ ಎನಿಸುತ್ತದೆ. ಆದರೆ ಫಸ್ಟ್ ಹಾಫ್‌ನಲ್ಲಿ ಬರುವ ಮಾಸ್ ಡೈಲಾಗ್ಸ್ ಅಭಿಮಾನಿಗಳಿಂದ ಶಿಳ್ಳೆ ಚಪ್ಪಾಳೆ ಗಿಟ್ಟಿಸಿದೆ.

ಚಿತ್ರದ ಕೆಲ ಡೈಲಾಗ್‌ಗಳಂತೂ ಯಾರಿಗೋ ಕೌಂಟರ್ ಕೊಟ್ಟಂತೆ ಇದೆ ಎಂದು ಅಭಿಮಾನಿಗಳು ಊಹಿಸಿಕೊಳ್ಳುತ್ತಿದ್ದಾರೆ. ಇದು ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ. ಹಾಗಾಗಿ ಯಾರಿಗೂ ಕೌಂಟರ್‌ ಕೊಡಬೇಕಾದ ಅವಶ್ಯಕತೆ ಇಲ್ಲ ಎನಿಸುತ್ತದೆ. ಕಥೆಗೆ ತಕ್ಕಂತೆ ಆಯಾ ಸನ್ನಿವೇಶಕ್ಕೆ ಬೇಕಾದಂತೆ ಸಂಭಾಷಣೆ ಬರೆಯಲಾಗಿದೆ.

ಸಾಕಷ್ಟು ಪಂಚಿಂಗ್ ಡೈಲಾಗ್ಸ್ ಇವೆ. ಅದರಲ್ಲಿ ಕೆಲವೊಂದು ಸಖತ್ ಸದ್ದು ಮಾಡ್ತಿದೆ. "ಗೊತ್ತಿಲ್ಲದೆ ಒಳಗೆ ಬರೋಕೆ ನನ್ನೇನು ಅಭಿಮನ್ಯು ಅಂದುಕೊಂಡ್ಯ.. ಬಬ್ರುವಾಹನ" ಎನ್ನುವ ಡೈಲಾಗ್ ಅಭಿಮಾನಿಗಳ ಹಾಟ್ ಫೇವರಿಟ್ ಆಗಿದೆ. "ಕೆಲವ್ರು ಕುಡಿದ ಮೇಲೆ ಗಂಡಸರಾಗ್ತಾರೆ. ಇನ್ನು ಕೆಲವ್ರು ತಾನು ಗಂಡ್ಸು ಅಂತ ತೋರ್ಸಿಕೊಳ್ಳೋಕೆ ಕುಡಿತಾರೆ. ನಾನು ಆ 2 ಕ್ಯಾಟಗರಿನೂ ಅಲ್ಲ" ಎನ್ನುವುದು ವೈರಲ್ ಆಗ್ತಿದೆ.

Yuva film gets a heartwarming response from audience Yuva Rajkumar s Dialogues goes viral

"ಎದುರಾಕಿಕೊಳ್ಳೋಕೆ ನಾನ್ ರೆಡಿ. ಎದೆ ಕೊಡೋಕೆ ನೀನ್ ರೆಡಿನಾ? ನೀನು ಲೋಕಲ್.. ನಾನು ಪಕ್ಕಾ ಲೋಕಲ್" ಎನ್ನುವ ಮತ್ತೊಂದು ಡೈಲಾಗ್ ಸಖತ್ ಮಾಸ್ ಆಗಿದೆ. "ಕೈಲಾಸದಲ್ಲಿ ಇರೋದು ಶಿವ,
ಕೈಲಾಸಕ್ಕೆ ಕಳಿಸೋನು ಯುವ" ಎನ್ನುವ ಸಣ್ಣ ಡೈಲಾಗ್ ಕೂಡ ಥಿಯೇಟರ್‌ ಒಳಗೆ ದೊಡ್ಡದಾಗಿ ಸದ್ದು ಮಾಡ್ತಿದೆ.

"ಅಮ್ಮ ಅಕ್ಕ ಅಂತ ಸಾಲ ವಸೂಲಿ ಮಾಡೋ ನಿಮಗೆ ಇಷ್ಟು ಇರಬೇಕಂದ್ರೆ.. ಅದೇ ಅಮ್ಮ ಅಕ್ಕನಿಗೋಸ್ಕರ ಸಾಲ ಮಾಡೋ ನಮಗೆ ಎಷ್ಟು ಇರಬೇಡ" ಎನ್ನುವ ಸಾಲುಗಳು ಸಿನಿರಸಿಕರ ಮನೆಗೆಲ್ಲುತ್ತದೆ. "ಡಿಗ್ನಿಟಿ ಅನ್ನೋದು ನಾವು ಮಾಡೋ ಕೆಲಸದಲ್ಲಿ ಇರೋದಲ್ಲ
ಹೇಗೆ ಬದುಕುತ್ತೇವೆ ಅನ್ನೋದ್ರ ಮೇಲೆ ಇರೋದು" ಎನ್ನುವ ಡೈಲಾಗ್ ಸಿಂಪಲ್ಲಾಗಿ ಇಷ್ಟವಾಗುತ್ತದೆ.

"ಬ್ರಾಂಡ್ ಇರೋದು ಚೇಂಜ್ ಮಾಡೋಕ್ಕೆ ಅಲ್ಲ.. ಮೇಂಟೈನ್‌ ಮಾಡೋಕೆ" ಎನ್ನುವ ಡೈಲಾಗ್ ಕ್ಲಾಸ್ ಎನಿಸಿದರೆ "ಬೇಕೆಂದಾಗ ಫ್ರೆಂಡ್ ಆಗೋಕ್ಕೆ ನಾನು ಫೇಸ್ ಬುಕ್‌ನಲ್ಲಿ ಸೀಗೋನಲ್ಲ.. ಫೇಸ್ ಟು ಫೇಸ್ ಸಿಗೋನು" ಎನ್ನುವ ಸಾಲುಗಳಲ್ಲಿ ನಿರ್ದೇಶಕ ಸಂತೋಷ್ ಆನಂದ್‌ ರಾಮ್ ಮಾರ್ಕ್ ಕಾಣಿಸುತ್ತದೆ. ಕೆಲವನ್ನು ಈಗಾಗಲೇ 'ಯುವ' ಟ್ರೈಲರ್‌ನಲ್ಲಿ ಕೂಡ ಕೇಳಿರ್ತೀರ. ಕಂಪ್ಲೀಟ್ ಸಿನಿಮಾ ನೋಡಿದರೆ ಇಂತಹ ಸಾಕಷ್ಟು ಕ್ಯಾಚಿ ಡೈಲಾಗ್ಸ್ ಸಿಗುತ್ತವೆ.

More from Filmibeat

English summary
Fans Enjoying Yuva Rajkumar's Yuva film Dialogues;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X