ಆಡಿಕೊಂಡವರೆಲ್ಲ 'ಅಜ್ಞಾತವಾಸ'ಕ್ಕೆ, ಯುವ 'ಎರಡನೇ ವಾರ'ಕ್ಕೆ ; ಎಲ್ಲೆಲ್ಲಿ,ಹೇಗಿದೆ ಪ್ರದರ್ಶನ..?
.''ಯುವರಾಜ್ ಕುಮಾರ್'' ಅಭಿನಯದ ಚೊಚ್ಚಲ ಸಿನಿಮಾ ''ಯುವ'' ತೆರೆಗೆ ಬರುವ ಮುನ್ನ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಗಳಿದ್ದವು. ಯುವ ಅಭಿನಯ, ಡ್ಯಾನ್ಸ್, ಫೈಟ್ ಹೇಗಿರಲಿದೆ ಎಂಬ ಪ್ರಶ್ನೆ ಅನೇಕರಲ್ಲಿದ್ದವು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಳೆದ ವಾರವೇ ಸಿಕ್ಕಿದೆ. ನಿರೀಕ್ಷೆಯ ಪರೀಕ್ಷೆಯಲ್ಲಿ ಕೂಡ ಯುವ ಪಾಸಾಗಿದೆ. ಇದಕ್ಕೆ ಸಾಕ್ಷಿ ಅನ್ನುವಂತೆ ಸಂತೋಷ್ ಆನಂದ್ ರಾಮ್ ನಿರ್ದೇಶನದ ಹೊಂಬಾಳೆ ಸಂಸ್ಥೆ ನಿರ್ಮಾಣದ ಯುವ ಎರಡನೇ ವಾರಕ್ಕೆ ಕಾಲಿಟ್ಟಿದೆ.
ಹೌದು, ಯುವ ಚಿತ್ರದ ''ಮೊದಲನೇ ವಾರ''ದ ಪ್ರದರ್ಶನ ''ಯಶಸ್ವೀ''ಯಾಗಿ ಮುಕ್ತಾಯವಾಗಿದೆ. ''ಎರಡನೇ ವಾರ''ದ ಆಟ ಈಗ ಪ್ರಾರಂಭವಾಗಿದೆ. 140ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಯುವ ಓಡುತ್ತಿದೆ. ಇನ್ನೂ ನಂಬುವುದು ಬಿಡುವುದು ನಿಮಗೆ ಬಿಟ್ಟಿದ್ದಾದರೂ, ಯುವ ಚಿತ್ರದ ''ಟಿಕೆಟ್'' ಗಳು ಅನೇಕ ಕಡೆ ಎರಡನೇ ವಾರದಲ್ಲಿಯೂ ವೇಗವಾಗಿ ಮಾರಾಟವಾಗುತ್ತಿವೆ. ಉದಾಹರಣೆಗೆ ಓರಾಯನ್ ಮಾಲ್ ನಲ್ಲಿ ಇಂದು ಮಧ್ಯಾಹ್ನ 03 ಘಂಟೆಯ ಪ್ರದರ್ಶನದ ''ರಿಕ್ಲೈನರ್ ಟಿಕೆಟ್'' ಇರಬಹುದು ಅಥವಾ 03-55ರಂದು 900 ರೂಪಾಯಿ ಬೆಲೆ ಬಾಳುವ ''ಗೋಲ್ಡ್ ಫ್ರೈಮ್ ಸೀಟ್'' ಇರಬಹುದು.. ಎಲ್ಲವೂ ''ಫಾಸ್ಟ್ ಫಿಲ್ಲಿಂಗ್"

ಇನ್ನೂ ಯುವ ಕೇವಲ ''ಮಾಸ್'' ಅಲ್ಲ ಬದಲಿಗೆ ''ಕ್ಲಾಸ್'' ಸಿನಿಮಾ ಕೂಡ ಹೌದು. ಇಲ್ಲಿ ಕೇವಲ ''ಹೊಡೆದಾಟ'' ಇಲ್ಲ. ''ಭಾವನೆಗಳ ಮೆರವಣಿಗೆ''ಯೂ ಇದೆ. ತಂದೆ-ಮಗನ ಬಾಂಧವ್ಯದ ಅನುಬಂಧವೂ ಇದೆ. ಈ ಕಾರಣಕ್ಕೆ ಚಿತ್ರಮಂದಿರಕ್ಕೆ ಕೇವಲ ಹದಿಹರೆಯದ ಯುವಕ-ಯುವತಿಯರಷ್ಟೇ ಅಲ್ಲ ದೊಡ್ಡವರು, ಹಿರಿಯರು, ತಮ್ಮ ಮನೆ ಮಂದಿಯನ್ನೆಲ್ಲ ಕರೆದುಕೊಂಡು ಬಂದು ಸಿನಿಮಾ ನೋಡುತ್ತಿದ್ದಾರೆ.

ಕೇವಲ ಬೆಂಗಳೂರು ಮಾತ್ರ ಅಲ್ಲ ಹುಬ್ಬಳ್ಳಿಯಲ್ಲಿಯೂ ಯುವ ಚಿತ್ರಕ್ಕೆ ಉತ್ತಮವಾದ ಪ್ರತಿಕ್ರಿಯೆ ಸಿಕ್ತಿದೆ. ಅಲ್ಲಿರುವ ಬೆರಳಣಿಕೆಯ ಚಿತ್ರಮಂದಿರಗಳ ಪೈಕಿ ನಾಲ್ಕು ಕಡೆ ಯುವ ಅಬ್ಬರ ಮುಂದುವರೆದಿದೆ. ಧಾರವಾಡದಲ್ಲಿ ''ಸಂಗಮ್'' ಹಾಗೂ ''ಸ್ಮಾರ್ಟ್ ಸಿಟಿ ಮಾಲ್'' ನಲ್ಲಿ ಯುವ ಭದ್ರವಾಗಿ ನೆಲೆಯೂರಿದೆ. ಇನ್ನೂ ಮೈಸೂರಿನಲ್ಲಿ ''08 ಕಡೆ'' ಯುವ ಪ್ರರ್ದಶನವಾಗುತ್ತಿದೆ. ಇನ್ನೂ ಮಂಗಳೂರಿನಲ್ಲಿ ಕನ್ನಡ ಚಿತ್ರಗಳಿಗೆ ಭವ್ಯವಾದ ಸ್ವಾಗತ ಸಿಗಲ್ಲ ಅನ್ನುವ ಮಾತು ಇದೆ. ಆದರೆ ಯುವ ಮಂಗಳೂರಿನಲ್ಲಿ ''05'' ಕಡೆ ಪ್ರದರ್ಶನವಾಗುತ್ತಿದೆ. ಅದು ಎರಡನೇ ವಾರದಲ್ಲಿ..

ಇನ್ನೂ ''ಕ್ಯಾಲಿಪೋರ್ನಿಯಾ'', ''ಫ್ಲೋರಿಡಾ''.. ಹೀಗೆ ''ಯುಎಸ್‌ಎ''ನ ಬಹುತೇಕ ಕಡೆ ನಿನ್ನೆ''ಯುವ'' ಚಿತ್ರ ಲ್ಲಿ ತೆರೆಗೆ ಬಂದಿದೆ. ಇನ್ನೂ ಹತ್ತಾರು ಕಡೆ ''ಯುವರಾಜ್ ಕುಮಾರ್'' ಅಭಿನಯದ ''ಯುವಾ'' ಗೆ ಬೇಡಿಕೆಯೂ ಇದೆ. ಒಟ್ನಲ್ಲಿ ಯುವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾಗೆ ಅದ್ದೂರಿಯಾದ ''ಸ್ವಾಗತ'' ಮೊದಲನೇ ವಾರವಷ್ಟೇ ಸಿಕ್ಕಿಲ್ಲ. ''ಎರಡನೇ ವಾರ''ವೂ ಸಿಕ್ಕಿದೆ. ಕನ್ನಡ ಕಲಾರಸಿಕರ ಹೃದಯವನ್ನ ಗೆಲ್ಲುತ್ತಾ ಚಿತ್ರ ಮುನ್ನುಗ್ಗುತ್ತಿದೆ. ಈ ಎಲ್ಲ ಕಾರಣಗಳಿಂದ ''ಯುವ ಹವಾ ಕೇವಲ ಮೂರು ದಿನ ಮಾತ್ರ ಅಂತ ಆಡಿಕೊಂಡವರೆಲ್ಲ ಇವತ್ತು ಅಜ್ಞಾತವಾಸಕ್ಕೆ ತೆರಳಿದ್ದಾರೆ'' ಅನ್ನುವ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ನೀವೇನಂತೀರಾ..?


Click it and Unblock the Notifications











