''ಪರಭಾಷೆ'' ಸಿನಿಮಾ ಹಾವಳಿ ; 3ನೇ ವಾರ ಕರುನಾಡಿನೆಲ್ಲೆಡೆ ಹೇಗಿದೆ ''ಯುವ'' ಹವಾ..?

ಒಂದು ಕಡೆ ಆಡು ಜೀವಿತಂ.. ಆವೇಶಂ ನಂತಹ ಮಲಯಾಳಂ ಚಿತ್ರಗಳ ಅಬ್ಬರ.. ಮತ್ತೊಂದು ಕಡೆ ಬಡೇ ಮಿಯಾ ಚೋಟೆ ಮಿಯಾ.. ಮೈದಾನ್‌ ನಂತಹ ಬಾಲಿವುಡ್ ಚಿತ್ರಗಳ ಸಡಗರ..
ಮಗದೊಂದು ಕಡೆ ಹಾಲಿವುಡ್ ನ ಗಾಡ್‌ ಜಿಲಾ ಕಾಂಗ್ ಎಂಬ ರಣಬೇಟೆಗಾರ.. ಇವೆಲ್ಲದರ ನಡುವೆ ಈಜಿ ಗಂಧದಗುಡಿಯ ಯುವ ಮೂರನೇ ವಾರಕ್ಕೆ ಕಾಲಿಟ್ಟಿದೆ.

ಹೌದು, ಯುವರಾಜ್ ಕುಮಾರ್ ಅಭಿನ ಯದ ಚೊಚ್ಚಲ ಸಿನಿಮಾ ಯುವ ಎರಡು ವಾರಗಳ ಯಶಸ್ವೀ ಪ್ರದರ್ಶನವನ್ನ ಕಂಡಿದೆ. ಮೂರನೇ ವಾರಕ್ಕೆ ಚಿತ್ರ ಕಾಲಿಟ್ಟಿದೆ. ವಿಶೇಷ ಅಂದರೆ ಮೂರನೇ ವಾರದಲ್ಲಿಯೂ ಯುವ ಹವಾ ಇನ್ನೂ ಹಾಗೇ ಇದೆ. ಬೆಂಗಳೂರಿನ ಪಿವಿಆರ್ ಗ್ಲೋಬಲ್ ಮಾಲ್.. ಜಿ.ಟಿ.ವರ್ಲ್ಡ್ ಮಾಲ್.. ಇಂದು ರಾತ್ರಿ ಹತ್ತರ ಪ್ರದರ್ಶನದ ಟಿಕೆಟ್ ಬಹುತೇಕ ಸೋಲ್ಡ್ ಔಟ್ ಆಗಿವೆ. ಓರಾಯನ್ ಮಾಲ್ ನಲ್ಲಿ ಸಂಜೆ 07-15ರ ಪ್ರದರ್ಶನಕ್ಕೆ ನುಕೂ ನುಗ್ಗಲಿನ ವಾತಾವರಣ ಕಂಡು ಬಂದಿದೆ.

Yuva Raj Kumars Debut Film Yuva Has Successfully Entered Into Its Third Week

ಇನ್ನೂ ನಾಳೆಯೂ ಕೂಡ ಜಿ.ಟಿ.ವರ್ಲ್ಡ್ ಮಾಲ್ ನಲ್ಲಿ ಮಧ್ನಾಹ್ನ 01-05ರ ಪ್ರದರ್ಶನದ ಟಿಕೆಟ್ ವಿಂಡೋ ಮುಂದೆ ಫಾಸ್ಟ್ ಫಿಲ್ಲಿಂಗ್ ಎಂಬ ಬೋರ್ಡ್ ಕಂಡು ಬರುತ್ತಿದೆ. ಬನ್ನೇರಘಟ್ಟ ರಸ್ತೆಯ ವೆಗಾ ಸಿಟಿಯಲ್ಲಿಯೂ ವಾತಾವರಣ ಇದೇ ರೀತಿ ಇದೆ. ಸಂತೋಷ್, ನವರಂಗ್, ಸಿದ್ದೇಶ್ವರ, ವೀರಭದ್ರೇಶ್ವರ, ಕಾಮಾಕ್ಯ.. ಹೀಗೆ ಅನೇಕ ಕಡೆ ಚಿತ್ರ ಇನ್ನೂ ಪ್ರದರ್ಶನವನ್ನ ಕಾಣುತ್ತಿದೆ.

ಅದು ಮೂರನೇ ವಾರದಲ್ಲಿ ಮೈಸೂರು, ಮಂಡ್ಯ, ಹಾಸನ, ಹುಬ್ಬಳ್ಳಿ, ಧಾರವಾಡ, ಗದಗ, ರಾಣೆಬೆನ್ನೂರು, ಬಾಗಲಕೋಟೆ, ಬೆಳಗಾವಿ, ಹೀಗೆ ಕರುನಾಡಿನ ಅನೇಕ ಕಡೆ ಯುವ ಚಿತ್ರ ಇನ್ನೂ ಚಿತ್ರಮಂದಿರದಲ್ಲಿ ಇದೆ. ಇನ್ನೂ ಕೇವಲ ಮೈಸೂರಿನಲ್ಲಿಯೇ ಚಿತ್ರ ಒಂದು ಕೋಟಿ ಪ್ಲಸ್ ಹಣ ಗಳಿಸಿದೆ ಅನ್ನುವ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.

Yuva Raj Kumars Debut Film Yuva Has Successfully Entered Into Its Third Week

ಇನ್ನೂ ಯುವ ಕೇವಲ ಮಾಸ್ ಅಲ್ಲ ಬದಲಿಗೆ ಕ್ಲಾಸ್ ಸಿನಿಮಾ ಕೂಡ ಹೌದು. ಇಲ್ಲಿ ಕೇವಲ ರಕ್ತವಷ್ಟೇ ಇಲ್ಲ. ಭಾವನೆಗಳ ಮೆರವಣಿಗೆಯೂ ಇದೆ. ತಂದೆ-ಮಗನ ಬಾಂಧವ್ಯದ ಅನುಬಂಧವೂ ಇದೆ. ಈ ಕಾರಣಕ್ಕೆ ಒಮ್ಮೆ ನೋಡಿದವರು.. ಮತ್ತೆ ಮತ್ತೆ ಬರುತ್ತಿದ್ದಾರೆ.. ಎಂಬ ಮಾತು ಕೂಡ ಚಿತ್ರಮಂದಿರದ ಆವರಣದಲ್ಲಿ ಮಾರ್ದನಿಸುತ್ತಿದೆ.

ಒಟ್ನಲ್ಲಿ ಯುವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ ಯುವ ಎರಡು ವಾರದ ಪ್ರದರ್ಶನವನ್ನ ಕಂಡಿದೆ. ಮೂರನೇ ವಾರಕ್ಕೆ ಲಗ್ಗೆ ಇಟ್ಟಿದೆ. ಪರಭಾಷೆ ಸಿನಿಮಾ ಹಾವಳಿ ನಡುವೆಯೂ ಬಾಕ್ಸಾಫೀಸ್ ನಲ್ಲಿ ಮುನ್ನುಗ್ಗುತ್ತಿರುವ ಯುವ, ಚಿತ್ರಮಂದಿರದಲ್ಲಿ ಇರುವಷ್ಟು ದಿನ ಒಟ್ಟು ಎಷ್ಟು ಹಣವನ್ನ ದೋಚಲಿದೆ ಅನ್ನುವುದು ಸದ್ಯದ ಕುತೂಹಲ

More from Filmibeat

English summary
Yuvaraj Kumar' s Yuva, Which Is Loved By Critics And Cinegoers Has Successfully Entered Into Its Second Week
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X