Yuva Rajkumar: ಯುವ ರಾಜ್‌ಕುಮಾರ್, ಸಂತೋಷ್ ಆನಂದ್‌ರಾಮ್ ಚಿತ್ರಕ್ಕೆ ಮುಹೂರ್ತ ಫಿಕ್ಸ್!
ಕನ್ನಡ ಚಿತ್ರ ರಂಗದಲ್ಲಿ ಮತ್ತೊಬ್ಬ ಸ್ಟಾರ್ ಎಂಟ್ರಿಗೆ ವೇದಿಕೆ ಸಜ್ಜಾಗಿದೆ. ರಾಜ್‌ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್ ಕಿರಿಯ ಪುತ್ರ ಯುವ ರಾಜ್‌ಕುಮಾರ್ ಸಿನಿಮಾ ರಂಗಕ್ಕೆ ಭರ್ಜರಿ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಅವರ ಮೊದಲ ಚಿತ್ರ 'ಯುವ ರಣಧೀರ ಕಂಠೀರವ'ದ, ಪೋಸ್ಟರ್ ಲುಕ್ ಲಾಂಚ್ ಆಗಿದೆ. ಆದರೆ ಅಪ್ಪು ನಿಧನದ ಬಳಿಕ ಎಲ್ಲವೂ ಬದಲಾಗುತ್ತಿದೆ.
Recommended Video

ಈಗಾಗಲೇ ಲಾಂಚ್ ಆಗಿರುವ ಯುವರಾಜ್‌ಕುಮಾರ್ ಮೊದಲ ಸಿನಿಮಾ 'ಯುವ ರಣಧೀರ ಕಂಠೀರವ'. ಆದರೆ ಈಗ ಇದು ಯುವ ರಾಜ್‌ಕುಮಾರ್ ಅವರ ಮೊದಲ ಸಿನಿಮಾ ಆಗಲ್ಲ. ಈ ಚಿತ್ರಕ್ಕೂ ಮೊದಲು ಮತ್ತೊಂದು ಚಿತ್ರ ಬರಲಿದೆ. ಈ ಸಿನಿಮಾ ಬಗ್ಗೆ ಈ ಹಿಂದೆನೇ ಫಿಲ್ಮೀ ಬೀಟ್ ವರದಿ ಮಾಡಿತ್ತು. ಈಗ ಈ ಸುದ್ದಿ ನಿಜ ಆಗಿದೆ.
ನಿರ್ದೇಶಕ ಸಂತೋಷ್ ಆನಂದ್ ರಾಮ್, ದೊಡ್ಮನೆ ಯುವರಾಜನನ್ನು ಲಾಂಚ್ ಮಾಡುತ್ತಾರೆ ಎಂದು ವರದಿ ಮಾಡಲಾಗಿತ್ತು. ಅದಕ್ಕೀಗ ಕಾಲ ಕೂಡಿ ಬಂದಿದೆ. ಈ ಚಿತ್ರದ ಲಾಂಚ್‌ಗೆ ದಿನಾಂಕವನ್ನು ಕೂಡ ನಿಗದಿ ಮಾಡಲಾಗಿದೆ. ಜೊತೆಗೆ ಸಿನಿಮಾದ ನಿರ್ಮಾಪಕರು ಕೂಡ ಯಾರು ಎನ್ನುವುದು ತಿಳಿದು ಬಂದಿದೆ.

ದೊಡ್ಮನೆ ಮೊಮ್ಮಗನ ಲಾಂಚ್‌ಗೆ ಮುಹೂರ್ತ ಫಿಕ್ಸ್!
ಹಲವು ದಿನಗಳಿಂದ ಯುವ ರಾಜ್‌ಕುಮಾರ್ ಮೊದಲ ಚಿತ್ರದ ಬದಲಾವಣೆಯ ಬಗ್ಗೆ ಸುದ್ದಿ ಹಬ್ಬಿದೆ. ಈಗ ಅದಕ್ಕೆಲ್ಲ ತೆರೆ ಬೀಳುವ ಕಾಲ ಹತ್ತಿರ ಆಗಿದೆ. ಯುವ ರಾಜ್‌ಕುಮಾರ್ ಮೊದಲ ಚಿತ್ರವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಮಾಡುವುದು ಬಹುತೇಕ ಪಕ್ಕಾ ಆಗಿದೆ. ಸಂತೋಷ್ ಆನಂದ್‌ರಾಮ್ ನಿರ್ದೇಶನದಲ್ಲೇ ಯುವ ರಾಜ್‌ಕುಮಾರ್ ಲಾಂಚ್ ಆಗಲಿದ್ದಾರೆ. ಈಗಾಗಲೇ ಈ ಬಗ್ಗೆ ಮಾತುಕಥೆ ಕೂಡ ಆಗಿದೆ. ಈ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಹೇಳುವುದು ಒಂದೇ ಬಾಕಿ ಇದೆ.

ಏಪ್ರಿಲ್ 24ಕ್ಕೆ ಯುವ ಹೊಸ ಸಿನಿಮಾ
ಸಂತೋಷ್ ಆನಂದ್‌ರಾಮ್ ಮತ್ತು ಯುವ ರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ ಬರುವ ಚಿತ್ರದ ಬಗ್ಗೆ ಅಧಿಕೃತ ಮಾಹಿತಿ ಏಪ್ರಿಲ್ 24ಕ್ಕೆ ಹೊರ ಬೀಳಲಿದೆ. ರಾಜ್ ಕುಮಾರ್ ಹುಟ್ಟು ಹಬ್ಬದ ಅಂಗವಾಗಿ, ಈ ಚಿತ್ರ ಅಧಿಕೃತವಾಗಿ ಪ್ರಕಟ ಆಗಲಿದೆ. ಅಂದೇ ಯುವ ರಾಜ್‌ಕುಮಾರ್ ಹೊಸ ಚಿತ್ರದ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿ ನೀಡಲಿದೆ. ಅಪ್ಪು ನಂತರ ಯುವ ರಾಜ್‌ಕುಮಾರ್ ಸೇರಿದಂತೆ ರಾಜ್ ಕುಟುಂಬ ಹೀರೊಗಳ ಮೇಲಿನ ಜವಾಬ್ದಾರಿ ಹೆಚ್ಚಿದೆ. ಅಪ್ಪು ಅಭಿಮಾನಿಗಳು ಅಂತು ಯುವ ರಾಜ್‌ಕುಮಾರ್‌ರನ್ನು ನೀವೇ ನಮ್ಮಅಪ್ಪು ಎನ್ನುತ್ತಿದ್ದಾರೆ.

ಅಪ್ಪುಗಾಗಿ ಮಾಡಿದ್ದ ಕಥೆಯಲ್ಲಿ ಯುವ?
ಇನ್ನು ಈಗಾಗಲೇ ಲಾಂಚ್ ಆಗಿದ್ದ 'ಯುವ ರಣಧೀರ ಕಂಠೀರವ' ಚಿತ್ರ ನಿಂತು ಹೋಗಿದೆ. ಈ ಕಾರಣಕ್ಕೆ ಮೊದಲು ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಯುವ ರಾಜ್‌ಕುಮಾರ್ ಲಾಂಚ್ ಆಗಲಿದ್ದಾರೆ. ಆ ಚಿತ್ರಕ್ಕಾಗಿ ಯುವ ಈಗಾಗಲೇ ತಯಾರಿ ನಡೆಸಿದ್ದಾರೆ. 'ಯುವ ರಣಧೀರ ಕಂಠೀರವ' ಈ ನಟನ ಎರಡನೇ ಚಿತ್ರ ಆಗಲಿದೆ. ಇನ್ನು ಅಪ್ಪುಗಾಗಿ ಮಾಡಿದ್ದ ಕಥೆಯಲ್ಲಿ ಬದಲಾವಣೆ ಮಾಡಿ ಆ ಕಥೆಯನ್ನು ಸಂತೋಷ್ ಅವರು ಯುವ ರಾಜ್‌ಗೆ ಸಿನಿಮಾ ಮಾಡಲಿದ್ದಾರೆ. ಈ ಚಿತ್ರಕ್ಕೆ ಹೊಂಬಾಳೆ ಬಂಡವಾಳ ಹೂಡಲಿದೆ ಎಂದು ತಿಳಿದು ಬಂದಿದೆ.

ನಿರೀಕ್ಷೆ ಹುಟ್ಟಿಸಿರೋ ಯುವ ಹೊಸ ಸಿನಿಮಾ
ಪುನೀತ್ ರಾಜ್‌ಕುಮಾರ್ ಅವರನ್ನು ಅದೆಷ್ಟೋ ಜನ ಯುವ ರಾಜ್‌ಕುಮಾರ್‌ನಲ್ಲಿ ಕಾಣುತ್ತಿದ್ದಾರೆ. ಯುವ ಮೊದಲ ಚಿತ್ರಕ್ಕೆ ಅಪ್ಪು ಬೆನ್ನೆಲುಬಾಗಿ ನಿಂತಿದ್ದರು. ಆದರೆ ಅಪ್ಪು ನಂತರ ಬಹುತೇಕ ಮಂದಿ ಅಪ್ಪು ಅವರನ್ನು ಯುವರಾಜ್‌ನಲ್ಲಿ ಕಾಣುತ್ತಿದ್ದಾರೆ. ಹಾಗಾಗಿ ಯುವ ರಾಜ್ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮೊದಲ ಚಿತ್ರ ಬಹಳ ಪ್ರಾಮುಖ್ಯತೆ ಪಡೆದು ಕೊಂಡಿದೆ. ಹಾಗಾಗಿ ಯುವ ರಾಜ್‌ಕುಮಾರ್ ಲಾಂಚಿಂಗ್ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳುತ್ತಿದ್ದು, ಹೊಂಬಾಳೆ ಬಂಡವಾಳ ಹೂಡಿದೆ.


Click it and Unblock the Notifications











