Yuva RajKumar: ಯುವರಾಜ್ ಕುಮಾರ್ ಮೊದಲ ಚಿತ್ರದ ಫೋಟೊಶೂಟ್ ಶುರು: ಇಲ್ಲಿದೆ ಡಿಟೈಲ್ಸ್

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ನವ ನಾಯಕ ಯುವ ರಾಜ್‌ಕುಮಾರ್ ಬಗ್ಗೆ ಸಾಕಷ್ಟು ಸುದ್ದಿ ಹಬ್ಬಿದೆ. ಯುವ ರಾಜ್‌ಕುಮಾರ್ ಮೊದಲ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿ ಹಬ್ಬಿದೆ. ಯುವ ರಾಜ್‌ಕುಮಾರ್ ಲಾಂಚಿಂಗ್ ಚಿತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಇನ್ನು ಒಮ್ಮೆಯೂ ಯುವರಾಜ್ ತೆರೆಯ ಮೇಲೆ ಬಂದಿಲ್ಲ. ಅದಾಗಲೇ ಇವರಿಗೆ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿದೆ.

ಯುವರಾಜ್ ಮೊದಲ ಚಿತ್ರಕ್ಕಾಗಿ ದೊಡ್ಮನೆ ಅಭಿಮನಿಗಳು ಕಾಯುತ್ತಾ ಇದ್ದಾರೆ. ಸದ್ಯ ರಾಜ್‌ ಕುಟುಂಬದಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ ಯುವರಾಜ್ ಮೊದಲ ಸಿನಿಮಾ. ಪುನೀತ್ ರಾಜ್‌ಕುಮಾರ್ ಇರಬೇಕಾದರೆ 'ಯುವ ರಣಧೀರ ಕಂಠೀರವ' ಚಿತ್ರ ಲಾಂಚ್ ಆಗಿತ್ತು. ಚಿತ್ರದ ಟೀಸರ್ ಮತ್ತು ಫಸ್ಟ್ ಲುಕ್‌ ಕೂಡ ರಿಲೀಸ್ ಆಗಿತ್ತು. ಆದರೆ ಅಪ್ಪು ನಿಧನದ ನಂತ್ರ ಎಲ್ಲವೂ ಬದಲಾಗಿದೆ.

ಈಗ ಯುವ ರಾಜ್‌ಕುಮಾರ್ ಮೊದಲ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಹೊಂಬಾಳೆ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲಿದೆ ಎನ್ನುವ ಬಗ್ಗೆಯೂ ಸುದ್ದಿ ಹೊರ ಬಂದಿದೆ. ಈ ಚಿತ್ರದ ಟೈಟಲ್ ಬಗ್ಗೆ ಸದ್ಯ ಸಾಕಷ್ಟು ಕುತೂಹಲಗಳು ಮೂಡಿವೆ. ಆದರೆ ಈಗ ಚಿತ್ರತಂಡ ಫೋಟೊಶೂಟ್ ಮೂಲಕ ಭರ್ಜರಿಯಾಗಿ ಕೆಲಸ ಆರಂಭಿಸಿದೆಯಂತೆ.

Recommended Video

KGF Chapter 2 Mumbai Press Meet LIVE | Yash | Sanjay Dutt | Raveena Tandon | Prashanth Neel
ಯುವ ರಾಜ್‌ಮೊದಲ ಚಿತ್ರದ ಭರ್ಜರಿ ಫೋಟೊಶೂಟ್!

ಯುವ ರಾಜ್‌ಮೊದಲ ಚಿತ್ರದ ಭರ್ಜರಿ ಫೋಟೊಶೂಟ್!

ಯುವ ರಾಜ್‌ಕುಮಾರ್ ಮೊದಲ ಚಿತ್ರದ ಕೆಲಸಗಳು ಶುರುವಾಗಿವೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಇತ್ತೀಚೆಗಷ್ಟೆ ಚಿತ್ರದ ಬಗ್ಗೆ, ನಿರ್ದೇಶಕ, ನಿರ್ಮಾಪಕರ ಬಗ್ಗೆ ಸುದ್ದಿಗಳು ಹರಿದಾಡಿದೆ. ಇದರ ಬೆನ್ನಲ್ಲೆ ಚಿತ್ರದ ಫ್ರಿ ಪ್ರೊಡಕ್ಷನ್ ಕೆಲಸಗಳು ಶುರುವಾಗಿರುವ ಬಗ್ಗೆ ಸುದ್ದಿ ಬಂದಿದೆ. ಈ ಚಿತ್ರಕ್ಕಾಗಿ ಚಿತ್ರತಂಡ ಯುವರಾಜ್ ಫೋಟೊಶೂಟ್ ಮಾಡಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ಗಾಗಿ ಯುವ ಫೋಟೊಶೂಟ್ ಮಾಡಿದೆ ಚಿತ್ರತಂಡ. ಸಂತೋಷ್ ಆನಂದ್ ರಾಮ್ ಪರಿಕಲ್ಪನೆದಲ್ಲಿ ಫೋಟೊಶೂಟ್ ನೆರವೇರಿದೆ ಎನ್ನಲಾಗಿದೆ.

ಯುವರಾಜ್ ರಾಜ್‌ಕುಮಾರ್ ಪಾತ್ರವೇನು?

ಯುವರಾಜ್ ರಾಜ್‌ಕುಮಾರ್ ಪಾತ್ರವೇನು?

ಇನ್ನು ಯುವರಾಜ್ ಮೊದಲ ಚಿತ್ರದಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಮೂಡಿವೆ. ಸಾಮಾನ್ಯವಾಗಿ ನಾಯಕನ ಮೊದಲ ಲಾಂಚಿಂಗ್ ಚಿತ್ರ ಎಂದರೆ, ಅದು ಲವ್ ಸ್ಟೋರಿ ಆಗಿರುತ್ತದೆ. ಇಲ್ಲವೇ ಕ್ರೀಡೆಯ ಕುರಿತಾದ ಚಿತ್ರ ಆಗಿರುತ್ತದೆ. ಇದೆ ರೀತಿಯ ಕಥೆಗಳಲ್ಲಿ ನಾಯಕರು ಹೆಚ್ಚಾಗಿ ಲಾಂಚ್ ಆಗುತ್ತಾರೆ. ಆದರೆ ಸಾಮಾನ್ಯವಾಗಿ ಯುವ ರಾಜ್‌ಕುಮಾರ್ ನೋಡಿದರೆ ಅವರಿಗೆ ರಗಡ್ ಪಾತ್ರ ಒಪ್ಪುತ್ತೆ ಎನಿಸುತ್ತದೆ. ಆದರೆ ಈ ಚಿತ್ರದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಅಂತ ನೋಡಬೇಕಿದೆ.

ಸಂತೋಷ್ ಆನಂದ್ ರಾಮ್‌ ಮೇಲೆ ನಿರೀಕ್ಷೆ!

ಸಂತೋಷ್ ಆನಂದ್ ರಾಮ್‌ ಮೇಲೆ ನಿರೀಕ್ಷೆ!

ಯುವ ಮೊದಲ ಚಿತ್ರವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಮಾಡಲಿದ್ದಾರೆ. ಹಾಗಾಗಿ ಹೆಚ್ಚಿನ ಆತಂಕ ಇಲ್ಲ. ಸಂತೋಷ್ ಆನಂದ್ ರಾಮ್ ಒಬ್ಬ ಭರವಸೆಯ ನಿರ್ದೇಶಕನಾಗಿ ಈಗಾಗಲೇ ಗುರುತಿಸಿಕೊಂಡಿದ್ದಾರೆ. ಸಂತೋಷ್ ಆನಂದ್ ರಾಮ್ ಇಲ್ಲಿ ತನಕ ನಾಲ್ಕು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅದರಲ್ಲಿ 'ರಾಘವೇಂದ್ರ ಸ್ಟೋರ್ಸ್' ಚಿತ್ರ ರಿಲೀಸ್ ಆಗಬೇಕಿದೆ. ಇನ್ನುಳಿದ ಮೂರು ಚಿತ್ರಗಳು ಹಿಟ್ ಲಿಸ್ಟ್ ಸೇರಿವೆ. ಹಾಗಾಗಿ ಯುವ ಮೊದಲ ಚಿತ್ರ ಚೆನ್ನಾಗಿ ಇರುತ್ತೆ ಎನ್ನುವ ಭರವಸೆ ಮೂಡಿದೆ.

ಏಪ್ರಿಲ್ 24ಕ್ಕೆ ಸಿಗಲಿದೆ ಉತ್ತರ!

ಏಪ್ರಿಲ್ 24ಕ್ಕೆ ಸಿಗಲಿದೆ ಉತ್ತರ!

ರಾಜ್‌ ಕುಟುಂಬದ ಹೊಸ ಕುಡಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದೆ. ಹಾಗಾಗಿ ಯುವ ರಾಜ್‌ಕುಮಾರ್ ಲಾಂಚ್ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಯುವ ಮೊದಲ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ಇದೇ ಏಪ್ರಿಲ್ 24ಕ್ಕೆ ಹೊರ ಬೀಳಲಿದೆ. ಅಂದೇ ಯುವ ಮೊದಲ ಲುಕ್ ಕೂಡ ರಿಲೀಸ್ ಆಗಲಿದೆ. ಏಪ್ರಿಲ್ 24ಕ್ಕೆ ರಾಜ್‌ಕುಮಾರ್ ಹುಟ್ಟುಹಬ್ಬ ಇರುವ ಕಾರಣಕ್ಕೆ ಅಂದೇ ಯುವ ಮೊದಲ ಚಿತ್ರ ಲಾಂಚ್ ಆಗುತ್ತಾ ಇದೆ.

More from Filmibeat

English summary
Puneeth Nephew Yuva Rajkumar And Santhosh Ananddram Combo Movie Kick Start With PhotoShoot Movie Launch On April 24th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X