ಯುವರಾಜ್ ಕುಮಾರ್- ಶ್ರೀದೇವಿ ಭೈರಪ್ಪ ವಿಚ್ಛೇದನಕ್ಕೆ ಹೊಸ ಟ್ವಿಸ್ಟ್, ಕೋರ್ಟ್‌ನಿಂದ ಮಹತ್ವದ ಆದೇಶ..!
ಇಂದು ಖುಷಿ ಖುಷಿಯಾಗಿ ನಿಂತು ಹಸೆಮಣೆ ಏರಿ ಮದುವೆಯಾದವರು ದಿನ ಕಳೆಯುವಷ್ಟರಲ್ಲಿ ಕೋರ್ಟ್ ಮೆಟ್ಟಿಲೇರುವ ಮಟ್ಟಿಗೆ ಮದುವೆ, ದಾಂಪತ್ಯ ಅನ್ನೋದು ಕಾಮನ್ನಾಗಿರೋದು ದುರ್ದೈವ. ಇದಕ್ಕೆ ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಸದ್ಯದ ಉದಾಹರಣೆ.
ಹೌದು, 07 ವರ್ಷದ ಪ್ರೀತಿ ಮತ್ತು 04 ವರ್ಷದ ದಾಂಪತ್ಯ ಜೀವನಕ್ಕೆ ಯುವ ಮತ್ತು ಶ್ರೀದೇವಿ ಎಳ್ಳು-ನೀರು ಬಿಡಲು ಮುಂದಾಗಿರುವುದು ನಿಮಗೆ ಗೊತ್ತು. ಕೂಡಿ ಬಾಳಬೇಕಿದ್ದ ದೊಡ್ಮನೆಯ ಕುಡಿ ಮತ್ತು ಸೊಸೆಯ ಈ ನಿರ್ಧಾರದಿಂದ ಅನೇಕರಿಗೆ ನೋವಾಗಿದೆ. ಆದರೆ. ಆ ನೋವುಗಳಿಗೆ ಸದ್ಯಕ್ಕೆ ಮುಲಾಮು ಇಲ್ಲ. ಯಾಕೆಂದರೆ.. ಶ್ರೀದೇವಿ ಅವರಿಂದ ನಾನು ದೂರವಾಗಿಯೇ ಆಗ್ತೀನಿ ಎಂಬ ಹಠ ಯುವರಾಜ್ ಕುಮಾರ್ ಅವರದ್ದು. ಈ ಹಿನ್ನೆಲೆ ಇಂದು ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಅವರ ವಿಚ್ಛೇದನದ ಅರ್ಜಿ ವಿಚಾರಣೆಯನ್ನ ಇಂದು 1 ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಕಲ್ಪನಾ ಎಂ.ಎಸ್ ನಡೆಸಿದರು. ಆಗಸ್ಟ್ 23ಕ್ಕೆ ವಿಚಾರಣೆಯನ್ನು ಮುಂದೂಡಿದರು.

ಮೊದಲು ಕೌನ್ಸೆಲಿಂಗ್ ನಡೆಯಬೇಕು. ಕೌನ್ಸೆಲಿಂಗ್ ಮುಕ್ತಾಯದ ಬಳಿಕ ಇಬ್ಬರ ತೀರ್ಮಾನ ಕೇಳಬೇಕು. ಬಳಿಕ ವಿಚ್ಛೇದನದ ಆಕ್ಷೇಪಣೆಯ ವಾದ ಕೇಳೋದಾಗಿ ನ್ಯಾಯಾಧೀಶರು ಹೇಳಿದರು. ಮೊದಲು ಮಿಡಿಯೇಷನ್ ಕೌನ್ಸೆಲಿಂಗ್ ಮುಕ್ತಾಯ ಆಗಲಿ. ಬಳಿಕ ಆಕ್ಷೇಪಣೆ ಕೈಗೆತ್ತಿಕೊಳ್ಳುವುದಾಗಿ ಜಡ್ಜ್ ಹೇಳಿದರು. ಯಾಕೆಂದರೆ, ಯುವರಾಜ್ ಕುಮಾರ್ ವಿಚ್ಛೇದನ ಅರ್ಜಿಗೆ ಆಕ್ಷೇಪಣೆ ಸಲ್ಲಿಕೆ ಬಳಿಕ ಶ್ರೀದೇವಿ ಪರ ವಕೀಲೆ ದೀಪ್ತಿ ತಮ್ಮ ಆಕ್ಷೇಪಣೆ ಬಗ್ಗೆ ವಾದ ಮಾಡಲು ಅವಕಾಶ ಕೋರಿದರು. ಆದರೆ ಇದಕ್ಕೆ ಜಡ್ಜ್ ಅವಕಾಶ ಸಾಧ್ಯವಿಲ್ಲ ಎಂದ ನ್ಯಾಯಾಧೀಶೆ ಕಲ್ಪನಾ ಎಂ.ಎಸ್ ವಿಚ್ಛೇದನ ಅರ್ಜಿಯ ಪ್ರಕ್ರಿಯೆ ಎಲ್ಲಾ ಮುಗಿದ ಮೇಲೆ ವಾದ ಆಲಿಸಲಾಗುತ್ತೆ. ಸುಪ್ರಿಂಕೋರ್ಟ್ ನಿರ್ದೇಶನ ಫಾಲೋ ಮಾಡಬೇಕು ಎಂದರು.
ಇನ್ನೂ ಆಗಸ್ಟ್ 23ಕ್ಕೆ ಗುರುರಾಜ್ ಕುಮಾರ್ & ಶ್ರೀದೇವಿ ಅವರಿಗೆ ಅರ್ಬಿಟ್ರೇಟರ್ ಮೂಲಕ ಕೌನ್ಸೆಲಿಂಗ್ ನಡೆಯಲಿದೆ. ಕೌನ್ಸೆಲಿಂಗ್ ವರದಿ ಆಧಾರದ ಮೇಲೆ ಮುಂದಿನ ವಿಚಾರಣೆ ನಡೆಯಲಿದೆ. ಉಳಿದಂತೆ ಅಮೆರಿಕಕ್ಕೆ ಓದಲು ತೆರಳಿದ್ದ ಶ್ರೀದೇವಿ ವಿಚ್ಛೇದನ ಅರ್ಜಿ ಸಲ್ಲಿಕೆಯಾದ ಬಳಿಕ ಭಾರತಕ್ಕೆ ಮರಳಿದ್ದು, ಕಳೆದ ಕೆಲವು ದಿನಗಳಿಂದಲೂ ಇಲ್ಲಿಯೇ ಇದ್ದಾರೆ. ಇನ್ನೂ ಇಂದು ವಿಚ್ಚೇದನದ ಅರ್ಜಿ ವಿಚಾರಣೆಗೆ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಶ್ರೀದೇವಿ, ನನಗೆ ಅಂಟಿರುವ ಕಳಂಕ ಹೋಗಲಾಡಿಸಿಕೊಳ್ಳುವವರೆಗೆ ಹೋರಾಟ ಮಾಡುತ್ತಲೇ ಇರುತ್ತೇನೆ ಎಂದಿದ್ದಾರೆ.

ಸದ್ಯಕ್ಕೆ ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಅವರ ವಿಚ್ಛೇದನದ ಅರ್ಜಿಯನ್ನು ಆಗಸ್ಟ್ 23ಕ್ಕೆ ನ್ಯಾಯಾಲಯ ಮುಂದೂಡಿದೆ. ಆಗಸ್ಟ್ 23ರವರೆಗೆ ಶ್ರೀದೇವಿ ಭೈರಪ್ಪ ಭಾರತದಲ್ಲಿಯೇ ಇರ್ತಾರಾ ಅಥವಾ ಅವರೇ ಹೇಳಿರುವಂತೆ ಇನ್ನಷ್ಟು ಕಲಿಯಲು, ಬೆಳೆಯಲು ಮತ್ತು ಎಲ್ಲಾ ಆಘಾತಗಳಿಂದ ಗುಣಮುಖರಾಗಲು ಮತ್ತೆ ಮರಳಿ ಅಮೆರಿಕಾಗೆ ತೆರಳುತ್ತಾರಾ ಅನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











