ಯುವ ಚೊಚ್ಚಲ‌ ಸಿನಿಮಾ ಟೈಟಲ್ ಅನೌನ್ಸ್ ಯಾವಾಗ? ಹರಿದಾಡುತ್ತಿರುವ ಸುದ್ದಿ ನಿಜಾನಾ?

ದೊಡ್ಮನೆಯ ಮೂರನೇ ತಲೆಮಾರಿನ ಮತ್ತೊಬ್ಬ ಕುಡಿ ಯುವರಾಜ್‌ಕುಮಾರ್ ಸ್ಯಾಂಡಲ್‌ವುಡ್‌ ಎಂಟ್ರಿಗೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಯುವ ಲಾಂಚಿಂಗ್ ಸಿನಿಮಾ ಜವಾಬ್ದಾರಿಯನ್ನು ಹೊಂಬಾಳೆ ಸಂಸ್ಥೆ ವಹಿಸಿಕೊಂಡಿದೆ. ಸಂತೋಷ್ ಆನಂದ್‌ ರಾಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ನಾಳೆ(ಮಾರ್ಚ್ 3) ಸಿನಿಮಾ ಟೈಟಲ್ ಲಾಂಚ್ ಆಗುತ್ತದೆ ಎನ್ನಲಾಗ್ತಿದೆ. ಇದೇ ಸುದ್ದಿ ಭಾರೀ ಸದ್ದು ಮಾಡ್ತಿದೆ.

ಹೌದು ಯುವರಾಜ್‌ಕುಮಾರ್ ನಟನೆಯ ಚೊಚ್ಚಲ ಸಿನಿಮಾ ಟೈಟಲ್ ಶುಕ್ರವಾರ ರಿವೀಲ್ ಆಗುತ್ತೆ ಎನ್ನಲಾಗ್ತಿದೆ. ಕುರುಬರಹಳ್ಳಿಯ ಡಾ.ರಾಜ್ ಕುಮಾರ್ ಅವರ ಪ್ರತಿಮೆ ಮುಂದೆ LED ಸ್ಕ್ರೀನ್‌ನಲ್ಲಿ ಪ್ರದರ್ಶನ ಮಾಡುವುದಾಗಿ ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ಈ ಸುದ್ದಿ ಎಷ್ಟರಮಟ್ಟಿಗೆ ನಿಜ ಎನ್ನುವ ಪ್ರಶ್ನೆ ಎದ್ದಿದೆ. ಯಾಕಂದರೆ ಇನ್ನು ಚಿತ್ರತಂಡದಿಂದ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಯಾವುದೇ ಅಪ್‌ಡೇಟ್ ಇಲ್ಲದೇ ಏಕಾಏಕಿ ಟೈಟಲ್ ಅನೌನ್ಸ್ ಮಾಡಲ್ಲ ಎನ್ನುವುದು ಕೆಲವರ ವಾದ.

Yuva rajkumar Debut movie title announcement on the way?

ದೊಡ್ಮನೆ ಅಭಿಮಾನಿಗಳು ಯುವರಾಜ್‌ಕುಮಾರ್ ಚೊಚ್ಚಲ ಸಿನಿಮಾ ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ. ಆದರೆ ಈವರೆಗೆ ಆ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇನ್ನು ಮುಹೂರ್ತದ ದಿನವೇ ಟೈಟಲ್ ಅನೌನ್ಸ್ ಮಾಡುವ ಸಾಧ್ಯತೆಯಿದೆ. ಈಗಾಗಲೇ ಸಣ್ಣ ಟೀಸರ್ ಕೂಡ ಶೂಟ್ ಮಾಡಿದ್ದಾರೆ ಎನ್ನಲಾಗ್ತಿದೆ. ಟೀಸರ್ ಜೊತೆಗೆ ಟೈಟಲ್ ಅನೌನ್ಸ್ ಮಾಡಿ ಚಿತ್ರಕ್ಕೆ ಚಾಲನೆ ಕೊಡುವ ನಿರೀಕ್ಷೆಯಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಜಾಕಿ ತಿಮ್ಮಯ್ಯ ನಿರ್ದೇಶನದ 'ಯುವ ರಣಧೀರ ಕಂಠೀರವ' ಚಿತ್ರದ ಮೂಲಕ ಯುವರಾಜ್‌ಕುಮಾರ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಬೇಕಿತ್ತು. ಚಿತ್ರದ ಶೋ ರೀಲ್‌ ಕೂಡ ಶೂಟ್ ಮಾಡಿ ರಿಲೀಸ್ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಸಿನಿಮಾ ನಿಂತು ಹೋಗಿದೆ. ಇದೀಗ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಂತೋಷ್ ಆನಂದ್‌ರಾಮ್ ನಿರ್ದೇಶನದಲ್ಲಿ ಯುವ ಚೊಚ್ಚಲ ಚಿತ್ರಕ್ಕೆ ವೇದಿಕೆ ಸಿದ್ಧವಾಗಿದೆ.

Yuva rajkumar Debut movie title announcement on the way?

ಯುವರಾಜ್‌ಕುಮಾರ್ ಅವರಲ್ಲಿ ಕೆಲವರು ಪುನೀತ್ ರಾಜ್‌ಕುಮಾರ್‌ನ ನೋಡುತ್ತಿದ್ದಾರೆ. ಹಾಗಾಗಿ ಯುವ ಚೊಚ್ಚಲ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಒಂದು ಜಬರ್ದಸ್ತ್ ಮಾಸ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮೂಲಕ ಯುವ ಬೆಳ್ಳಿಪರದೆಗೆ ಎಂಟ್ರಿ ಕೊಡುವ ಸುಳಿವು ಸಿಗುತ್ತಿದೆ. ಆ ಸಿನಿಮಾ ಟೈಟಲ್ ಏನು? ಯಾವಾಗ ಅನೌನ್ಸ್ ಆಗುತ್ತೆ? ಎನ್ನುವುದರ ಬಗ್ಗೆ ಚಿತ್ರತಂಡ ಮಾಹಿತಿ ನೀಡಬೇಕಿದೆ.

More from Filmibeat

English summary
Yuvarajkumar Debut movie title announcement on the way?. Hombale Films will launch Yuva Rajkumar with Santhosh Ananddram directorial movie. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X