Yuva Teaser: ಡಬ್ಬಿಂಗ್ ಅಖಾಡದಲ್ಲಿ 'ಯುವ': ಟೀಸರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್
ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಯುವ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ರಾಘಣ್ಣನ ಕಿರಿಮಗ ಯುವ ರಾಜ್‌ಕುಮಾರ್ ಹೀರೊ ಆಗಿ ನಟಿಸ್ತಿರೋ ಚೊಚ್ಚಲ ಸಿನಿಮಾ ಇದು. ಮೇಕಿಂಗ್ ಹಂತದಲ್ಲೇ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಸದ್ಯ ಸಿನಿಮಾ ಟೀಸರ್ ಬಗ್ಗೆ ಕ್ರೇಜಿ ನ್ಯೂಸ್ ವೈರಲ್ ಆಗ್ತಿದೆ.
ಹೊಂಬಾಳೆ ಸಂಸ್ಥೆ 'ಯುವ' ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಡಿಸೆಂಬರ್ 22ಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ 'ಸಲಾರ್' ಸಿನಿಮಾ ಆ ದಿನ ತೆರೆಗೆ ಬರ್ತಿದೆ. ಹಾಗಾಗಿ ಅನಿವಾರ್ಯವಾಗಿ 'ಯುವ' ಮುಂದೆ ಹೋಗುವಂತಾಗಿದೆ. 'ಯುವ ರಣಧೀರ ಕಂಠೀರವ' ಮೂಲಕ ಯುವ ರಾಜ್‌ಕುಮಾರ್ ಚಿತ್ರರಂಗಕ್ಕೆ ಬರಬೇಕಿತ್ತು. ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಯಿತು.

ಪುನೀತ್ ರಾಜ್‌ಕುಮಾರ್ ಜೊತೆಗೆ ಸಂತೋಷ್ ಹ್ಯಾಟ್ರಿಕ್ ಸಿನಿಮಾ ಪ್ಲ್ಯಾನ್ ಮಾಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ 'ಯುವ' ಚಿತ್ರವನ್ನು ಬಹಳ ಸೊಗಸಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಸಪ್ತಮಿ ಗೌಡ ಚಿತ್ರದಲ್ಲಿ ಯುವ ಜೋಡಿಯಾಗಿ ಮಿಂಚಿದ್ದಾರೆ. ಸಣ್ಣ ಟೀಸರ್ ಝಲರ್ ರಿಲೀಸ್ ಮಾಡಿ ಸಿನಿಮಾ ಘೋಷಣೆ ಮಾಡಿ ಮುಹೂರ್ತ ನೆರವೇರಿಸಿ ಚಾಲನೆ ಕೊಟ್ಟಿತ್ತು ಚಿತ್ರತಂಡ. ಇದೀಗ ಮತ್ತೊಂದು ಟೀಸರ್‌ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ.
ರಾಜ್ಯೋತ್ಸವ ಸಂಭ್ರಮದಲ್ಲಿ 'ಯುವ' ಟೀಸರ್ ರಿಲೀಸ್ ಆಗುವ ಸಾಧ್ಯತೆಯಿದೆ. ಸದ್ಯ ಟೀಸರ್‌ಗಾಗಿ ಯುವ ರಾಜ್‌ಕುಮಾರ್ ಡಬ್ಬಿಂಗ್ ಮಾಡಿದ್ದಾರೆ. ದಸರಾ ಸಂಭ್ರಮದಲ್ಲೇ ಟೀಸರ್ ಬರುತ್ತಾ? ಎನ್ನುವ ಅನುಮಾನವೂ ಮೂಡಿದೆ. ದಸರಾಗೆ ಮಿಸ್ ಆದ್ರು ರಾಜ್ಯೋತ್ಸವಕ್ಕೆ 'ಯುವ' ದರ್ಬಾರ್ ಕನ್ಫರ್ಮ್ ಎನ್ನಲಾಗ್ತಿದೆ. ಈಗಾಗಲೇ ಚಿತ್ರತಂಡ ಮಾತಿನ ಭಾಗದ ಚಿತ್ರೀಕರಣ ಮುಗಿಸಿದ್ದು ಸಾಂಗ್ಸ್ ಶೂಟಿಂಗ್ ಮಾತ್ರ ಬಾಕಿಯಿದೆ ಎನ್ನಲಾಗ್ತಿದೆ.
8 ದಿನಗಳ ಕಾಲ ಲಡಾಕ್, ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ 'ಯುವ' ಹಾಡುಗಳನ ಚಿತ್ರೀಕರಣ ಪ್ಲ್ಯಾನ್ ನಡೀತಿದೆ. ಮುಹೂರ್ತದ ದಿನ ಡಿಸೆಂಬರ್ 22ಕ್ಕೆ ಸಿನಿಮಾ ರಿಲೀಸ್ ಎಂದು ಹೇಳಲಾಗಿತ್ತು. ಆದರೆ ಸಿನಿಮಾ ಕೊಂಚ ತಡವಾಗಿ ತೆರೆಗೆ ಬರಲಿದೆ. ಜನವರಿ ಅಂತ್ಯಕ್ಕೆ ಅಥವಾ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.

'ಯುವ' ಚಿತ್ರದಲ್ಲಿ ಲವ್, ಆಕ್ಷನ್ ಜೊತೆಗೆ ಒಂದೊಳ್ಳೆ ಮೆಸೇಜ್ ಅನ್ನು ಸಂತೋಷ್ ಆನಂದ್ ರಾಮ್ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.


Click it and Unblock the Notifications











