ಟ್ರೆಂಡಿಂಗ್‌ನಲ್ಲಿ ಯುವ ರಾಜ್‌ಕುಮಾರ್, ಅಪ್ಪು ಅಭಿಮಾನಿಗಳ ಸಂಭ್ರಮ!

ಕನ್ನಡ ಚಿತ್ರ ರಂಗದಲ್ಲಿ ಮತ್ತೊಬ್ಬ ಸ್ಟಾರ್‌ ಎಂಟ್ರಿಗೆ ವೇದಿಕೆ ಸಜ್ಜಾಗಿದೆ. ರಾಜ್‌ಕುಮಾರ್‌ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್ ಕಿರಿಯ ಪುತ್ರ ಯುವ ರಾಜ್‌ಕುಮಾರ್ ಸಿನಿಮಾ ರಂಗಕ್ಕೆ ಭರ್ಜರಿ ಎಂಟ್ರಿ ಕೊಡ್ತಿದ್ದಾರೆ.

ಇಷ್ಟು ದಿನ ಯುವ ಮೊದಲ ಚಿತ್ರದ ಬಗ್ಗೆ ಇದ್ದ ಕುತೂಹಲಗಳಿಗೆ ಈಗ ಬ್ರೇಕ್ ಬಿದ್ದಿದೆ. ಯುವ ಮೊದಲ ಚಿತ್ರ ಯಾವುದು ಎನ್ನೋದು ಅಧಿಕೃತವಾಗಿ ಹೊರಬಿದ್ದಿದೆ. ಯುವರಾಜ್ ಮೊದಲ ಚಿತ್ರವನ್ನು ಹೊಂಬಾಳೆ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡುತ್ತಾ ಇದೆ.

ಯುವ ರಾಜ್ ಮೊದಲ ಚಿತ್ರದ ಮೊದಲ ಲುಕ್ ಕೂಡ ಈಗಾಗಲೇ ರಿಲೀಸ್ ಆಗಿದೆ. ಯುವನನ್ನು ನೋಡಿದ ಮಂದಿ ಫಸ್ಟ್‌ ಲುಕ್ ಪೋಸ್ಟರ್‌ಗೆ ಫಿದಾ ಆಗಿದ್ದಾರೆ. ಅದರಲ್ಲೂ ದೊಡ್ಮನೆ ಅಭಿಮಾನಿಗಳು ಯುವರಾಜ್‌ಕುಮಾರ್ ಎಂಟ್ರಿಯನ್ನು ಸಂಭ್ರಮಿಸುತ್ತಿದ್ದಾರೆ.

Yuva Rajkumar First Movie Is Trending, Puneeth Rajkumar Fans Celebrating It

ದೊಡ್ಮನೆ ಅಭಿಮಾನಿಗಳು ಯುವ ಫಸ್ಟ್ ಲುಕ್ ಪೋಸ್ಟರ್‌ಗೆ ಪೂಜೆ ಮಾಡ್ತಿದ್ದಾರೆ. ಕಂಠೀರವ ಸ್ಟುಡಿಯೋ ಬಳಿ ಚಿತ್ರದ ಪೋಸ್ಟರ್ ಇಟ್ಟು ಹೂವಿನ ಹಾರ ಹಾಕಿ, ಕರ್ಪೂರ, ತೆಂಗಿನ ಕಾಯಿ ಹೊಡೆದು ಪೂಜೆ ಮಾಡಿ, ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ.

ಇನ್ನು ಮತ್ತೊಂದು ಕಡೆ ಯುವ ರಾಜ್‌ಕುಮಾರ್ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಲಿಸ್ಟ್ ಸೇರಿದೆ. ಯುವ ಮೊದಲ ಲುಕ್ ಲಾಂಚ್ ಆಗುತ್ತಲೇ ವೈರಲ್ ಆಗಿದೆ. ಯುವ ಹೆಸರು ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ. ಟ್ರೆಂಡಿಂಗ್‌ನಲ್ಲಿ ಟಾಪ್‌ ಲಿಸ್ಟ್‌ನಲ್ಲಿ ಸೇರಿಕೊಂಡಿದೆ.

ಯುವರಾಜ್‌ ಕುಮಾರ್ ಮೊದಲ ಲುಕ್‌ ಪೋಸ್ಟರ್‌ನಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಿ ಸಖತ್ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಯುವರಾಜ್ ಕುಮಾರ್. ಈ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ ಇದೊಂದು ಕಾಲೇಜು ಪ್ರೇಮ ಕಥೆ ಜೊತೆಗೆ ಸ್ಪೋರ್ಟ್ಸ್ ಡ್ರಾಮ್ ಇರಲಿದೆ ಎನ್ನಲಾಗುತ್ತಿದೆ.

Yuva Rajkumar First Movie Is Trending, Puneeth Rajkumar Fans Celebrating It

ಯುವರಾಜ್ ಮೊದಲ ಚಿತ್ರದ ಬಗ್ಗೆ ಕನ್ನಡದ ಮತ್ತು ಪರಭಾಷೆಯ ಹಲವು ಸಿನಿಮಾ ತಾರೆಯರು ಮಾತನಾಡಿದ್ದಾರೆ. ಯುವರಾಜ್ ಲುಕ್ ಬಗ್ಗೆ ಮಾತನಾಡಿದ ತಾರೆಯರು ಯುವ ರಾಜ್‌ಕುಮಾರ್‌ನನ್ನು ಚಿತ್ರರಂಗಕ್ಕೆ ಸ್ವಾಗತ ಮಾಡಿದ್ದಾರೆ. ಇನ್ನು ಹಲವರು ಯುವ, ಪುನೀತ್ ರಾಜ್‌ಕುಮಾರ್ ಪ್ರತಿರೂಪ ಎನ್ನುತ್ತಿದ್ದಾರೆ.

ಹೊಂಬಾಳೆ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ. ಸದ್ಯ 'ಕೆಜಿಎಫ್ 2' ಸಿನಿಮಾದ ಯಶಸ್ಸನ್ನು ಸಂಭ್ರಮಿಸುತ್ತಿದೆ. ಹೊಂಬಾಳೆ ಫಿಲ್ಮ್ಸ್‌ 'ರಾಘವೇಂದ್ರ ಸ್ಟೋರ್ಸ್', 'ಕಾಂತಾರ' ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಇದರ ಜೊತೆಗೆ ರಕ್ಷಿತ್ ಶೆಟ್ಟಿ ನಿರ್ದೇಶನದ 'ರಿಚರ್ಡ್ ಆಂಟನಿ' ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ. ಪ್ರಭಾಸ್ ನಟಿಸುತ್ತಿರುವ 'ಸಲಾರ್' ಚಿತ್ರೀಕರಣ ನಡೆಯುತ್ತಿದೆ.

More from Filmibeat

English summary
Yuva Rajkumar First Movie Is Trending, Puneeth Rajkumar Fans Celebrating It,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X