ದೊಡ್ಡದಾಗಿ ಸಿಗ್ನಲ್ ಕೊಟ್ಟ ಯುವ ರಾಜ್‌ಕುಮಾರ್; ಫ್ಯಾನ್ಸ್ ಹಬ್ಬ ಮಾಡೋಕೆ ರೆಡಿನಾ?

ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ ಈಗಾಗಲೇ ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಪ್ರಯತ್ನದಲ್ಲೇ ಸಿಕ್ಸರ್ ಬಾರಿಸಿ ಸಿನಿರಸಿಕರ ಮನಗೆದ್ದಿದ್ದಾರೆ. ರಾಘಣ್ಣನ ಕಿರಿಮಗನ ಡ್ಯಾನ್ಸ್, ಸ್ಟಂಟ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು.

ಯುವ ರಾಜ್‌ಕುಮಾರ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಕಳೆದೆರಡು ದಿನಗಳಿಂದ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ. ಸಂದರ್ಶನದವೊಂದರಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಈ ಬಗ್ಗೆ ಮಾತನಾಡಿದ್ದಾರೆ. ಯುವ ಜೊತೆ ನಮ್ಮ ಬ್ಯಾನರ್‌ನಲ್ಲಿ ಒಂದು ಸಿನಿಮಾ ಮಾಡುವ ತಯಾರಿ ನಡೀತಿದೆ. ಅದಕ್ಕಾಗಿ ಕಥೆಗಳನ್ನು ಕೇಳುತ್ತಿದ್ದೇನೆ, ಒಂದು ಕರ್ಮಷಿಯಲ್ ಸಿನಿಮಾ ಪ್ಲ್ಯಾನ್ ಮಾಡ್ತಿದ್ದೀವಿ ಎಂದಿದ್ದಾರೆ.

Yuva Rajkumar gives update about his next film

ಇದೀಗ ಯುವ-02 ಬಗ್ಗೆ ಶೀಘ್ರದಲ್ಲೇ ಅಪ್‌ಡೇಟ್ ಬರುತ್ತೆ ಎಂದು ಸ್ವತಃ ಯುವ ರಾಜ್‌ಕುಮಾರ್ ಪೋಸ್ಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಾಕಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಆದಷ್ಟು ಬೇಗ ಸಿನಿಮಾ ಅನೌನ್ಸ್ ಮಾಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಖಡಕ್ ಲುಕ್‌ ಫೋಟೊ ಜೊತೆಗೆ ಯುವ ಮುಂದಿನ ಸಿನಿಮಾ ಬಗ್ಗೆ ಸುಳಿವು ಕೊಟ್ಟಿದ್ದಾರೆ.

'ಯುವ ರಣಧೀರ ಕಂಠೀರವ' ಚಿತ್ರದಲ್ಲಿ ಮೊದಲಿಗೆ ಯುವ ರಾಜ್‌ಕುಮಾರ್ ನಟಿಸಬೇಕಿತ್ತು. ಸಣ್ಣ ಟೀಸರ್ ಸಹ ಶೂಟ್ ಮಾಡಲಾಗಿತ್ತು. ಆದರೆ ಪುನೀತ್ ರಾಜ್‌ಕುಮಾರ್ ಅಗಲಿಕೆ ಬಳಿಕ ಆ ಸಿನಿಮಾ ನಿಂತು ಹೋಗಿತ್ತು. ಭಾರೀ ಬಜೆಟ್ ಸಿನಿಮಾ ಆಗಿದ್ದರಿಂದ ನಿರ್ಮಾಪಕರು ಯಾರು ಸಿಗಲಿಲ್ಲ. ಹಾಗಾಗಿ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ 'ಯುವ' ಸಿನಿಮಾ ಮೂಡಿ ಬಂದಿತ್ತು.

ಆಕ್ಷನ್ ಎಂಟರ್‌ಟೈನರ್ 'ಯುವ' ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಿದ್ದರು. ಸಪ್ತಮಿ ಗೌಡ ನಾಯಕಿಯಾಗಿ ಮಿಂಚಿದ್ದರು. ಅಚ್ಯುತ್‌ ಕುಮಾರ್, ಸುಧಾರಾಣಿ, ಗೋಪಾಲಕೃಷ್ಣ ದೇಶಪಾಂಡೆ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದರು. ಇಂಜಿನಿಯರಿಂಗ್ ಕಾಲೇಜ್ ಸ್ಟೂಡೆಂಟ್, ಡೆಲಿವರಿ ಬಾಯ್, ರೆಸ್ಲರ್ ಹೀಗೆ ಮೂರು ಶೇಡ್‌ಗಳಿದ್ದ ಪಾತ್ರದಲ್ಲಿ ಯುವ ರಾಜ್‌ಕುಮಾರ್ ಅಬ್ಬರಿಸಿದ್ದರು.

Yuva Rajkumar gives update about his next film

ಫ್ಯಾಮಿಲಿ ಸಬ್ಜೆಕ್ಟ್‌ಗೆ ಕಮರ್ಷಿಯಲ್ ಎಲಿಮೆಂಟ್ಸ್ ಸೇರಿಸಿ 'ಯುವ' ಸಿನಿಮಾ ತೆರೆಗೆ ತರಲಾಗಿತ್ತು. ಚಿತ್ರದ ಡೈಲಾಗ್ಸ್ ಕೂಡ ಸಖತ್ ಸದ್ದು ಮಾಡಿತ್ತು. ಪ್ರೇಕ್ಷಕರಿಂದ ಒಳ್ಳೆ ಪ್ರತಿಕ್ರಿಯೆ ಸಿಕ್ಕರೂ ದೊಡ್ಡಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ. ಆದರೆ 'ಯುವ'ಗೆ ಒಳ್ಳೆ ಎಂಟ್ರಿ ಸಿಕ್ಕಂತಾಗಿತ್ತು. ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಯುವ ಮುಂದಿನ ಸಿನಿಮಾ ಎನ್ನುವ ಮಾತುಗಳು ಬಹಳ ಹಿಂದೆಯೇ ಕೇಳಿಬಂದಿತ್ತು.

'ಯುವ' ಸಕ್ಸಸ್ ಬೆನ್ನಲ್ಲೇ ಒಂದಷ್ಟು ನಿರ್ಮಾಪಕರು ಅಣ್ಣಾವ್ರ ಮೊಮ್ಮಗನ ಜೊತೆ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ. ನರ್ತನ್ ನಿರ್ದೇಶನದಲ್ಲಿ ಯುವ ರಾಜ್‌ಕುಮಾರ್ ನಟಿಸುತ್ತಾರೆ ಎಂದು ಗುಲ್ಲಾಗಿತ್ತು. ತಮ್ಮ ಬ್ಯಾನರ್‌ನಲ್ಲಿ ಯುವ ನಟನೆಯ ಚಿತ್ರ ನಿರ್ಮಿಸುವ ಬಗ್ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪ್ರತಿಕ್ರಿಯಿಸಿದ್ದರು. ಆದರೆ ಯಾವಾಗ ಎನ್ನುವುದು ಗೊತ್ತಿರಲಿಲ್ಲ. 2ನೇ ಚಿತ್ರವೇ ಪಿಆರ್‌ಕೆ ಬ್ಯಾನರ್‌ನಲ್ಲಿ ಬರೋದು ಬಹುತೇಕ ಖಚಿತ ಎನ್ನುವಂತಾಗಿದೆ. ದಸರಾ ಸಂಭ್ರಮದಲ್ಲಿ ಸಿನಿಮಾ ಘೋಷಣೆ ಆಗುವ ನಿರೀಕ್ಷೆಯಿದೆ.

ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಹೊಸದಾಗಿ ಯಾವುದೇ ಸಿನಿಮಾ ಘೋಷಣೆ ಆಗಿಲ್ಲ. ಪುನೀತ್ ರಾಜ್‌ಕುಮಾರ್ ಕಥೆ ಕೇಳಿ ಒಪ್ಪಿ ಚಿತ್ರೀಕರಣ ಆರಂಭಿಸಿದ ಚಿತ್ರಗಳಷ್ಟೆ ಇತ್ತೀಚೆಗೆ ತೆರೆಗೆ ಬಂದಿವೆ. ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೊಸ ಸಿನಿಮಾ ಕೈಗೆತ್ತಿಕೊಳ್ಳುತ್ತಿದ್ದಾರೆ. ಮುಂದೆ ಮತ್ತಷ್ಟು ದೊಡ್ಡ ಸಿನಿಮಾಗಳನ್ನು ನಿರ್ಮಿಸುವ ಲೆಕ್ಕಾಚಾರದಲ್ಲಿದ್ದಾರೆ. 'ಯುವ' ಎರಡನೇ ಸಿನಿಮಾ ಮೂಲಕ ಅದಕ್ಕೆ ಚಾಲನೆ ಸಿಗುತ್ತಿದೆ.

More from Filmibeat

English summary
Kannada actor Yuva Rajkumar latest social media post goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X