ಲೈಟ್ಸ್.. ಕ್ಯಾಮರಾ.. ಆಕ್ಷನ್.. 'ಯುವ' ಕಣ್ಣಲ್ಲೇ ಫೈಯರು.. ಆಕ್ಷನ್ ಸೀಕ್ವೆನ್ಸ್ ಶೂಟಿಂಗ್ ಕಿಕ್‌ ಸ್ಟಾರ್ಟ್

ಡಾ. ರಾಜ್‌ಕುಮಾರ್ ಮೊಮ್ಮಗ ಯುವರಾಜ್‌ಕುಮಾರ್ ನಟನೆಯ ಚೊಚ್ಚಲ ಸಿನಿಮಾ ಚಿತ್ರೀಕರಣ ಶುರುವಾಗಿದೆ. ಈ ವಿಚಾರವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. 'ಯುವ' ಕ್ಯಾಮರಾ ಮುಂದೆ ನಿಂತಿದ್ದು ಸಂತೋಷ್ ಆನಂದ್‌ ರಾಮ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಹೊಂಬಾಳೆ ಸಂಸ್ಥೆ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ನಿರ್ಮಾಣ ಮಾಡ್ತಿದೆ. ಡಿಸೆಂಬರ್‌ 22ಕ್ಕೆ 'ಯುವ' ಥಿಯೇಟರ್‌ಗೆ ಎಂಟ್ರಿ ಕೊಡ್ತಾನೆ.

ನಗರದ ಹೆಚ್‌ಎಂಟಿ ಫ್ಯಾಕ್ಟರಿ ಕಳೆದ ಕೆಲ ದಿನಗಳಿಂದ 'ಯುವ' ಸಿನಿಮಾ ಚಿತ್ರೀಕರಣಕ್ಕಾಗಿ ಸೆಟ್ ನಿರ್ಮಾಣ ಮಾಡುವ ಕೆಲಸ ನಡೀತಿತ್ತು. ಇದೀಗ ಎಲ್ಲವೂ ಸಿದ್ಧವಾಗಿದ್ದು ಭಾನುವಾರವೇ ಫಸ್ಟ್ ಶಾಟ್ ಚಿತ್ರೀಕರಣ ಆರಂಭವಾಗಿದೆ. ಸಾಹಸ ನಿರ್ದೇಶಕ ಅರ್ಜುನ್ ಆಕ್ಷನ್ ಸೀಕ್ವೆನ್ಸ್ ಕಂಪೋಸ್ ಮಾಡ್ತಿದ್ದಾರೆ. ಆಕ್ಷನ್ ಸೀನ್ ಮೂಲಕವೇ ಸಿನಿಮಾ ಚಿತ್ರೀಕರಣ ಆರಂಭಿಸಲಾಗುತ್ತಿದೆ. ದೊಡ್ಮನೆ ಅಭಿಮಾನಿಗಳು ಬಹಳ ದಿನಗಳಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದರು. ಸುದ್ದಿ ಕೇಳಿ ಈಗ ಥ್ರಿಲ್ಲಾಗಿದ್ದಾರೆ.

Yuva Rajkumar kick starts shooting for Yuva with this First shot

ಅಪ್ಪು ರೀತಿಯಲ್ಲೇ ಸ್ಟಂಟ್ಸ್ ವಿಚಾರದಲ್ಲಿ ಯುವ ರಾಜ್‌ಕುಮಾರ್‌ಗೂ ಭಾರೀ ಆಸಕ್ತಿ ಇದೆ. 'ಯುವ' ಚಿತ್ರದಲ್ಲೂ ಆಕ್ಷನ್ ಹೈಲೆಟ್ ಆಗಿರಲಿದೆ. ಕೆಲ ದಿನಗಳ ಹಿಂದೆ ರಿಲೀಸ್ ಆಗಿದ್ದ ಟೈಟಲ್ ಟೀಸರ್‌ನಲ್ಲಿ ಇದೊಂದು ಆಕ್ಷನ್ ಎಂಟರ್‌ಟೈನರ್ ಸಿನಿಮಾ ಎನ್ನುವುದನ್ನು ಚಿತ್ರತಂಡ ಸಾರಿ ಸಾರಿ ಹೇಳಿತ್ತು. ಅಣ್ಣಾವ್ರ ಮೊಮ್ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿಯನ್ನು ಹೊಂಬಾಳೆ ಸಂಸ್ಥೆ ಹಾಗೂ ಸಂತೋಷ್ ಆನಂದ್‌ ರಾಮ್ ವಹಿಸಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಖಾಸಗಿ ಹೋಟೆಲ್‌ವೊಂದರಲ್ಲಿ ಚಿತ್ರಕ್ಕೆ ಅದ್ಧೂರಿಯಾಗಿ ಮುಹೂರ್ತ ನರೆವೇರಿಸಲಾಗಿತ್ತು. ಅಂದಹಾಗೆ ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಯುವ ರಾಜ್‌ಕುಮಾರ್‌ಗೆ ಸಾಥ್ ಕೊಟ್ಟಿದ್ದಾರೆ. 'ಯುವ' ಕಂದು ಬಣ್ಣದ ಶರ್ಟ್ ಹಾಗೂ ಜೀನ್ಸ್‌ನಲ್ಲಿ ಸ್ಟೈಲಿಶ್ ಲುಕ್‌ನಲ್ಲಿ ಕ್ಯಾಮರಾ ಮುಂದೆ ನಿಂತಿದ್ದಾರೆ. ಯುವ ಎದುರು ಕ್ಲಾಪ್‌ ಬೋರ್ಡ್ ಹಿಡಿದು ನಿರ್ದೇಶಕ ಆನಂದ್‌ ರಾಮ್ ಫೋಟೊ ಕ್ಲಿಕ್ಕಿಸಿ ಹಂಚಿಕೊಂಡಿದ್ದಾರೆ.

"ಯುವ ಚಿತ್ರೀಕರಣ ಆರಂಭ. ಲೈಟ್ಸ್.. ಕ್ಯಾಮರಾ.. ಆಕ್ಷನ್.. ಯುವ ನಿಮಗಾಗಿ ಸಿದ್ಧವಾಗ್ತಿದ್ದಾನೆ" ಅಂತ ನಿರ್ದೇಶಕರು, ಹೊಂಬಾಳೆ ಸಂಸ್ಥೆ ಬರೆದುಕೊಂಡಿದ್ದಾರೆ. ಯುವ ರಾಜ್‌ಕುಮಾರ್ ಚಿತ್ರರಂಗಕ್ಕೆ ಬರ್ತಾರೆ ಎನ್ನುವ ಮಾತುಗಳು ಕೇಳಿಬರುವುದಕ್ಕೂ ಮೊದಲಿನಿಂದಲೂ ಅವರ ಸ್ಟಂಟ್‌ಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಹಾಗಾಗಿ ಮೈ ಜುಮ್ ಎನಿಸುವ ಆಕ್ಷನ್ ಸನ್ನಿವೇಶಗಳನ್ನು ಈ ಚಿತ್ರದಲ್ಲಿ ನಿರೀಕ್ಷಿಸಬಹುದು.

Yuva Rajkumar kick starts shooting for Yuva with this First shot

ಶ್ರೀಶ ಕುದುವಳ್ಳಿ ಛಾಯಾಗ್ರಹಣ ಹಾಗೂ ಅಜನೀಶ್ ಲೋಕನಾಥ್ ಸಂಗೀತ 'ಯುವ' ಚಿತ್ರಕ್ಕಿದೆ. ಈ ಹಿಂದೆ ಪುನೀತ್ ರಾಜ್‌ಕುಮಾರ್ ಮುದ್ದು ಹೆಸರು 'ಅಪ್ಪು' ಎನ್ನುವ ಟೈಟಲ್‌ನಲ್ಲೇ ಚಿತ್ರರಂಗಕ್ಕೆ ಹೀರೊ ಆಗಿ ಎಂಟ್ರಿ ಕೊಟ್ಟಿದ್ದರು. ಇದೀಗ ಯುವ ರಾಜ್‌ಕುಮಾರ್ ಕೂಡ ತಮ್ಮದೇ ಹೆಸರಿನ ಸಿನಿಮಾ ಟೈಟಲ್‌ ಮೂಲಕ ಲಾಂಚ್ ಆಗುತ್ತಿದ್ದಾರೆ. ಈಗಾಗಲೇ ಅಣ್ಣಾವ್ರ ಮೊಮ್ಮಕ್ಕಳಾದ ವಿನಯ್ ರಾಜ್‌ಕುಮಾರ್, ಧನ್ಯಾ ರಾಮ್‌ಕುಮಾರ್, ಧೀರೇನ್ ರಾಮ್‌ಕುಮಾರ್ ಚಿತ್ರರಂಗಕ್ಕೆ ಬಂದಿದ್ದಾರೆ. ಈಗ ಯುವರಾಜ್‌ಕುಮಾರ್ ಸರದಿ.

"ಅವನನ್ನ ಹೊಡಿಯೋಕೆ ಅಂತಾನೇ ಒಂದು ಗ್ಯಾಂಗ್ ಕಾಯ್ತಾ ಇತ್ತು.. ಅವನನ್ನ ತಡಿಯೋಕಂತಾನೆ ಇನ್ನೊಂದು ಗ್ಯಾಂಗ್ ಇತ್ತು.. ಗ್ಯಾಂಗ್ ವಾರ್ ಅವ್ನು ಶುರು ಮಾಡ್ಲಿಲ್ಲ.. ಆದ್ರೆ ಮುಗಿಸ್ತಾನೆ" ಅನ್ನೋ ಟೀಸರ್‌ನಲ್ಲಿದ್ದ ಡೈಲಾಗ್ ಸಿನಿಮಾ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ. ಪುನೀತ್‌ ರಾಜ್‌ಕುಮಾರ್ ಅಭಿಮಾನಿಗಳಲ್ಲಿ ಕೆಲವರು ಯುವನಲ್ಲೇ ಅಪ್ಪು ನೋಡ್ತಿದ್ದಾರೆ. ಈಗಾಗಲೇ ಜ್ಯೂ. ಪವರ್ ಸ್ಟಾರ್ ಎಂದು ಕರೆಯುತ್ತಿದ್ದಾರೆ. ಹಾಗಾಗಿ 'ಯುವ' ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇದೆ.

More from Filmibeat

English summary
Yuva Rajkumar kick starts shooting for Yuva with this First shot. Massive set have been built at HMT Factory for action sequence Shooting. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X