ಯುವರಾಜ್‌ಕುಮಾರ್ ವಿಚ್ಛೇದನದ ಜೊತೆ ಸಪ್ತಮಿ ಗೌಡ ಹೆಸರು ತಳುಕು: ಯುವ ವಕೀಲರ ಸ್ಪಷ್ಟನೆ ಏನು?
ಸ್ಯಾಂಡಲ್‌ವುಡ್‌ನಲ್ಲಿ ವಿಚ್ಛೇದನದ ಮ್ಯಾರಥಾನ್ ನಡೆಯುತ್ತಿದೆ. ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್ ಬಳಿಕ ಈಗ ಯುವ ರಾಜ್‌ಕುಮಾರ್ ವಿಚ್ಛೇದನದ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಆದರೆ, ಪತ್ನಿ ಶ್ರೀದೇವಿ ಬೈರಪ್ಪ ರಿಪ್ಲೈ ನೋಟೀಸ್ ವೈರಲ್ ಆದ ಬಳಿಕ ಈ ಡಿವೋರ್ಸ್ ಪ್ರಕರಣ ಆರೋಪ-ಪ್ರತ್ಯಾರೋಪದಲ್ಲಿ ಮುಳುಗಿದೆ.
ಶ್ರೀದೇವಿ ಬೈರಪ್ಪ ತಮ್ಮ ವಕೀಲರ ಮೂಲಕ ರಿಪ್ಲೈ ನೋಟಿಸ್ ನೀಡಿದ್ದರು. ಇದರಲ್ಲಿ 'ಯುವ' ಜೊತೆ ನಟಿಸಿದ ಸಪ್ತಮಿ ಗೌಡ ಹೆಸರನ್ನು ಉಲ್ಲೇಖ ಮಾಡಲಾಗಿದೆ. ತಮ್ಮ ಪತಿ ಯುವ ರಾಜ್‌ಕುಮಾರ್ ತಮ್ಮ ಸಹ ನಟಿ ಸಪ್ತಮಿ ಗೌಡ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಹೀಗಾಗಿ ಇದು ಮತ್ತಷ್ಟು ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ.

ಯುವ ರಾಜ್‌ಕುಮಾರ್ ಮೇಲೆ ಶ್ರೀದೇವಿ ಬೈರಪ್ಪ ಹಲವು ಆರೋಪಗಳನ್ನು ಮಾಡಿದ್ದಾರೆ. ಮಾನಸಿಕ ಹಿಂಸೆ, ಆರ್ಥಿಕ ನಿರ್ಬಂಧ, ಸಹ ನಟಿ ಸಪ್ತಮಿ ಗೌಡ ಜೊತೆ ಸಂಬಂಧದಂತಹ ಆರೋಪಗಳನ್ನು ಮಾಡಿದ್ದಾರೆ. ಸಪ್ತಮಿಗೌಡ ಹೆಸರು ಜೋರಾಗಿ ಸುದ್ದಿಯಾಗುತ್ತಿದ್ದಂತೆ ಯುವ ರಾಜ್‌ಕುಮಾರ್ ಪರ ವಕೀಲರು ಸ್ಪಷ್ಟನೆ ನೀಡಲು ಮುಂದೆ ಬಂದಿದ್ದರು.
ಶ್ರೀದೇವಿ ಬೈರಪ್ಪ ಮಾಡಿರುವ ಆರೋಪಗಳಿಗೆ ಯುವ ಪರ ವಕೀಲರಾಗಿರುವ ಸಿರಿಲ್ ಪ್ರಸಾದ್ ಕ್ಲಾರಿಟಿ ಕೊಟ್ಟಿದ್ದಾರೆ. ಯುವ ರಾಜ್‌ಕುಮಾರ್‌ಗೂ, ನಟಿ ಸಪ್ತಮಿಗೌಡಗೂ ಯಾವುದೇ ಸಂಬಂಧವೂ ಇಲ್ಲ. 'ಯುವ' ಸಿನಿಮಾ ಶೂಟಿಂಗ್ ವೇಳೆ ಇಬ್ಬರ ಜೊತೆಗಿದ್ದ ಫೋಟೊಗಳನ್ನು ತೆಗೆದುಕೊಂಡು ಶ್ರೀದೇವಿ ಸುಳ್ಳು ಆರೋಪಗಳನ್ನು ಮಾಡಿದ್ದಾರೆಂದು ವಕೀಲರಾದ ಸಿರಿಲ್ ಪ್ರಸಾದ್ ಹೇಳಿದ್ದಾರೆ.
ಇದೇ ವೇಳೆ ಶ್ರೀದೇವಿ ಬೈರಪ್ಪ ಮಾಡಿದ ಆರೋಪಗಳ ಪಟ್ಟಿಯಲ್ಲಿ ಯುವ ರಾಜ್‌ಕುಮಾರ್‌ಗೆ ಲೈಂಗಿಕತೆಯಲ್ಲಿ ಸಮಸ್ಯೆಯಿದೆ ಎಂದಿದ್ದಾರೆ. ಅವರೇ ಬೇರೆ ನಟಿಯೊಂದಿಗೆ ಸಂಬಂಧ ಇದೆ ಎಂದಿದ್ದಾರೆ. ಒಂದು ವೇಳೆ ಲೈಂಗಿಕತೆಯಲ್ಲಿ ಸಮಸ್ಯೆ ಇದ್ದಿದ್ದರೆ, ಬೇರೊಂದು ಸಂಬಂಧ ಹೊಂದಲು ಹೇಗೆ ಸಾಧ್ಯ? ಎಂದು ಯುವ ಪರ ವಕೀಲ ಸಿರಿಲ್ ಪ್ರಸಾದ್ ಹೇಳಿದ್ದಾರೆ.
ಇದೇ ವೇಳೆ ಯುವ ಪರ ವಕೀಲರು ಶ್ರೀದೇವಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಶ್ರೀದೇವಿಯವರಿಗೆ ಅಕ್ರಮ ಸಂಬಂಧವಿದೆ. ರಾಧಯ್ಯ ಎಂಬುವವರ ಜೊತೆ ಸಂಬಂಧವಿದೆ ಎಂದು ಶ್ರೀದೇವಿ ಬೈರಪ್ಪ ಮೇಲೆ ಸಿರಿಲ್ ಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.


Click it and Unblock the Notifications











