Yuva Title Teaser: ಅದೇ ಕಣ್ಣು ಎಂದ ರಾಘಣ್ಣ: ಅದೇ ನಂಬರ್ ಎಂದು ಹುಡುಕಿದ ಫ್ಯಾನ್ಸ್
ಯುವ ರಾಜ್‌ಕುಮಾರ್ ನಟನೆಯ ಚೊಚ್ಚಲ ಸಿನಿಮಾ 'ಯುವ' ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಂತೋಷ್ ಆನಂದ್ ರಾಮ್ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಟೀಸರ್ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. ಇನ್ನು ಟೀಸರ್ ಲಕ್ಷ ಲಕ್ಷ ವೀವ್ಸ್ ಪಡೆದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಅಣ್ಣಾವ್ರ ಮೊಮ್ಮಗ ರಾಘವೇಂದ್ರ ರಾಜ್‌ಕುಮಾರ್ ಕಿರಿಮಗ ಯುವ ರಾಜ್‌ಕುಮಾರ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡ್ತಿದ್ದಾರೆ. ಮೊದಲ ಚಿತ್ರಕ್ಕೆ 'ಯುವ' ಎನ್ನುವ ಟೈಟಲ್ ಫಿಕ್ಸ್ ಆಗಿದೆ. ಸಿನಿಮಾ ಮುಹೂರ್ತ ಕೂಡ ನೆರವೇರಿದೆ. ಡಿಸೆಂಬರ್ 22ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿದೆ. ಪ್ರಕಾಶ್ ರಾಜ್ ವಾಯ್ಸ್ ಜೊತೆ ಶುರುವಾಗುವ ಟೀಸರ್ ಯುವ ಸಣ್ಣ ಡೈಲಾಗ್ ಜೊತೆ ಕಂಪ್ಲೀಟ್ ಆಗುತ್ತೆ.

'ಯುವ' ಫಸ್ಟ್ ಲುಕ್‌ನಲ್ಲಿ ಯುವ ರಾಜ್‌ಕುಮಾರ್ ಲುಕ್ ನೋಡಿದ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಕೆಲವರು ಪುನೀತ್ ರಾಜ್‌ಕುಮಾರ್‌ಗೆ ಹೋಲಿಸಿ ಪೋಸ್ಟ್‌ಗಳನ್ನು ಮಾಡ್ತಿದ್ದಾರೆ. 'ಯುವ' ಕಣ್ಣಲ್ಲಿರೋ ಇಂಟೆನ್‌ಸಿಟಿ ಅಪ್ಪು ಕಣ್ಣಲ್ಲಿದ್ದ ಇಂಟೆನ್‌ಸಿಟಿ ಒಂದೇ ಎನ್ನುತ್ತಿದ್ದಾರೆ. ಇನ್ನು ರಾಘವೇಂದ್ರ ರಾಜ್‌ಕುಮಾರ್ 'ಬೇಡರ ಕಣ್ಣಪ್ಪ' ಚಿತ್ರದ ಅಣ್ಣಾವ್ರ ಫೋಟೊ ಜೊತೆ 'ಯುವ' ಫಸ್ಟ್ ಲುಕ್ ಪೋಸ್ಟರ್ ಕೊಲಾಜ್ ಮಾಡಿ ಶೇರ್ ಮಾಡಿದ್ದಾರೆ. ಅದನ್ನು ನೋಡಿದವರು 'ಅದೇ ಕಣ್ಣು' ಎಂದು ಕಾಮೆಂಟ್ ಮಾಡುತ್ತಿದ್ದಾರೆ.
20 ವರ್ಷಗಳ ಹಿಂದೆ ಪುನೀತ್ ರಾಜ್‌ಕುಮಾರ್ 'ಅಪ್ಪು' ಆಗಿ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದರು. ಮನೆಯಲ್ಲಿ ಎಲ್ಲರೂ ಪುನೀತ್ ರಾಜ್‌ಕುಮಾರ್ ಅವರನ್ನು ಅಪ್ಪು ಎಂದೇ ಕರೆಯುತ್ತಿದ್ದರು. ಹಾಗಾಗಿ ತಮ್ಮದೇ ಹೆಸರಿನ ಟೈಟಲ್ ಸಿನಿಮಾದಲ್ಲಿ ನಟಿಸಿ ಪುನೀತ್ ಗೆದ್ದರು. ಈಗ ಯುವ ಕೂಡ ತಮ್ಮದೇ ಹೆಸರಿನ ಟೈಟಲ್ ಸಿನಿಮಾದಲ್ಲಿ ನಟಿಸೋ ಮೂಲಕ ಚಿತ್ರರಂಗಕ್ಕೆ ಬರ್ತಿದ್ದಾರೆ. ಅವರಿಗೆ ಸಕ್ಸಸ್ ಗ್ಯಾರೆಂಟಿ ಎಂದು ಅಭಿಮಾನಿಗಳು ಹೇಳ್ತಿದ್ದಾರೆ.
ಒಟ್ಟಾರೆ ಯುವ ಫಸ್ಟ್ ಲುಕ್ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಭಿಮಾನಿಗಳ ಫೇಸ್‌ಬುಕ್, ಇನ್‌ಸ್ಟಾ, ಟ್ವಿಟ್ಟರ್, ವಾಟ್ಸಪ್ ಸ್ಟೇಟಸ್‌ಗಳಲ್ಲಿ ರಾರಾಜಿಸುತ್ತಿದೆ. ಚಿತ್ರರಂಗಕ್ಕೆ ಯುವ ರಾಜ್‌ಕುಮಾರ್‌ಗೆ ಭವ್ಯ ಸ್ವಾಗತವೇ ಸಿಗುತ್ತಿದೆ. ಇನ್ನು ಪೋಸ್ಟರ್‌ನಲ್ಲಿ ಯುವ ಜಾವಾ ಬೈಕ್ ಏರಿ ದರ್ಶನ ಕೊಟ್ಟಿದ್ದಾರೆ. ಆ ಬೈಕ್ ನಂಬರ್(M 144) ಹಾಗೂ ಪುನೀತ್ ರಾಜ್‌ಕುಮಾರ್ ಬಳಸುತ್ತಿದ್ದ ಕಾರುಗಳ ನಂಬರ್ ಸೇಮ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ 'ಯುವ' ಚಿತ್ರಕ್ಕಿದೆ. ಒಟ್ನಲ್ಲಿ ಟೈಟಲ್ ಟೀಸರ್‌ನಿಂದಲೇ ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ ಟಾಕ್ ಆಫ್ ದಿ ಟೌನ್ ಆಗಿದೆ. ಇನ್ನು ಸಿನಿಮಾ ಮುಹೂರ್ತ ಸಮಾರಂಭದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಜಗ್ಗೇಶ್, ರಿಷಬ್ ಶೆಟ್ಟಿ ಭಾಗಿಯಾಗಿ 'ಯುವ'ಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.
'ಯುವ ರಣಧೀರ ಕಂಠೀರವ' ಸಿನಿಮಾ ಮೂಲಕ ಯುವ ರಾಜ್‌ಕುಮಾರ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಬೇಕಿತ್ತು. ಸಣ್ಣ ಟೀಸರ್ ಕೂಡ ರಿಲೀಸ್ ಆಗಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಗಿದೆ. ಹೊಂಬಾಳೆ ಸಂಸ್ಥೆ ಈಗ ಯುವ ಸಿನಿಮಾ ಜವಾಬ್ದಾರಿ ವಹಿಸಿಕೊಂಡಿದೆ. ಟೀಸರ್ ನೋಡ್ತಿದ್ರೆ, ಇದೊಂದು ಪಕ್ಕಾ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಎನ್ನುವುದು ಗೊತ್ತಾಗ್ತಿದೆ. ಯುವ ಲುಕ್ಕು, ಖದರ್‌ಗೆ ತಕ್ಕಂತೆ ಆನಂದ್‌ರಾಮ್ ಸಿನಿಮಾ ಮಾಡ್ತಿದ್ದಾರೆ.


Click it and Unblock the Notifications











