For Quick Alerts
  ALLOW NOTIFICATIONS  
  For Daily Alerts

  ಯುವರಾಜ್ ಕುಮಾರ್ ಚಿತ್ರದ ಶೂಟಿಂಗ್‌ಗೆ ದಿನಾಂಕ ನಿಗದಿ!

  |

  ರಾಜ್‌ಕುಮಾರ್‌ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್ ಕಿರಿಯ ಪುತ್ರ ಯುವ ರಾಜ್‌ಕುಮಾರ್ ಸಿನಿಮಾ ರಂಗಕ್ಕೆ ಭರ್ಜರಿ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದ್ದಾರೆ. ಈಗಾಗಲೆ ಅವರ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳು ರಿವೀಲ್ ಆಗಿವೆ. ಈ ಬಗ್ಗೆ ಮತ್ತೊಂದು ಕುತೂಹಲಕಾರಿ ಸುದ್ದಿ ಹೊರ ಬಿದ್ದಿದೆ.

  ಯುವರಾಜ್ ಕುಮಾರ್ ಮೊದಲ ಸಿನಿಮಾ 'ಯುವ ರಣಧೀರ ಕಂಠೀರವ' ಎನ್ನುವ ಟೈಟಲ್ ಅಡಿಯಲ್ಲಿ ಲಾಂಚ್ ಆಗಿದೆ. ಆದರೆ ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ. ಈ ಚಿತ್ರದ ನಿಂತು ಹೋಗಿದ್ದು, ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಯುವ ರಾಜ್ ಕುಮಾರ್ ನಟಿಸುತ್ತಿದ್ದಾರೆ. ಚಿತ್ರದ ಮೂಲಕ ಲಾಂಚ್ ಆಗಲು ತಯಾರಿ ನಡೆಸಿದ್ದಾರೆ.

  ಯುವ ರಾಜ್‌ಕುಮಾರ್, ಶ್ರೀದೇವಿ ಮದುವೆಗೆ 3ನೇ ವರ್ಷ: ಪುನೀತ್ ಸಮಾಧಿಗೆ ದಂಪತಿ ಭೇಟಿ!ಯುವ ರಾಜ್‌ಕುಮಾರ್, ಶ್ರೀದೇವಿ ಮದುವೆಗೆ 3ನೇ ವರ್ಷ: ಪುನೀತ್ ಸಮಾಧಿಗೆ ದಂಪತಿ ಭೇಟಿ!

  ಯುವರಾಜ್ ಕುಮಾರ್ ಮುಂದಿನ ಚಿತ್ರಕ್ಕೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಲಿದ್ದಾರೆ ಎನ್ನುವ ಸುದ್ದಿ ಈಗಾಗಲೆ ಹೊರ ಬಂದಿದೆ. ಈ ಚಿತ್ರದ ಫಸ್ಟ್ ಲುಕ್ ಕೂಡ ರಿವೀಲ್ ಆಗಿದ್ದು ಚಿತ್ರಕ್ಕೆ ಹೊಂಬಾಳೆ ಸಂಸ್ಥೆ ಬಂಡವಾಳ ಹೂಡುತ್ತಿದೆ.

  ಕ್ರೇಜ್ ಹುಟ್ಟಿಸಿದೆ ಯುವ ಸಿನಿಮಾ!

  ಕ್ರೇಜ್ ಹುಟ್ಟಿಸಿದೆ ಯುವ ಸಿನಿಮಾ!

  ಯುವರಾಜ್ ಕುಮಾರ್ ಸಿನಿಮಾ ಬರ್ತಿದೆ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ ಎಂದಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿ ಕೊಂಡಿತ್ತು. ಅದರಲ್ಲೂ ಯುವರಾಜ್ ಮೊದಲ ಲುಕ್ ಕೂಡ ಸಿನಿಮಾ ಬಗ್ಗೆ ಹೆಚ್ಚಿನ ಕುತೂಹಲ ಮೂಡಿಸಿತ್ತು. ಯುವ ರಾಜ್ ಕುಮಾರ್ ಫಸ್ಟ್ ಲುಕ್ ನೋಡಿದವರೆಲ್ಲಾ ಸೂಪರ್ ಎಂದಿದ್ದಾರೆ. ರಗಡ್ ಲುಕ್‌ನಲ್ಲಿ ಯುವರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ.

  ಯುವರಾಜ್ ಕುಮಾರ್‌ಗೆ ಡಾಲಿ ಧನಂಜಯ್ ವಿಲನ್?ಯುವರಾಜ್ ಕುಮಾರ್‌ಗೆ ಡಾಲಿ ಧನಂಜಯ್ ವಿಲನ್?

  ಅಕ್ಟೋಬರ್‌ನಿಂದ ಶೂಟಿಂಗ್ ಆರಂಭ!

  ಅಕ್ಟೋಬರ್‌ನಿಂದ ಶೂಟಿಂಗ್ ಆರಂಭ!

  ಈ ಚಿತ್ರಕ್ಕಾಗಿ ಕಾಯುತ್ತಾ ಇರುವ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿ ಒಂದು ಸಿಕ್ಕಿದೆ. ಚಿತ್ರದ ಫಸ್ಟ್ ಲುಕ್ ಬಟ್ಟರೆ ಮತ್ಯಾವ ಸಿನಿಮಾ ಅಪ್ಡೇಟ್ ಕೂಡ ನೀಡಿರಲಿಲ್ಲ ಚಿತ್ರತಂಡ. ಈಗ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಯುವ ಮೊದಲ ಚಿತ್ರದ ಶೂಟಿಂಗ್ ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ. ಎಂದು ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರ ಬಂದಿದೆ.

  ಸಂತೋಷ್‌ ಆನಂದ್‌ರಾಮ್ ಟ್ವೀಟ್!

  ಚಿತ್ರದ ಶೂಟಿಂಗ್ ಆರಂಭದ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು "ಅಭಿಮಾನಿಗಳು ಯುವರಾಜ್ ಕುಮಾರ್ ಚಿತ್ರದ ಅಪ್ಡೇಟ್ ಕೇಳುತ್ತಿದ್ದರು. ಎಲ್ಲವೂ ಅತೀ ಶೀಘ್ರದಲ್ಲಿ ಅನಾವರಣಗೊಳ್ಳಲಿದೆ. ಅಕ್ಟೋಬರ್‌ನಿಂದ ಶೂಟಿಂಗ್ ಆರಂಭಗೊಳ್ಳಲಿದೆ. ಕಾಯುತ್ತಿರಿ" ಎಂದು ಬರೆದುಕೊಂಡಿದ್ದಾರೆ. ಹಾಗಾಗಿ ಈ ಸಿನಿಮಾ 2023ರಲ್ಲೇ ರಿಲೀಸ್ ಆಗುವುದು ಎನ್ನುವುದು ಮಾತ್ರ ಖಚಿತವಾಗಿದೆ.

  ಟ್ರೆಂಡಿಂಗ್‌ನಲ್ಲಿ ಯುವ ರಾಜ್‌ಕುಮಾರ್, ಅಪ್ಪು ಅಭಿಮಾನಿಗಳ ಸಂಭ್ರಮ!ಟ್ರೆಂಡಿಂಗ್‌ನಲ್ಲಿ ಯುವ ರಾಜ್‌ಕುಮಾರ್, ಅಪ್ಪು ಅಭಿಮಾನಿಗಳ ಸಂಭ್ರಮ!

  ಹೇಗಿರಲಿದೆ ಯುವ ಮೊದಲ ಸಿನಿಮಾ!

  ಹೇಗಿರಲಿದೆ ಯುವ ಮೊದಲ ಸಿನಿಮಾ!

  ನಿರ್ದೇಶಕ ಸಂತೋಷ್ ಆನಂದ್ ರಾಮ್ ಪುನೀತ್ ರಾಜ್‌ಕುಮಾರ್‌ಗಾಗಿ ಕಥೆ ಒಂದನ್ನು ಮಾಡಿದ್ದರು. 'ಜೇಮ್ಸ್' ಚಿತ್ರದ ಬಳಿಕ ಸಂತೋಷ್ ಆನಂದ್ ರಾಮ್ ಬರೆದ ಈ ಕಥೆಯಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯಿಸಬೇಕಿತ್ತು. ಆದರೆ ದುರಾದೃಷ್ಟವಶಾತ್ ಅಪ್ಪು ಇಲ್ಲವಾಗಿದ್ದಾರೆ. ಈಗ ಇದೇ ಕಥೆಯನ್ನು ಯುವರಾಜ್ ಕುಮಾರ್‌ಗಾಗಿ ಸ್ವಲ್ಪ ಬದಲಾಯಿಸಿದ್ದಾರಂತೆ ನಿರ್ದೇಶ ಸಂತೋಷ್ ಆನಂದ್ ರಾಮ್. ಈ ಕಥೆ ಕ್ರೀಡೆ ಆಧಾರಿತ ಕಥೆಯಾಗಿದ್ದು, ಯುವರಾಜ್ ಲುಕ್ ಮೇಲೆ, ಪಾತ್ರದ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ.

  English summary
  Yuva Rajkumar New Movie Shooting Start From October, Director Santhosh Ananddram Confirms,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X