'ಯುವ' ಸ್ಟೋರಿಲೈನ್ ಲೀಕ್; ತನ್ನವರಿಗಾಗಿ ಯುವರಾಜ್‌ಕುಮಾರ್ ಯುದ್ಧಕಾಂಡ

ಯುವ ರಾಜ್‌ಕುಮಾರ್ ನಟನೆಯ 'ಯುವ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರದ ಗಾನಬಜಾನಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್ ಫಸ್ಟ್ ವೀಕ್ ಟೈಟಲ್ ಸಾಂಗ್ ರಿಲೀಸ್ ಪ್ಲ್ಯಾನ್ ನಡೀತಿದೆ. ಇತ್ತೀಚೆಗೆ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ವರ್ಕ್‌ನಲ್ಲಿ ಬ್ಯುಸಿಯಾಗಿದೆ.

ಸಣ್ಣ ಟೀಸರ್‌ನಿಂದಲೇ ಸಿನಿಮಾ ಭಾರೀ ಕುತೂಹಲ ಮೂಡಿಸಿರುವುದು ಸುಳ್ಳಲ್ಲ. ಸಂತೋಷ್ ಆನಂದ್ ರಾಮ್ ನಿರ್ದೇಶನದ 'ಯುವ' ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡಿದೆ. ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. ಸಪ್ತಮಿಗೌಡ ನಾಯಕಿಯಾಗಿ ಮಿಂಚಿದ್ದಾರೆ.

Yuva rajkumar Starrer Yuva film oneline story revealed

ಕಳೆದ ವರ್ಷ ಸಣ್ಣ ಟೀಸರ್ ರಿಲೀಸ್ ಮಾಡಿ ಖಾಸಗಿ ಹೋಟೆಲ್‌ನಲ್ಲಿ 'ಯುವ' ಚಿತ್ರಕ್ಕೆ ಚಾಲನೆ ಕೊಡಲಾಗಿತ್ತು. ಹೆಚ್‌ಎಂಟಿ ಫ್ಯಾಕ್ಟರಿಯಲ್ಲಿ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಶೂಟಿಂಗ್‌ ಸೆಟ್‌ಗೆ ನಟ ದರ್ಶನ್, ಶಿವರಾಜ್‌ಕುಮಾರ್ ಭೇಟಿ ನೀಡಿದ್ದ ವಿಡಿಯೋಗಳು ವೈರಲ್ ಆಗಿತ್ತು. ಇನ್ನು ಸಿನಿಮಾ ಕಥೆ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡದೇ ಚಿತ್ರೀಕರಣ ಮಾಡಿ ಮುಗಿಸಲಾಗಿದೆ.

'ಯುವ' ಚಿತ್ರದ ಮೂಲಕ ರಾಘಣ್ಣನ ಕಿರಿಮಗ ಯುವ ರಾಜ್‌ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಪೋಸ್ಟರ್, ಟೀಸರ್ ನೋಡುತ್ತಿದ್ದರೆ ರಗಡ್ ಹೀರೊ ಆಗಿ ಅಣ್ಣಾವ್ರ ಮೊಮ್ಮಗ ಚಿತ್ರರಂಗಕ್ಕೆ ಬರುತ್ತಿರುವುದು ಗೊತ್ತಾಗುತ್ತಿದೆ. ಆದರೆ ಸಿನಿಮಾ ಕಥೆ ಏನು ಎನ್ನುವುದರ ಬಗ್ಗೆ ಚಿತ್ರತಂಡ ಈವರೆಗೆ ಮಾತನಾಡಿಲ್ಲ. ಯಾವುದೇ ಸುದ್ದಿಗೋಷ್ಠಿ ಕೂಡ ನಡೆಸಿಲ್ಲ.

ಯುವರಾಜ್‌ಕುಮಾರ್, ಸಪ್ತಮಿ ಗೌಡ ಬಿಟ್ಟರೆ 'ಯುವ' ಚಿತ್ರದ ಪಾತ್ರವರ್ಗದ ಬಗ್ಗೆಯೂ ಹೆಚ್ಚಿನ ಮಾಹಿತಿ ಇಲ್ಲ. ಸದ್ಯ ಸಿನಿಮಾ ರಿಲೀಸ್ ಡೇಟ್ ಹತ್ತಿರವಾಗುತ್ತಿದೆ. ಸಿನಿಮಾ ಪ್ರಚಾರಕ್ಕೆ ಚಿತ್ರತಂಡ ನಿಧಾನವಾಗಿ ಚಾಲನೆ ಕೊಡುತ್ತಿದೆ. ಅಂದಹಾಗೆ 'ಯುವ' ಚಿತ್ರದ ಬುಕ್ ಮೈ ಶೋ ಖಾತೆ ಇದ್ದು , ಅಭಿಮಾನಿಗಳು ಇಂಟರೆಸ್ಟಡ್ ಬಟನ್ ಕ್ಲಿಕ್ ಮಾಡುತ್ತಿದ್ದಾರೆ. ಸದ್ಯ ಬುಕ್ ಮೈ ಶೋ ಖಾತೆಯಲ್ಲಿ ಚಿತ್ರದ ಒನ್‌ಲೈನ್ ಸ್ಟೋರಿ ಅಪ್‌ಡೇಟ್ ಮಾಡಿದ್ದಾರೆ.

Yuva rajkumar Starrer Yuva film oneline story revealed

ಹೌದು. ಸಾಮಾನ್ಯವಾಗಿ ಪ್ರೇಕ್ಷಕರಿಗೆ ಸಿನಿಮಾ ಬಗ್ಗೆ ಕೊಂಚಮಟ್ಟಿಗೆ ಮಾಹಿತಿ ನೀಡಲು ಕೆಲವೊಂದು ಮಾಹಿತಿಯನ್ನು ಅಪ್‌ಡೇಟ್ ಮಾಡಲಾಗುತ್ತಿದೆ. 'ಯುವ' ಸಿನಿಮಾ ಬಿಡುಗಡೆಗೆ ಹೆಚ್ಚು ಕಮ್ಮಿ ಇನ್ನೊಂದು ತಿಂಗಳು ಮಾತ್ರ ಬಾಕಿಯಿದ್ದು ಸದ್ಯ ಸ್ಟೋರಿಲೈನ್ ರಿವೀಲ್ ಆಗಿದೆ.

ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಗ್ಯಾಂಗ್‌ವಾರ್ ದೊಡ್ಡ ಗಲಾಟೆಯಾಗು ಬದಲಾಗುತ್ತದೆ. ಈ ವೇಳೆ ಯುವ ತನ್ನ ಹಾಸ್ಟೆಲ್ ಹುಡುಗರ ಬೆಂಬಲಕ್ಕೆ ನಿಲ್ಲುತ್ತಾನೆ. ಆತ ತನ್ನ ಸ್ನೇಹಿತರನ್ನು ರಕ್ಷಿಸಲು ಹಾಗೂ ತನ್ನವರ ಪರವಾಗಿ ನಿಲ್ಲಲು ಸಾಧ್ಯವಾಗುತ್ತಾ? ಎನ್ನುವುದೇ ಸಿನಿಮಾ ಕಥೆ ಎಂದು ಹೇಳಲಾಗಿದೆ. ಸದ್ಯ ಈ ಸಣ್ಣ ಸ್ಟೋರಿಲೈನ್ ಕೇಳಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.

ಪುನೀತ್ ರಾಜ್‌ಕುಮಾರ್ 'ಅಪ್ಪು' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆ ಚಿತ್ರದಲ್ಲಿ ಪುನೀತ್ ಕಾಲೇಜ್ ಸ್ಟೂಡೆಂಟ್ ಆಗಿಯೇ ಕಾಣಿಸಿಕೊಂಡಿದ್ದರು. ಇದೀಗ ಯುವ ಕೂಡ ಅದೇ ಹಾದಿಯಲ್ಲಿ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಯುವ ಕಾಲೇಜ್ ಬ್ಯಾಗ್ ಹಿಡಿದುಕೊಂಡು ಕಾಣಿಸಿಕೊಂಡಿರುವ ಫೋಟೊಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಆನಂದ್ ಆಡಿಯೋ ಸಂಸ್ಥೆ 'ಯುವ' ಚಿತ್ರದ ಆಡಿಯೋ ರೈಟ್ಸ್ ಖರೀದಿಸಿದೆ. ಅಂದಾಜು 3 ಕೋಟಿ ರೂ.ಗೆ ಮಾರಾಟವಾಗಿದೆ ಎನ್ನಲಾಗ್ತಿದೆ. ಯುವನಟನ ಮೊದಲ ಚಿತ್ರದ ಆಡಿಯೋ ರೈಟ್ಸ್‌ಗೆ ಇಷ್ಟು ದೊಡ್ಡ ಮೊತ್ತವೇ ಎನ್ನುವ ಚರ್ಚೆ ನಡೀತಿದೆ. ಇನ್ನು ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಲ್ಲಿ ಛಾಯಾಗ್ರಹಣ 'ಯುವ' ಚಿತ್ರಕ್ಕಿದೆ. ಮಾರ್ಚ್ 29ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ. ಯುವ ರಾಜ್‌ಕುಮಾರ್ ಆರ್ಭಟ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

More from Filmibeat

English summary
Yuva rajkumar's debut film yuva storyline leaked;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X