ಅಪ್ಪುಗಾಗಿ ಬರೆದ ಕಥೆಗೆ ಯುವರಾಜ್‌ಕುಮಾರ್ ನಾಯಕ
ನಟ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ನಿಧನದಿಂದಾಗಿ ಅಪ್ಪು ಮಾಡಬೇಕಿದ್ದ ಸಿನಿಮಾಗಳು ಹೊಸ ತಿರುವು ಪಡೆದುಕೊಳ್ಳುತ್ತಿವೆ.
ನಟ ಪುನೀತ್ ರಾಜ್‌ಕುಮಾರ್ ಲಾಕ್‌ಡೌನ್ ಬಳಿಕ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಅಪ್ಪು ಡೇಟ್ ಹಲವು ನಿರ್ದೇಶಕ ನಿರ್ಮಾಪಕರ ಬಳಿ ಇತ್ತು. ಆದರೆ ಆ ಸಿನಿಮಾಗಳನ್ನು ಪೂರ್ತಿ ಮಾಡದೇ ಅಪ್ಪು ಇಲ್ಲವಾಗಿದ್ದಾರೆ. ಹಾಗಾಗಿ ಪುನೀತ್‌ರಾಜ್ ಕುಮಾರ್ ಅವರಿಗಾಗಿ ಮಾಡಿದ ಕಥೆಗಳ ಗತಿ ಏನು? ಅವರಿಗೆ ಒಪ್ಪುವಂತೆ ಮಾಡಿದ್ದ ಕತೆ ಮತ್ತೊಬ್ಬರಿಗೆ ಹೊಂದಿಕೊಳ್ಳತ್ತಾ ಎನ್ನುವ ಹಲವು ಗೊಂದಲಗಳು ಸೃಷ್ಟಿ ಆಗಿದ್ದವು.
ಇಂತಹದ್ದೇ ಗೊಂದಲ್ಲಿ ಇದ್ದ ನಿರ್ದೇಶಕ ಸಂತೋಷ್ ರಾಮ್ ಅವರಿಗೆ ಉತ್ತರ ಸಿಕ್ಕಿದೆ. ಅವರು ಪುನೀತ್ ರಾಜ್‌ಕುಮಾರ್‌ಗಾಗಿ ಬರೆದ ಕಥೆಗೆ ನಾಯಕ ಸಿಕ್ಕಿದ್ದಾರೆ. ಇದುವೇ ಸದ್ಯ ಗಾಂಧಿ ನಗರದ ಬಿಸಿಬಿಸಿ ಸುದ್ದಿ.

ಅಭಿಮಾನಿಗಳ ಆಸೆ ಪೂರೈಸುವತ್ತ ಸಂತೋಷ್ ಆನಂದ್‌ರಾಮ್!
ನಟ ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು, ಸಂತೋಷ್ ಆನಂದ್‌ರಾಮ್ ಅವರ ಮುಂದೆ ಬೇಡಿಕೆ ಇಟ್ಟಿದ್ದರು. ಅಪ್ಪು ಅವರಿಗಾಗಿ ಮಾಡಬೇಕಿರುವ ಸಿನಿಮಾಗಳನ್ನು ನೀವು ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ಯುವರಾಜ್‌ಕುಮಾರ್‌ಗಾಗಿ ಮಾಡಿ ಎಂದಿದ್ದರು. ಇನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಸ್ಪಂದಿಸಿದ ಸಂತೋಷ್ ಆನಂದ್‌ರಾಮ್, ಅವರ ಸಲಹೆಗಳನ್ನು ಸ್ವೀಕರಿಸುವುದಾಗಿ ಹೇಳಿಕೊಂಡಿದ್ದರು. ಈಗ ಈ ಕಾರ್ಯಕ್ಕೆ ಸಂತೋಷ್ ಆನಂದ್ ರಾಮ್ ಚಾಲನೆ ನೀಡಲು ಮುಂದಾಗಿದ್ದಾರೆ.

ಪುನೀತ್ ರಾಜ್‌ಕುಮಾರ್‌ಗಾಗಿ ಮಾಡಿದ್ದ ಕಥೆಗೆ ಯುವರಾಜ್‌ಕುಮಾರ್ ನಾಯಕ!
ನಿರ್ದೇಶಕ ಸಂತೋಷ್ ಆನಂದ್ ರಾಮ್ ಪುನೀತ್ ರಾಜ್‌ಕುಮಾರ್‌ಗಾಗಿ ಮತ್ತೊಂದು ಕಥೆಯನ್ನು ಸಿದ್ದ ಮಾಡಿದ್ದರು. ಈ ಚಿತ್ರವನ್ನು ನಟ ಪುನೀತ್ ರಾಜ್‌ಕುಮಾರ್ ಕೂಡ ಒಪ್ಪಿಕೊಂಡಿದ್ದರು. ಆದರೆ ಸಿನಿಮಾ ಆರಂಭಕ್ಕೂ ಮುನ್ನವೇ ಅಪ್ಪು ಕಾಲವಾಗಿದ್ದಾರೆ. ಅವರ ಜಾಗ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಅವರ ಆ ಪಾತ್ರವನ್ನು ಯುವ ರಾಜ್‌ಕುಮಾರ್ ಮಾಡಿದರೆ ಸೂಕ್ತ ಎನ್ನುವ ಅಭಿಪ್ರಾಯ ಎಲ್ಲರಿಂದಲೂ ಕೇಳಿ ಬರುತ್ತಿದೆ. ಹಾಗಾಗಿ ಅವರ ಮುಂದಿನ ಈ ಚಿತ್ರಕ್ಕೆ ಯುವರಾಜ್‌ಕುಮಾರ್ ಅವರನ್ನು ನಾಯಕ ನಟನನ್ನಾಗಿಸಿ ಸಿನಿಮಾ ಮಾಡುವ ತಯಾರಿಯಲ್ಲಿ ಇದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್.

ಅಪ್ಪು ಕಥೆಯ ಮೂಲಕವೇ ಯುವರಾಜ್‌ಕುಮಾರ್ ಲಾಂಚ್!
ಇನ್ನು ನಟ ಪುನೀತ್ ರಾಜ್‌ಕುಮಾರ್ ಅವರಿಗಾಗಿ ಮಾಡಿರುವ ಈ ಕಥೆಯಿಂದಲೇ ರಾಜ್‌ಕುಟುಂಬದ ಮತ್ತೊಂದು ಕುಡಿ ಯುವರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಲಾಂಚ್ ಆಗಲಿದ್ದಾರೆ. ಯುವ ರಾಜ್‌ಕುಮಾರ್ ಈಗಾಗಲೇ ಯುವ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ತಯಾರಿ ನಡೆಸಿದ್ದರು. ಈ ಚಿತ್ರದ ಮೊದಲ ಟೀಸರ್ ಕೂಡ ರಿಲೀಸ್ ಆಗಿತ್ತು. ಆದರೆ ಈ ಸಿನಿಮಾದ ಕೆಲಸಗಳು ತುಂಬಾ ತಡವಾಗುತ್ತಿವೆ ಅಂತೆ. ಹಾಗಾಗಿ ಸಂತೋಷ್ ಆನಂದ್ ರಾಮ್ ಸಿನಿಮಾದ ಮೂಲಕವೇ ಯುವ ಲಾಂಚ್ ಆಗಲಿದ್ದಾರೆ ಎನ್ನಲಾಗುತ್ತಿವೆ.

3ನೇ ಬಾರಿ ಸಂತೋಷ್ ಆನಂದ್‌ಗೆ ಡೇಟ್ ಕೊಟ್ಟಿದ್ದ ಅಪ್ಪು!
'ರಾಜಕುಮಾರ' ಸಿನಿಮಾದ ಯಶಸ್ಸಿನ ಬಳಿಕ ನಿರ್ದೇಶಕ ಸಂತೋಷ್ ಆನಂದ್ ರಾಮ್‌ಗೆ ಮತ್ತಷ್ಟು ಹೆಸರು ಬಂತು. ಹಾಗಾಗಿ ಪುನೀತ್ ರಾಜ್‌ಕುಮಾರ್ ಮತ್ತು ಸಂತೋಷ್ ಆನಂದ್‌ರಾಮ್ ಮತ್ತೆ ಒಟ್ಟಾಗೆ 'ಯುವರತ್ನ' ಸಿನಿಮಾ ಮಾಡಿದರು. ಯುವರತ್ನ ಸಿನಿಮಾದ ನಂತರ ಈ ಜೋಡಿ ಮತ್ತೊಂದು ಸಿನಿಮಾ ಮಾಡಲು ಮುಂದಾಗಿತ್ತು. 'ಜೇಮ್ಸ್' ಚಿತ್ರದ ಬಳಿಕ ಪುನೀತ್ ರಾಜ್‌ಕುಮಾರ್ ಸಂತೋಷ್ ಆನಂದ್‌ರಾಮ್ ನಿರ್ದೇಶನದಲ್ಲಿ ನಟಿಸಬೇಕಿತ್ತು. ಈ ಚಿತ್ರಕ್ಕೆ ಹೊಂಬಾಳೆ ನಿರ್ಮಾಣ ಸಂಸ್ಥೆ ಬಂಡವಾಳ ಹುಡಲು ಮುಂದಾಗಿತ್ತು. ಸಿನಿಮಾದ ಮಾತುಕಥೆ ಕೂಡ ಸಂಪೂರ್ವಾಗಿ ಮುಗಿದಿದ್ದವು. ಈಗ ಇದೇ ಚಿತ್ರಕ್ಕೆ ಅಪ್ಪು ಜಾಗದಲ್ಲಿ ಯುವ ರಾಜ್‌ಕುಮಾರ್ ಇರಲಿದ್ದಾರೆ. ಇದೇ ಚಿತ್ರದ ಮೂಲಕ ಯುವ ರಾಜ್‌ಕುಮಾರ್ ಲಾಂಚ್ ಆಗಲಿದ್ದಾರೆ. ಎನ್ನುವ ಸುದ್ದು ಸಂತೋಷ್ ಆನಂದ್ ರಾಮ್ ಅವರ ಆಪ್ತ ಬಳಗದಲ್ಲಿ ಹರಿದಾಡುತ್ತಲಿವೆ . ಈ ಬಗ್ಗೆ ಮುಂದಿ ವರ್ಷ ಜನವರಿಯಲ್ಲಿ ಎಲ್ಲಾ ಅಧಿಕೃತ ಮಾಹಿತಿ ಹೊರ ಬೀಳಲಿದೆ. ಸದ್ಯ ಸಂತೋಸ್ ಆನಂದ್ ರಾಮ್ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ಬ್ಯೂಸಿ ಆಗಿದ್ದಾರೆ.


Click it and Unblock the Notifications











