For Quick Alerts
  ALLOW NOTIFICATIONS  
  For Daily Alerts

  ನಟಸಾರ್ವಭೌಮ ಆಡಿಯೋ ಶೋನಲ್ಲಿ ಯುವರಾಜ್ ಕುಮಾರ್ ಸರ್ಪ್ರೈಸ್

  |

  ಜನವರಿ 5 ರಂದು ಹುಬ್ಬಳ್ಳಿಯಲ್ಲಿ 'ನಟಸಾರ್ವಭೌಮ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಪುನೀತ್ ರಾಜ್ ಕುಮಾರ್, ನಟಿ ರಚಿತಾ ರಾಮ್, ನಿರ್ದೇಶಕ ಪವನ್ ಒಡೆಯರ್ ಸೇರಿದಂತೆ ಚಿತ್ರರಂಗದ ಹಲವರು ಭಾಗಿಯಾಗಲಿದ್ದಾರೆ.

  ಈ ಕಾರ್ಯಕ್ರಮದಲ್ಲಿ ಡಾ ರಾಜ್ ಕುಟುಂಬದ ಭಕ್ತರಿಗೆ ಸರ್ಪ್ರೈಸ್ ವೊಂದು ಸಿಗಲಿದೆ. ರಾಘವೇಂದ್ರ ರಾಜ್ ಕುಮಾರ್ ಅವರ ಹಿರಿಯ ಮಗ ವಿನಯ್ ರಾಜ್ ಕುಮಾರ್ ಈಗಾಗಲೇ ಹೀರೋ ಆಗಿ ಮಿಂಚ್ತಿದ್ದಾರೆ.

  ಈ ಬೆನ್ನಲ್ಲೇ ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಮಗ ಯುವರಾಜ್ ಕುಮಾರ್ ನಿರ್ಮಾಪಕರಾಗಿ ಕೆಲಸ ಮಾಡ್ತಿದ್ದು, ಈಗ ಹೀರೋ ಆಗಿ ಮಿಂಚಲು ಸಜ್ಜಾಗುತ್ತಿದ್ದಾರೆ.

  ಅಪ್ಪು ರೀತಿ ಡ್ಯಾನ್ಸ್ ಮಾಡಿದ್ರೆ ಬಂಪರ್ ಬಹುಮಾನ ಅಪ್ಪು ರೀತಿ ಡ್ಯಾನ್ಸ್ ಮಾಡಿದ್ರೆ ಬಂಪರ್ ಬಹುಮಾನ

  ಇದರ ಮೊದಲ ಝಲಕ್ ಎಂಬಂತೆ 'ನಟಸಾರ್ವಭೌಮ' ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಸಿಗಲಿದೆ. ಹೌದು, ಯುವರಾಜ್ ಕುಮಾರ್ ಅವರು ಆಡಿಯೋ ಶೋನಲ್ಲಿ ಭರ್ಜರಿಯಾಗಿ ಹೆಜ್ಜೆ ಹಾಕಲಿದ್ದಾರೆ. ಈ ವಿಷ್ಯವನ್ನ ಸ್ವತಃ ಯುವರಾಜ್ ಕುಮಾರ್ ಫೇಸ್ ಬುಕ್ ನಲ್ಲಿ ಖಚಿತಪಡಿಸಿದ್ದು, ಪ್ರೋಮೋ ಒಂದು ಗಮನ ಸೆಳೆಯುತ್ತಿದೆ.

  ಅಂದ್ಹಾಗೆ, ಯುವ ರಾಜ್ ಕುಮಾರ್ ನಾಯಕನಟನಾಗಿ ಸಿನಿಮಾ ಇಂಡಸ್ಟ್ರಿ ಪ್ರವೇಶ ಮಾಡಲು ಸಕಲ ಸಿದ್ಧತೆಗಳನ್ನ ನಡೆಸಿದ್ದು, ಡ್ಯಾನ್ಸ್, ಆಕ್ಟಿಂಗ್ ಎಲ್ಲವನ್ನ ಕಲಿಯುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ಆದ್ರೆ, ಈ ವರ್ಷದಲ್ಲೇ ಬಿಗ್ ಸ್ಕ್ರೀನ್ ಮೇಲೆ ಬರಲಿದ್ದಾರೆ.

  English summary
  Raghavendra rajkumar's second son yuva rajkumar will performing at natasarvabhouma audio launch on Jan 5th Nehru Stadium, Hubballi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X