ಯುವ ಭಾಷಣದ ವೇಳೆ ಡಿಬಾಸ್.. ಡಿಬಾಸ್ ಕೂಗು; ರಾಜವಂಶ ಫ್ಯಾನ್ಸ್ ಏನಂತಾರೆ?
ಸಾವಿರಾರು ಜನ ಸೇರುವ ಯಾವುದೇ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಡಿ ಬಾಸ್.. ಡಿಬಾಸ್ ಎಂದು ಅಭಿಮಾನಿಗಳು ಕೂಗುತ್ತಿರುತ್ತಾರೆ. ಬೇರೆ ನಟರು, ರಾಜಕೀಯ ಮುಖಂಡರು ಮಾತನಾಡುವಾಗಲೂ ದರ್ಶನ್ ಫ್ಯಾನ್ಸ್ ತಮ್ಮ ಅಭಿಮಾನ ಪ್ರದರ್ಶಿಸುವ ಕೆಲಸ ಮಾಡುತ್ತಾರೆ. ರಾಮನಗರನ ಉತ್ಸವದಲ್ಲಿ ಕೂಡ ದರ್ಶನ್ ಅಭಿಮಾನಿಗಳ ಕ್ರೇಜ್ ಜೋರಾಗಿತ್ತು.
ರಾಮನಗರ ಐತಿಹಾಸಿಕ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವ ಪ್ರತಿ ವರ್ಷದಂತೆ ಈ ಬಾರಿ ಕೂಡ ಅದ್ಧೂರಿಯಾಗಿ ನಡೀತಿದೆ. ಯುವರಾಜ್‌ಕುಮಾರ್ ಸೇರಿದಂತೆ ಸಿನಿಮಾ ತಾರೆಯರು ಉತ್ಸವಕ್ಕೆ ತಾರಾ ಮೆರಗು ನೀಡುತ್ತಿದ್ದಾರೆ. 'ಎಕ್ಕ' ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ಯುವ ಅಂಡ್ ಟೀಂ ರಾಜ್ಯದ ಮೂಲೆ ಮೂಲೆಗೆ ತೆರಳಿ ಸಿನಿಮಾ ಪ್ರಚಾರ ಮಾಡುತ್ತಾ ಬರ್ತಿದ್ದಾರೆ. ನಿನ್ನೆ(ಜುಲೈ 15) ಸಂಜೆ ನಡೆದ ರಾಮನಗರ ಉತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಡಿಕೆ ಸುರೇಶ್, ನಟ ಯುವರಾಜ್‌ಕುಮಾರ್, ನಟ ಕ್ರೇಜಿಸ್ಟಾರ್ ರವಿಚಂದ್ರನ್, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವರು ಭಾಗಿ ಆಗಿದ್ದರು.

ಯುವ ರಾಜ್‌ಕುಮಾರ್ ವೇದಿಕೆ ಏರಿ ಮಾತನಾಡುವಾಗ ಡಿ ಬಾಸ್.. ಡಿಬಾಸ್ ಎಂಬ ಕೂಗು ಕೇಳಿಬಂದಿದೆ.. ಈ ವೇಳೆ ಯುವ ಸೈಲೆಂಟ್ ಆಗಿ ಕೂಗಿ ಎಂದಿದ್ದಾರೆ. ಬಳಿಕ 'ಎಕ್ಕ' ಸಿನಿಮಾ ಸೇರಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. 'ಅಪ್ಪು' ಸಿನಿಮಾ ಡೈಲಾಗ್ ಕೂಡ ಹೊಡೆದಿದ್ದಾರೆ. ಅಷ್ಟೇ ಅಲ್ಲ, ಇಲ್ಲಿ ಸಾಕಷ್ಟು ನಟರ ಅಭಿಮಾನಿಗಳು ಬಂದಿದ್ದಾರೆ ಎಂದು ಯುವ ರಾಜ್‌ಕುಮಾರ್ ಹೇಳಿದ್ದಾರೆ. ಯಾವುದೇ ಕಾರ್ಯಕ್ರಮ ಆಗಲಿ, ವೇದಿಕೆಯಲ್ಲಿ ಯಾರೇ ಇರಲಿ, ಡಿ ಬಾಸ್ ಹವಾ ಇರುತ್ತದೆ ಎಂದು ದರ್ಶನ್ ಅಭಿಮಾನಿಗಳು ವೀಡಿಯೋ ವೈರಲ್ ಮಾಡ್ತಿದ್ದಾರೆ.
ಸದ್ಯ ವೈರಲ್ ವೀಡಿಯೋದಲ್ಲಿ ಡಿಬಾಸ್.. ಡಿಬಾಸ್ ಎಂದು ಕೂಗಿರುವುದನ್ನು ಪುನೀತ್ ಹಾಗೂ ಯುವ ಫ್ಯಾನ್ಸ್ ಒಪ್ಪುತ್ತಿಲ್ಲ. ಅಭಿಮಾನಿಗಳು ಅಪ್ಪು.. ಅಪ್ಪು ಎಂದು ಕೂಗಿದ್ದಾರೆ. ಬಳಿಕ ಯುವ.. ಯುವ ಎಂದು ಜೈಕಾರ ಹಾಕಿದ್ದಾರೆ. ಅದು ನಿಮಗೆ ಸರಿಯಾಗಿ ಕೇಳಿಸ್ತಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ. ಇದು ಅಭಿಮಾನಿಗಳ ನಡುವೆ ಪರಸ್ಪರ ತಿಕ್ಕಾಟಕ್ಕೆ ಕಾರಣವಾಗಿದೆ.
ಮಾಜಿ ಸಂಸದ ಡಿಕೆ ಸುರೇಶ್ ಮಾತನಾಡುವಾಗ ಕೂಡ ಡಿಬಾಸ್.. ಡಿಬಾಸ್ ಎಂದು ಅಭಿಮಾನಿಗಳು ಕೂಗಿದ್ದಾರೆ. ಅದಕ್ಕೆ ಅವರು ಕೂಡ ಪ್ರತಿಕ್ರಿಯಿಸಿದ್ದಾರೆ. "ಡಿಬಾಸ್ ಎಲ್ಲಾ ಮಾತಾಡ್ತೀನಿ ಇರ್ರೋ.. ನಾನು ಕರೀಬೇಕು ಅಂತ ಇದ್ದೆ. ನೀವ್ ಸರಿ ಇಲ್ಲ ಅಂತ ಸುಮ್ಮನಾಗೋದೆ. ನೀವು ಸರಿ ಅಂದ್ರು, ಬೇರೆಯವರು ಸರಿಯಿಲ್ಲ ಅಂತ 24 ಗಂಟೆ ತೋರಿಸ್ತಾರೆ" ಎಂದು ನಕ್ಕಿದ್ದಾರೆ.
ಸ್ಟಾರ್ ನಟರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲದೇ ಇದ್ದರೂ ಅಭಿಮಾನಿಗಳು ಮಾತ್ರ ಹೀಗೆ ಪದೇ ಪದೆ ಕೆಸರೆರಚಾಟ ನಡೆಸುತ್ತಿರುತ್ತಾರೆ. ದರ್ಶನ್ ಹಾಗೂ ಯುವ ರಾಜ್‌ಕುಮಾರ್ ಮಧ್ಯೆ ಕೂಡ ಉತ್ತಮ ಒಡನಾಟವಿದೆ. ಈ ಹಿಂದೆ 'ಯುವ' ಸಿನಿಮಾ ಚಿತ್ರೀಕರಣದ ವೇಳೆ ಸೆಟ್‌ಗೆ ನಟ ದರ್ಶನ್ ಭೇಟಿ ನೀಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗಿತ್ತು.
ರೋಹಿತ್ ಪದಕಿ ನಿರ್ದೇಶನದ 'ಎಕ್ಕ' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಸಂಜನಾ ಆನಂದ್ ಹಾಗೂ ಸಂಪದಾ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಆದಿತ್ಯಾ, ಶ್ರುತಿ, ಅತುಲ್ ಕುಲಕರ್ಣಿ ಚಿತ್ರದ ತಾರಾಗಣದಲ್ಲಿದ್ದಾರೆ. ಈಗಾಗಲೇ ಟ್ರೈಲರ್ ಹಾಗೂ ಸಾಂಗ್ಸ್ ಹಿಟ್ ಆಗಿ ಸಿನಿಮಾ ಬಗ್ಗೆ ನಿರೀಕ್ಷೆ ಹುಟ್ಟಾಕ್ಕಿದೆ.
ಮತ್ತೊಂದು ಕಡೆ 'ಡೆವಿಲ್' ಸಿನಿಮಾ ಚಿತ್ರೀಕರಣಕ್ಕಾಗಿ ದರ್ಶನ್ ಥಾಯ್ಲೆಂಡ್‌ಗೆ ಹೋಗಿದ್ದಾರೆ. 10 ದಿನಗಳ ಕಾಲ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಒಂದು ಸಾಂಗ್ ಹಾಗೂ ಮಾಂಟೇಜ್ ಸನ್ನಿವೇಶಗಳನ್ನು ಸೆರೆಹಿಡಿಯಲಿದ್ದಾರೆ. ಜುಲೈ 19ಕ್ಕೆ ಚಿತ್ರದ ಮೋಷನ್ ಪೋಸ್ಟರ್ ಮೂಲಕ ಚಿತ್ರದ ರಿಲೀಸ್ ಡೇಟ್ ಘೋಷಿಸಲು ಚಿತ್ರತಂಡ ಮುಂದಾಗಿದೆ.


Click it and Unblock the Notifications











