'ಯುವ' ಪ್ರೀಮಿಯರ್ ಶೋ, ಫ್ಯಾನ್ಸ್ ಶೋ ಇರುತ್ತಾ? ಹೊಸಪೇಟೆ ಪ್ರೀ ರಿಲೀಸ್ ಈವೆಂಟ್ ಗೆಸ್ಟ್ ಯಾರು?

ಸಂತೋಷ್ ಆನಂದ್‌ರಾಮ್‌ ನಿರ್ದೇಶನದ 'ಯುವ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಅಣ್ಣಾವ್ರ ಮೊಮ್ಮಗ ರಾಘಣ್ಣ ಕಿರಿಮಗ ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ ಆಗಿರುವುದರಿಂದ ಕುತೂಹಲ ಮೂಡಿದೆ. ಈಗಾಗಲೇ ಹಾಡುಗಳು ಬಿಡುಗಡೆಯಾಗಿ ಹಿಟ್ ಆಗಿದ್ದು ಟ್ರೈಲರ್ ಹೊರಬರಲು ಕೌಂಟ್‌ಡೌನ್ ಶುರುವಾಗಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ 'ಯುವ ರಣಧೀರ ಕಂಠೀರವ' ಚಿತ್ರದ ಮೂಲಕ ಯುವ ರಾಜ್‌ಕುಮಾರ್‌ ಚಿತ್ರರಂಗಕ್ಕೆ ಬರಬೇಕಿತ್ತು. ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಯಿತು. ಬಳಿಕ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಹಾಗೂ ಸಂತೋಷ್ ಆನಂದ್‌ರಾಮ್ ದೊಡ್ಮನೆ ಹುಡುಗನ ಲಾಂಚಿಂಗ್ ಸಿನಿಮಾ ಜವಾಬ್ದಾರಿ ವಹಿಸಿಕೊಂಡರು. ಅಂತೂ ಇಂತೂ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ಪ್ರಚಾರ ಕಾವು ಪಡೆದುಕೊಳ್ಳುತ್ತಿದೆ.

Yuva Rajkumar s debut film Yuva screening and pre Release Event plans

ಇಂದಿನ ಯುವ ಜನತೆಯ ಕಥೆಯೊಂದನ್ನು 'ಯುವ' ಚಿತ್ರದಲ್ಲಿ ಹೇಳುವ ಪಯತ್ನ ಮಾಡಲಾಗಿದೆ. ಚಿತ್ರದಲ್ಲಿ ಕಾಲೇಜು ಹುಡುಗನ ಪಾತ್ರದಲ್ಲಿ ಯುವ ರಾಜ್‌ಕುಮಾರ್ ಬಣ್ಣ ಹಚ್ಚಿದ್ದಾರೆ. ಕೆಲವೇ ಕ್ಷಣಗಳಲ್ಲಿ 'ಯುವ' ಆಕ್ಷನ್ ಪ್ಯಾಕ್ಡ್ ಟ್ರೈಲರ್ ರಿಲೀಸ್ ಆಗಲಿದೆ. ಕಳೆದ ವರ್ಷ ಬಹಳ ಅದ್ಧೂರಿಯಾಗಿ ಸಿನಿಮಾ ಸೆಟ್ಟೇರಿತ್ತು. ಮುಹೂರ್ತದ ಸಮಯದಲ್ಲೇ 'ಯುವ' ಟೀಸರ್ ಬಂದು ಹಿಟ್ ಆಗಿತ್ತು.

'ಯುವ' ಚಿತ್ರದಲ್ಲಿ 'ಕಾಂತಾರ' ಬೆಡಗಿ ಸಪ್ತಮಿ ಗೌಡ ನಾಯಕಿಯಾಗಿ ಮಿಂಚಿದ್ದಾರೆ. ಕಿಶೋರ್, ಅಚ್ಯುತ್‌ ಕುಮಾರ್ ಹಾಗೂ ಸುಧಾರಾಣಿ ಚಿತ್ರದ ತಾರಾಗಣದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ 'ಯುವ' ಚಿತ್ರಕ್ಕಿದೆ. ಚಿತ್ರದ ಹಾಡುಗಳಿಗೆ ಸಂತೋಷ್ ಆನಂದ್‌ರಾಮ್ ಕೂಡ ಸಾಹಿತ್ಯ ಬರೆದಿದ್ದಾರೆ. ಟೈಟಲ್‌ ಸಾಂಗ್‌ 90 ಲಕ್ಷಕ್ಕೂ ಅಧಿಕ ವೀವ್ಸ್, 1 ಲಕ್ಷ 95 ಸಾವಿರ ಲೈಕ್ಸ್ ಸಾಧಿಸಿ ಸದ್ದು ಮಾಡ್ತಿದೆ.

ಸದ್ಯ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ 'ಯುವ' ಪ್ರೀ ರಿಲೀಸ್ ಈವೆಂಟ್ ಹಾಗೂ ಸಿನಿಮಾ ರಿಲೀಸ್ ಬಗ್ಗೆ ಮಾಹಿತಿ ಹಂಚಿಕೊಂಡಿದೆ. 'ಯುವ' ಚಿತ್ರವನ್ನು ಗುರುವಾರ ಬಿಡುಗಡೆ ಮಾಡಲ್ಲ. ಫ್ಯಾನ್ಸ್ ಶೋ, ಮಿಡ್‌ ನೈಟ್ ಶೋಗಳು ಕೂಡ ಇರಲ್ಲ ಎಂದು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಮಾಹಿತಿ ನೀಡಿದ್ದಾರೆ. ಮಾರ್ಚ್‌ 29ರಂದು ಗುಡ್‌ ಫ್ರೈಡೇ ರಜೆ ಇದೆ. ಅದೇ ಕಾರಣಕ್ಕೆ ಅಂದೇ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕ ವಿಜಯ್ ಕಿರಗಂದೂರು ತೀರ್ಮಾನಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಶುಕ್ರವಾರ ಬೆಳಗ್ಗೆ 8 ಗಂಟೆ ಬಳಿಕವೇ ಸಿನಿಮಾ ತೆರೆಗಪ್ಪಳಿಸುತ್ತದೆ ಎಂದಿದ್ದಾರೆ.

ಮೊದಲಿಗೆ ಕಳೆದ ವರ್ಷ ಡಿಸೆಂಬರ್ 22ಕ್ಕೆ 'ಯುವ' ರಿಲೀಸ್ ಡೇಟ್ ಘೋಷಣೆ ಆಗಿತ್ತು. ಬಳಿಕ 'ಸಲಾರ್' ಚಿತ್ರಕ್ಕಾಗಿ 'ಯುವ' ಮುಂದೆ ಬರುವಂತಾಯಿತು. ಅಪ್ಪು ಹುಟ್ಟುಹಬ್ಬದ ಸಂಭ್ರಮದಲ್ಲಿ 'ಯುವ' ಸಿನಿಮಾ ಬಿಡುಗಡೆ ಆಗುತ್ತದೆ ಎಂದು ಕೆಲವರು ಭಾವಿಸಿದ್ದರು. ಆದರೆ ಮಾರ್ಚ್‌ 29ಕ್ಕೆ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಮಾಡಿತ್ತು ಚಿತ್ರತಂಡ. ಅದೇ ದಿನಾಂಕ ಯಾಕೆ ಎನ್ನುವುದಕ್ಕೆ ಈಗ ಉತ್ತರ ಸಿಕ್ಕಿದೆ. ಶುಕ್ರವಾರ ರಜೆ, ಶನಿವಾರ, ಭಾನುವಾರ ವೀಕೆಂಡ್ ಆಗಿರುವುದರಿಂದ ಈ ಡೇಟ್ ಆಯ್ಕೆ ಮಾಡಿಕೊಂಡಿರುವುದು ಗೊತ್ತಾಗುತ್ತಿದೆ.

ಹೊಸಪೇಟೆಯಲ್ಲಿ ದೊಡ್ಮನೆ ಅಭಿಮಾನಿಗಳು ಅದರಲ್ಲೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಹೆಚ್ಚು ಇದ್ದಾರೆ. ಅದೇ ಕಾರಣಕ್ಕೆ ಅಲ್ಲೇ ಪ್ರೀ ರಿಲೀಸ್ ಈವೆಂಟ್ ಮಾಡುವಂತೆ ಅಭಿಮಾನಿಗಳು ಮನವಿ ಮಾಡಿದ್ದರು. ಅದಕ್ಕೆ ಚಿತ್ರತಂಡ ಒಪ್ಪಿದ್ದು ಶನಿವಾರ(ಮಾರ್ಚ್ 21) ಸಂಜೆ ಅದ್ಧೂರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

Yuva Rajkumar s debut film Yuva screening and pre Release Event plans

'ಯುವ' ಪ್ರೀ ರಿಲೀಸ್‌ ಕಾರ್ಯಕ್ರಮದ ಬಗ್ಗೆ ಕೂಡ ನಿರ್ದೇಶಕ ಸಂತೋಷ್ ಆನಂದ್‌ ರಾಮ್ ಮಾಹಿತಿ ನೀಡಿದ್ದಾರೆ. ಪ್ರೀ ರಿಲೀಸ್ ಈವೆಂಟ್‌ಗೆ ಯುವ ರಾಜ್‌ಕುಮಾರ್ ಚಿಕ್ಕಮ್ಮ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಶಿವಣ್ಣ ಕೂಡ ಭಾಗಿ ಆಗುವ ಸಾಧ್ಯತೆಯಿದೆ. ಇಡೀ ಚಿತ್ರತಂಡ ಹಾಜರಿರುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ. ನಿಶ್ವಿಕಾ ನಾಯ್ಡು ಡ್ಯಾನ್ಸ್, ವಿಜಯ್ ಪ್ರಕಾಶ್, ನವೀನ್ ಸಜ್ಜು ಗಾಯನ ಇರುತ್ತದೆ ಎಂದು ವಿವರಿಸಿದ್ದಾರೆ.

More from Filmibeat

English summary
Santhosh Anandram revealed Yuva Film premiere shows, Fans Shows details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X