"ಯುವ ಯೂ* ಮಾಡಿ ಬಿಸಾಕಿದ .." ಎಂದು ಅಸಭ್ಯ ಕಾಮೆಂಟ್; ಶ್ರೀದೇವಿ ಖಡಕ್ ತಿರುಗೇಟು
ನಟ ಯುವರಾಜ್‌ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಅವರಿಂದ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಕಳೆದ ಎರಡು ವರ್ಷಗಳಿಂದ ಇಬ್ಬರೂ ದೂರಾಗಿ ವಾಸಿಸುತ್ತಿದ್ದಾರೆ. ಸದ್ಯ ಶ್ರೀದೇವಿ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಅಲ್ಲಿ ಅರೆಕಾಲಿಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವುದಾಗಿ ಇತ್ತೀಚೆಗೆ ಹೇಳಿದ್ದರು.
7 ವರ್ಷಗಳ ಕಾಲ ಪ್ರೀತಿಸಿ ಯುವ ಹಾಗೂ ಶ್ರೀದೇವಿ ಪೋಷಕರ ಒಪ್ಪಿಗೆ ಪಡೆದು ಮದುವೆ ಆಗಿದ್ದರು. ಮದುವೆಯಾದ 4 ವರ್ಷಕ್ಕೆ ಇಬ್ಬರೂ ದೂರಾಗುವ ನಿರ್ಧಾರಕ್ಕೆ ಬಂದಿದ್ದರು. ಯುವ ಡಿವೋರ್ಸ್ ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ಅದಕ್ಕೆ ಶ್ರೀದೇವಿ ಒಪ್ಪುತ್ತಿಲ್ಲ. ಯುವ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಇನ್ನು ಡಿವೋರ್ಸ್ ನೋಟಿಸ್ ತಮ್ಮ ವಕೀಲರ ಮೂಲಕ ಶ್ರೀದೇವಿ ಈಗಾಗಲೇ ಪ್ರತಿಕ್ರಿಯಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಶ್ರೀದೇವಿ ಆಗಾಗ್ಗೆ ಫೋಟೊ, ವೀಡಿಯೋ ಹಂಚಿಕೊಳ್ಳುತ್ತಾರೆ. ರೀಲ್ಸ್ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾರೆ. ಸದ್ಯ ಆಕೆ ಹೊಸದಾಗಿ ಹಾಕಿರುವ ರೀಲ್ಸ್ ವೀಡಿಯೋವೊಂದಕ್ಕೆ ನೆಟ್ಟಿಗನೊಬ್ಬ ಅವಹೇಳನಕಾರಿ ಪದ ಬಳಸಿ ಕೀಳುಮಟ್ಟದಲ್ಲಿ ಕಾಮೆಂಟ್ ಮಾಡಿದ್ದಾನೆ. ಅದಕ್ಕೆ ನಯವಾಗಿಯೇ ಆಕೆ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾ ಅನ್ನೋದು ಅಶ್ಲೀಲ, ಅಸಭ್ಯ ಕಾಮೆಂಟ್‌ಗಳಿಂದ ತುಂಬಿ ತುಳುಕುತ್ತಿದೆ. ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಯಾರು? ಯಾರಿಗೆ ಏನು ಬೇಕಾದರೂ ಕಾಮೆಂಟ್ ಮಾಡಬಹುದು ಎನ್ನುವಂತಾಗಿಬಿಟ್ಟಿದೆ. ಅದನ್ನು ಪತ್ತೆ ಹಚ್ಚುವುದು, ಶಿಕ್ಷಿಸುವುದು ಅಷ್ಟು ಸುಲಭಕ್ಕೆ ಸಾಧ್ಯವಾಗದ ಕಾರಣ ಕಿಡಿಗೇಡಿಗೆ ಮನಸ್ಸಿಗೆ ಬಂದಂತೆ ಆಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾ ಮೂಲಕ ಸೆಲೆಬ್ರೆಟಿಗಳು ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ. ಆದರೆ ನೇರವಾಗಿಯೇ ಅವರಿಗೆ ಕೆಟ್ಟ ಕೆಟ್ಟ ಕಾಮೆಂಟ್ ಮನಸ್ಸನ್ನು ನೋಯಿಸುವವರು ಇದ್ದಾರೆ. ಕೆಲವರು ಪೋಸ್ಟ್ ಮಾಡಿ ಸುಮ್ಮನಾಗುತ್ತಾರೆ. ಮತ್ತೆ ಕೆಲವರು ಕಾಮೆಂಟ್ ಸೆಕ್ಷನ್ ಆಫ್ ಮಾಡುತ್ತಾನೆ. ಕೆಲವೊಮ್ಮೆ ಕಾಮೆಂಟ್‌ಗಳನ್ನು ಓದುವ ಗೋಜಿಗೆ ಹೋಗುವುದಿಲ್ಲ. ಆದರೆ ಕೆಲವೊಮ್ಮೆ ಇಂತಹ ಕೆಟ್ಟ ಕಾಮೆಂಟ್‌ಗಳಿಗೆ ಪ್ರತಿಕ್ರಿಯೆ ಕೊಡಲೇಬೇಕಾಗುತ್ತದೆ.

ಸದ್ಯ ಶ್ರೀದೇವಿ ಭೈರಪ್ಪ ರೀಲ್ಸ್ ವೀಡಿಯೋಗೂ ನೆಟ್ಟಿಗನೊಬ್ಬ ತೀರ ಕೆಟ್ಟ ಅಸಭ್ಯ ಪದ ಬಳಸಿ ಕಾಮೆಂಟ್ ಮಾಡಿದ್ದಾನೆ. ಅದಕ್ಕೆ ಆಕೆ ಪ್ರತಿಕ್ರಿಯೆ ನೀಡಿದ್ದಾರೆ. "ಯುವರಾಜ್ ಯೂ* ಮಾಡಿ ಬಿಸಾಕಿದ ..." ಎಂದು ಅವಹೇಳಕಾರಿ ಪದ ಸೇರಿಸಿ ಕಾಮೆಂಟ್ ಹಾಕಿದ್ದಾನೆ. ಆ ಪದವನ್ನು ಕೂಡ ಇಲ್ಲಿ ಬಳಸಲು ಆಗುವಂತಿಲ್ಲ.
ಆತನ ಈ ಕೀಳುಮಟ್ಟದ ಕಾಮೆಂಟ್‌ಗೆ ಶ್ರೀದೇವಿ ಪ್ರತಿಕ್ರಿಯಿಸಿ "ನೀವು ಓಕೆ ಅಲ್ವಾ? ನಿಮ್ಮ ಮನೆಯಲ್ಲಿರುವ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ, ಅವರ ಕಾಳಜಿ ವಹಿಸಿ" ಎಂದು ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ. ಸಾಕಷ್ಟು ಜನ ಶ್ರೀದೇವಿ ಪರ ಮಾತನಾಡಿ ಆತನ ಕಾಮೆಂಟ್‌ಗೆ ಅಕ್ಷೇಪ ವ್ಯಕ್ತಪಡಿಸಿ ಆಕ್ರೋಶ ಹೊರ ಹಾಕಿದ್ದಾರೆ.
ಡಿವೋರ್ಸ್ ಎನ್ನುವುದು ಅವರವರ ವೈಯಕ್ತಿಕ ವಿಚಾರ. ಆದರೆ ಈ ರೀತಿ ಕೆಟ್ಟದಾಗಿ ಕಾಮೆಂಟ್ ಮಾಡುವುದು, ಅಸಭ್ಯ ಪದಗಳಿಂದ ಹೆಣ್ಣುಮಕ್ಕಳನ್ನು ನಿಂದಿಸುವುದು ಸರಿಯಲ್ಲ. ಇಂತಹವರು ಮೊದಲು ತಮ್ಮ ಮನಸ್ಥಿತಿ ಬದಲಿಸಿಕೊಳ್ಳಬೇಕು. ಸೋಶಿಯಲ್ ಮೀಡಿಯಾ ಇದೆ ಎಂದು ಏನೇನೋ ಬರೆದು ಹುಚ್ಚಾಟ ಮೆರೆಯುವುದಲ್ಲ. ಇನ್ನು ಫೇಕ್ ಅಕೌಂಟ್‌ಗಳನ್ನು ಬಳಸಿ, ಮುಖ ಮರೆಮಾಚಿ ಯಾವುದೇ ಡಿಪಿ ಫೋಟೊ ಹಾಕಿಕೊಂಡು ಇಂತಹ ಕೀಳುಮಟ್ಟದ ಕಾಮೆಂಟ್ ಮಾಡುವುದು ಸರಿಯಲ್ಲ.
ಕೆಲ ದಿನಗಳ ಹಿಂದೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ಕಿಡಿಗೇಡಿಯೊಬ್ಬ ಟ್ವಿಟರ್‌ನಲ್ಲಿ ಅವಹೇಳಕಾರಿ ಪೋಸ್ಟ್ ಮಾಡಿದ್ದ. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆರೋಪ ಪ್ರತ್ಯಾರೋಪ ನಡೆದು ಅಭಿಮಾನಿಗಳು ದೂರು ದಾಖಲಿಸುವ ಮಟ್ಟಕ್ಕೆ ಹೋಗಿತ್ತು.
ಎಲ್ಲಾ ನಟ, ನಟಿಯರಿಗೂ ಇಂತಹ ಕೆಟ್ಟ ಅನುಭವ ಆಗಿರುತ್ತದೆ. ಆದರೆ ಎಲ್ಲರೂ ಈ ಬಗ್ಗೆ ಪ್ರತಿಕ್ರಿಯಿಸುವ ಗೋಜಿಗೆ ಹೋಗುವುದಿಲ್ಲ. ಕೆಲವರು ಮಾತ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ. ಕೆಲವರು ಕಾಮೆಂಟ್ ಬಾಕ್ಸ್‌ನಲ್ಲೇ ರಿಪ್ಲೇ ಮಾಡಿ ತಿರುಗೇಟು ನೀಡುತ್ತಾರೆ.


Click it and Unblock the Notifications











