Yuva Upadate: 'ಯುವ' ಕಥೆ ಎಲ್ಲಿಗೆ ಬಂತು? ಟೀಸರ್, ಟ್ರೈಲರ್ ರಿಲೀಸ್ ಯಾವಾಗ?

ಬೆಳ್ಳಿ ಪರದೆ ಮೇಲೆ ಯುವ ರಾಜ್‌ಕುಮಾರ್ ಆರ್ಭಟಕ್ಕೆ ದಿನಗಣನೆ ಶುರುವಾಗಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣದಲ್ಲಿ ಸಂತೋಷ್ ಆನಂದ್ ರಾಮ್‌ ನಿರ್ದೇಶನದ 'ಯುವ' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಟೀಸರ್ ರಿಲೀಸ್ ಮಾಡಿ ಮುಹೂರ್ತ ನೆರವೇರಿಸಿದ್ದ ಚಿತ್ರತಂಡ ಬಳಿಕ ಸೈಲೆಂಟ್ ಆಗಿತ್ತು.

ಸದ್ದಿಲ್ಲದೇ 'ಯುವ' ಚಿತ್ರೀಕರಣ ಮುಕ್ತಾಯವಾಗಿದೆ. ದೊಡ್ಮನೆ 'ಯುವ'ರಾಜನ ದರ್ಬಾರ್‌ ನೋಡುವುದಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮಾರ್ಚ್ 22ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಬಹಳ ಅದ್ಧೂರಿಯಾಗಿ 'ಯುವ' ಚೊಚ್ಚಲ ಸಿನಿಮಾ ತೆರೆಗೆ ಬರಲಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಡಿಸೆಂಬರ್ 28ಕ್ಕೆ 'ಯುವ' ಬರಬೇಕಿತ್ತು. ಆದರೆ 'ಸಲಾರ್'ಗೆ ದಾರಿಬಿಟ್ಟು ಮುಂದೆ ಹೋಗುವಂತಾಯಿತು.

Yuva rajkumars Yuva fiilm Promotions Starts From Mid-February

ಅಪ್ಪು ಅಗಲಿಕೆ ಬಳಿಕ ಕೆಲ ಅಭಿಮಾನಿಗಳು ಯುವ ರಾಜ್ ಕುಮಾರ್ ಅವರಲ್ಲಿ ಅಪ್ಪುನ ನೋಡುತ್ತಿದ್ದಾರೆ. ಅದೇ ಕಾರಣಕ್ಕೆ ಸಹಜವಾಗಿ 'ಯುವ' ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಒಂದು ಮಾಸ್ ಸಬ್ಜೆಕ್ಟ್ ಮೂಲಕ ರಾಘಣ್ಣನ ಕಿರಿಮಗ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಪ್ತಮಿ ಗೌಡ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ 'ಯುವ' ಚಿತ್ರಕ್ಕಿದೆ.

ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ 'ಯುವ' ಸಿನಿಮಾ ಅಪ್‌ಡೇಟ್ ಕೇಳುತ್ತಲೇ ಇದ್ದಾರೆ. ಆದರೆ ಚಿತ್ರತಂಡ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ. ಅಪ್ಪು ಹಾಗೂ ಸಂತೋಷ್ ಆನಂದ್ ರಾಮ್‌ ಕಾಂಬಿನೇಷನ್‌ನಲ್ಲಿ ಎರಡು ಸಿನಿಮಾ ಬಂದಿತ್ತು. ಮೂರನೇ ಚಿತ್ರಕ್ಕೆ ಸಿದ್ಧತೆ ನಡೆದಿತ್ತು. ಅಷ್ಟರಲ್ಲೇ ಅಪ್ಪು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದರು. ಎರಡು ಸಿನಿಮಾಗಳನ್ನು ನಿರ್ಮಿಸಿದ್ದ ಹೊಂಬಾಳೆ ಸಂಸ್ಥೆಯೇ 3ನೇ ಚಿತ್ರಕ್ಕೂ ಹಣ ಹೂಡಬೇಕಿತ್ತು.

Yuva rajkumars Yuva fiilm Promotions Starts From Mid-February

ಪುನೀತ್ ರಾಜ್‌ಕುಮಾರ್ ಸಿನಿಮಾ ನಿರ್ದೇಶಕಕ್ಕೆ ಮುಂದಾಗಿದ್ದ ಸಂತೋಷ್ ಆನಂದ್ ರಾಮ್ ಬಳಿಕ 'ಯುವ' ಸಿನಿಮಾ ಕೈಗೆತ್ತಿಕೊಂಡಿದ್ದರು. ಸಣ್ಣ ಟೀಸರ್ ಝಲಕ್‌ನಲ್ಲೇ ಅಭಿಮಾನಿಗಳ ಮನಗೆದ್ದಿದ್ದರು. ಅದು ಬರೀ ಟೈಟಲ್ ಅನೌನ್ಸ್‌ಮೆಂಟ್ ಟೀಸರ್ ಆಗಿತ್ತು. ಚಿತ್ರದ ಅಧಿಕೃತ ಟೀಸರ್ ರಿವೀಲ್ ಮಾಡಿ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.

ಫೆಬ್ರವರಿ ಮಧ್ಯಭಾಗದಲ್ಲಿ 'ಯುವ' ಪ್ರಚಾರ ಶುರುವಾಗುವ ಸಾಧ್ಯತೆಯಿದೆ. ಟೀಸರ್, ಸಾಂಗ್ಸ್ ರಿಲೀಸ್ ಮಾಡಿ ಹೈಪ್ ಕ್ರಿಯೇಟ್ ಮಾಡುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಇನ್ನು ಮಾರ್ಚ್ 17ಕ್ಕೆ ಅಪ್ಪು ಹುಟ್ಟುಹಬ್ಬದ ಹೊಸ್ತಿಲ್ಲಲ್ಲಿ ಅಫೀಷಿಯಲ್ ಟ್ರೈಲರ್ ಲಾಂಚ್ ಆಗುವ ನಿರೀಕ್ಷೆಯಿದೆ. ಅಪ್ಪು ಹುಟ್ಟುಹಬ್ಬಕ್ಕೆ 'ಯುವ' ಚಿತ್ರದಿಂದ ಬಿಗ್ ಸರ್‌ಪ್ರೈಸ್ ಗ್ಯಾರೆಂಟಿ ಎನ್ನಲಾಗ್ತಿದೆ.

ಮಾಸ್ ಎಲಿಮೆಂಟ್ಸ್ ಜೊತೆ ಒಂದು ಲವ್‌ ಸ್ಟೋರಿಯನ್ನು ಕೂಡ 'ಯುವ' ಚಿತ್ರದಲ್ಲಿ ಹೇಳಿದ್ದಾರೆ ಎನ್ನಲಾಗ್ತಿದೆ. ರಗಡ್ ಲುಕ್‌ನಲ್ಲಿ ಯುವ ಚಂದವನಕ್ಕೆ ಪರಿಚಿತರಾಗಲಿದ್ದಾರೆ. ಕಥೆ ಬಗ್ಗೆ ಯಾವುದೇ ಸುಳಿವು ಕೊಡದೇ ಚಿತ್ರತಂಡ ಗುಟ್ಟು ಕಾಪಾಡಿಕೊಂಡಿದೆ. ಅಣ್ಣಾವ್ರ ಮೊಮ್ಮಗನ ಆರಂಗೇಟ್ರಂ ಸಿನಿಮಾ ಆಗಿರುವುದರಿಂದ ಭಾರೀ ನಿರೀಕ್ಷೆ ಇರುವುದಂತೂ ಸುಳ್ಳಲ್ಲ. ಅದರಲ್ಲೂ ಯುವ ರಾಜ್‌ಕುಮಾರ್ ಸ್ಟಂಟ್ಸ್ ಮತ್ತು ಡ್ಯಾನ್ಸ್ ಬಗ್ಗೆ ಭಾರೀ ಕುತೂಹಲ ಹೆಚ್ಚೇ ಇದೆ.

ಇತ್ತೀಚೆಗೆ ದೊಡ್ಡಮಟ್ಟದಲ್ಲಿ ಅಭಿಮಾನಿಗಳು ಯುವ ರಾಜ್‌ಕುಮಾರ್ ಮನೆಗೆ ಭೇಟಿ ನೀಡಿದ್ದರು. ನೆಚ್ಚಿನ ನಟನನ್ನು ನೋಡಿ ಮಾತನಾಡಿಸಿ, ಜೈಕಾರ ಹಾಕಿ ಸಂಭ್ರಮಿಸಿದ್ದರು. 'ಯುವ' ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿರುವುದಾಗಿ ತಿಳಿಸಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋ ವೈರಲ್ ಆಗಿತ್ತು.

ಮೊದಲ ಸಿನಿಮಾ ಬಿಡುಗಡೆಗೂ ಮುನ್ನ ಯುವ ರಾಜ್‌ಕುಮಾರ್ ಮುಂದಿನ ಸಿನಿಮಾಗಳ ಬಗ್ಗೆ ಚರ್ಚೆ ಆಗುತ್ತಿದೆ. ನರ್ತನ್ ನಿರ್ದೇಶನದಲ್ಲಿ ಯುವ ನಟಿಸುತ್ತಾರೆ ಎನ್ನುವ ವದಂತಿ ಹರಡಿತ್ತು. ಜೊತೆಗೆ ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್‌ ಚಿತ್ರದಲ್ಲೂ ಬಣ್ಣ ಹಚ್ಚುತ್ತಾರೆ ಎನ್ನಲಾಗ್ತಿದೆ.

More from Filmibeat

English summary
Fans request for Yuva film update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X