"ರಾಜವಂಶದ ಅಭಿಮಾನಿಗಳೇ ಟಾರ್ಗೆಟ್..ಬೆದರಿಕೆ.. ನೀವು ದುಡುಕಬೇಡಿ"- ಯುವ ಫ್ಯಾನ್ಸ್
ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ವಾರ್‌ಗಿಂತ ಸ್ಟಾರ್‌ಗಳ ಫ್ಯಾನ್ಸ್ ನಡುವಿನ ವಾರ್ ಜೋರಾಗಿರುತ್ತದೆ. ಪದೇ ಪದೆ ಅವರ ಮೇಲೆ ಇವರು, ಇವರ ಮೇಲೆ ಅವರು ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ನಡೆಸುತ್ತಲೇ ಇರುತ್ತಾರೆ. ಕಲಾವಿದರು ಒಗ್ಗಟ್ಟಾಗಿ ಇದ್ದರೂ ಕೆಲ ಅಭಿಮಾನಿಗಳು ಕೇಳುತ್ತಿಲ್ಲ. ತಮ್ಮ ನಟ ಹೆಚ್ಚು ಎಂದು ಬಿಂಬಿಸುವ ಭರದಲ್ಲಿ ಮತ್ತೊಬ್ಬ ನಟನನ್ನು ಹಿಯ್ಯಾಳಿಸುವ ಪ್ರಯತ್ನ ಮಾಡುತ್ತಾರೆ.
ಟ್ರೋಲ್ ಹೆಸರಿನಲ್ಲಿ ಕೆಟ್ಟದಾಗಿ ಸಿನಿಮಾ ನಟರನ್ನು, ಅವರ ಅಭಿಮಾನಿಗಳನ್ನು ನಿಂದಿಸುವ ಕೆಲಸ ನಡೀತಿದೆ. ಕೆಟ್ಟ ಕೆಟ್ಟದಾಗಿ ಮೀಮ್ಸ್ ಕ್ರಿಯೇಟ್ ಮಾಡಿ ಪೋಸ್ಟ್ ಮಾಡಲಾಗುತ್ತಿದೆ. ಕೆಟ್ಟದಾಗಿ ಟ್ರೆಂಡ್ ಮಾಡುವ ವಿಚಿತ್ರ ಪ್ರವೃತ್ತಿಯೂ ಕೂಡ ಇತ್ತೀಚೆಗೆ ಶುರುವಾಗಿದೆ. ಇನ್ನು ಅಪ್ಪಿ ತಪ್ಪಿ ಯಾರಾದರೂ ತಮ್ಮ ನೆಚ್ಚಿನ ನಟನ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಆತನನ್ನು ಹಿಡಿದು ಥಳಿಸಿ ಕ್ಷಮೆ ಕೇಳಿಸುವ ಮಟ್ಟಕ್ಕೂ ಈ ಫ್ಯಾನ್ಸ್ ವಾರ್ ಹೋಗ್ತಿರೋದು ವಿಪರ್ಯಾಸ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್‌ಗಳ ಹಾವಳಿ ಹೆಚ್ಚಾಗುತ್ತಿದೆ. ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಕಲಾವಿದರು ನಿಂದಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ.

ರಾಘವೇಂದ್ರ ರಾಜ್‌ಕುಮಾರ್ ಕಿರಿಮಗ ಯುವ ರಾಜ್‌ಕುಮಾರ್ ನಟನೆಯ ಯಾವುದೇ ಸಿನಿಮಾ ಇನ್ನು ರಿಲೀಸ್ ಆಗಿಲ್ಲ. ಆದರೆ ಈಗಾಗಲೇ ಯುವ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಡಾ. ರಾಜ್‌ಕುಮಾರ್ ಕುಟುಂಬ ಸದಸ್ಯರ ಅಭಿಮಾನಿಗಳು ಯುವ ಬೆಂಬಲಕ್ಕೆ ನಿಂತಿದ್ದಾರೆ. ಸದ್ಯ ಇಂತಹ ಕೆಟ್ಟ ಫ್ಯಾನ್ಸ್ ವಾರ್ ಬಗ್ಗೆ ಯುವ ಅಭಿಮಾನಿಗಳು ವಿಶೇಷ ಮನವಿ ಮಾಡಿದ್ದಾರೆ.
ಎಲ್ಲರಿಗೂ ನಮಸ್ಕಾರ, "ಇತ್ತೀಚೆಗೆ ನಡೆದ ಕೆಲವು ಘಟನೆಗಳಲ್ಲಿ ಅನ್ಯ ನಟರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಇರುವ ನಮ್ಮ ರಾಜವಂಶದ ಅಭಿಮಾನಿಗಳ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಅವರನ್ನು ಟಾರ್ಗೆಟ್ ಮಾಡಿ ಮಾನಸಿಕವಾಗಿ ಹಿಂಸಿಸಿ ಜೊತೆಗೆ ಇರುವ ಅಭಿಮಾನಿಗಳ ಮಾಹಿತಿ ನೀಡುವಂತೆ ಬೆದರಿಸುವುದರ ಜೊತೆಗೆ ತೊಂದರೆ ನೀಡುವುದಲ್ಲದೇ ಅವರ ತಪ್ಪುಗಳು ಬಹಳಷ್ಟು ಇದ್ದರೂ ನಮ್ಮವರ ಸಣ್ಣ ತಪ್ಪುಗಳನ್ನು ದೊಡ್ಡದು ಎಂದು ತೋರಿಸಿ ಅವರ ಬಳಿ ಕ್ಷಮೆ ಕೇಳಿಸಿ ಅದನ್ನು ವಿಡಿಯೋ ಮಾಡಿ ಎಲ್ಲೆಡೆ ಹಾಕಿ ಅವಮಾನ ಮಾಡುವುದು ನಡೆಯುತ್ತಿದೆ.
"ಇಂತಹ ವಿಚಾರದಲ್ಲಿ ನಾವು ಹೇಳುವುದು ಇಷ್ಟೆ. ಇನ್ನುಮುಂದೆ ಯಾರಾದರೂ ಇಂತಹ ಸಮಸ್ಯೆಗಳಲ್ಲಿ ಸಿಲುಕಿದರೆ ದುಡುಕಬೇಡಿ ತಪ್ಪದೆ ಇದರ ಬಗ್ಗೆ ನಮಗೆ ತಿಳಿಸಿ ಹಾಗೂ ತಾವಾಗಿಯೇ ಯಾವ ನಟರನ್ನು ಹೀಯಾಆಸುವುದನ್ನು ಟ್ರಾಲ್ ಮಾಡುವುದನ್ನು ಬಿಟ್ಟುಬಿಡಿ. ಒಂದು ವೇಳೆ ನಮ್ಮ ನಟರನ್ನು ಅವರು ಟ್ರಾಲ್ ಮಾಡಿದರೆ ಅವರ ಮಾಹಿತಿ ನೀಡಿ. (ಫೇಕ್ ಐಡಿ ಹೊರತುಪಡಿಸಿ)" ಎಂದು ಪೋಸ್ಟ್ ಮಾಡಿದ್ದಾರೆ. ಆ ಮೂಲಕ ಫ್ಯಾನ್ಸ್ ವಾರ್‌ಗೆ ಬ್ರೇಕ್ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.

'ಯುವ' ಚಿತ್ರಕ್ಕಾಗಿ ಕಾತರ
ರಾಘಣ್ಣನ ಕಿರಿಮಗನ ಚೊಚ್ಚಲ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ 'ಯುವ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಹೊಂಬಾಳೆ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. 'ಕಾಂತಾರ' ಖ್ಯಾತಿಯ ಸಪ್ತಮಿ ಗೌಡ ಚಿತ್ರದಲ್ಲಿ ನಾಯಕಿಯಾಗಿ 'ಯುವ'ಗೆ ಸಾಥ್ ನೀಡಿದ್ದಾರೆ. 'ಯುವ ರಣಧೀರ ಕಂಠೀರವ' ಚಿತ್ರದ ಮೂಲಕ ಹೀರೊ ಆಗಿ ಯುವ ರಾಜ್‌ಕುಮಾರ್ ಚಿತ್ರರಂಗಕ್ಕೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಗಿದೆ.
ಡಿಸೆಂಬರ್ 23ಕ್ಕೆ 'ಯುವ'
ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ರೊಮ್ಯಾಂಟಿಕ್ ಆಕ್ಷನ್ ಎಂಟರ್‌ಟೈನರ್ 'ಯುವ' ಸಿನಿಮಾ ನಿರ್ಮಾಣವಾಗುತ್ತಿದೆ. ಯುವ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಟೀಸರ್ ಸೂಪರ್ ಹಿಟ್ ಆಗಿದೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಇನ್ನು ಯುವ ಚಿಕ್ಕಪ್ಪನ ರೀತಿ ಆಕ್ಷನ್ ಹೀರೊ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಡಿಸೆಂಬರ್ 23ಕ್ಕೆ 'ಯುವ' ಚಿತ್ರ ರಿಲೀಸ್ ಮಾಡೋದಾಗಿ ಹೊಂಬಾಳೆ ಸಂಸ್ಥೆ ಈಗಾಗಲೇ ಘೋಷಿಸಿದೆ.


Click it and Unblock the Notifications











